ಹುಂಬತನ

ಎಲ್ಲವನ್ನೂ ಗೆಲ್ಲುವೆನೆಂಬ ಹುಂಬತನ,
ಮನುಜನಿಗೆ ಬಿಟ್ಟು ಇನ್ಯಾರಿಗಿದೆ?
ಚಿರಂಜೀವಿಯಾಗಿ ಉಳಿಯುವೆನೆಂಬ ಭ್ರಮೆ,
ಮನುಜನಿಗೆ ಬಿಟ್ಟು ಇನ್ಯಾರಿಗಿದೆ?

ಕಳ್ಳನಾದರೂ,
ಸುಳ್ಳನಾದರೂ,
ಕಾಲಕ್ಕೆ ತಕ್ಕಂತೆ
ಬಣ್ಣ ಬದಲಿಸುವ ಚಾತುರ್ಯ,
ಮನುಜನಿಗೆ ಬಿಟ್ಟು ಇನ್ಯಾರಿಗಿದೆ?
ತನ್ನದೇ ಸತ್ಯವೆಂದು
ಜಗವನ್ನೇ ಆಳುವ ದರ್ಪ,
ತನ್ನ ತಪ್ಪುಗಳನ್ನೂ
ಸಮರ್ಥಿಸಿಕೊಳ್ಳುವ ತರ್ಕ,
ಮನುಜನಿಗೆ ಬಿಟ್ಟು ಇನ್ಯಾರಿಗಿದೆ?

ಕೈಯಲ್ಲಿ ಅಧಿಕಾರವಿದ್ದಾಗ
ಮರೆಯುವನು ಮಾನವೀಯತೆಯ ಮೌಲ್ಯ;
ಕಾಲ ಚಕ್ರ ತಿರುಗಿದಾಗ
ಅರಿವಾಗುವುದು ಬದುಕಿನ ಸತ್ಯ!
ಆದರೂ ಅಹಂಕಾರಕ್ಕೆ ಕೊನೆಯಿಲ್ಲ,
ಆಸೆಗಳಿಗೆ ಮಿತಿಯಿಲ್ಲ;
ಎಲ್ಲವೂ ತನ್ನದೇ ಎಂಬ ಭ್ರಮೆಗೆ
ಮನುಜನಿಗಿಂತ ಮಿಗಿಲಾದ ಉದಾಹರಣೆ
ಇನ್ಯಾರಿಗಿದೆ?
           - ಮಾಧವ ಕೆ ಅಂಜಾರು 


Comments

Popular posts from this blog

ಬಂಟಾಯನ 2025

ಕೃತಕ ಬುದ್ಧಿಮತ್ತೆ- (Artificial Inteligence) ಮತ್ತು ಬುದ್ಧಿವಂತಿಕೆ.

ಕಿರಣವಾಗಿ