(ಲೇಖನ 83- ಸಮಯ)ಸಮಸ್ಯೆಗಳ ನಡುವೆ ನಮಗಾಗಿ ನಮ್ಮದೇ ಸಮಯವನ್ನು ಉಪಯೋಗಿಸಿಕೊಳ್ಳಲು ಪ್ರಯತ್ನ ಮಾಡಬೇಕು

 (ಲೇಖನ 83- ಸಮಯ)

 ಎಲ್ಲಾ ಓದುಗರಿಗೆ ನಮಸ್ಕಾರಗಳು, ಸಮಯ ಬಂದಾಗ ಎಲ್ಲವೂ ಸರಿಯಾಗುತ್ತದೆ ಎಂಬುದನ್ನು ನಾವೆಲ್ಲರೂ  ಕೆಲವು ಕ್ಷಣಗಳಲ್ಲಿ ಹೇಳುವುದಿದೆ, ಆದರೆ ಇವತ್ತಿನ ಲೇಖನದಲ್ಲಿ ಬರುವ ಸಮಯಕ್ಕಿಂತ  ಈಗಿರುವ(ವರ್ತಮಾನ )ಸಮಯಕ್ಕೆ ನಾವೆಷ್ಟು ಮೌಲ್ಯ ಕೊಟ್ಟಿರುತ್ತೇವೆ ಎಂಬುವುದನ್ನು ಗಮನಿಸಬೇಕಾದ ವಿಷಯ.ಭೂತ, ವರ್ತಮಾನ, ಭವಿಷ್ಯತ್ಕಾಲದಲ್ಲಿಯೂ ಸಮಯವನ್ನು ಯಾವ ರೀತಿಯಲ್ಲಿ ಉಪಯೋಗಿಸಿಕೊಂಡು ಬದುಕಿರುತ್ತೇವೆಯೋ ಅದರಂತೆ ನಮ್ಮ ಜೀವನದ ಸಮಯವನ್ನು ಕಳೆದುಕೊಳ್ಳುತ್ತಾ ಇರುತ್ತೇವೆ.



      ಈಗಿನ ಸಮಯ ಮತ್ತೆ ಸಿಗದು, ಕಳೆದ ಸಮಯ ಮತ್ತೆ ಬರದು, ಬರುವ ಸಮಯ ನಮಗೆ ತಿಳಿಯದು. Precious time (ಅತ್ಯಮೂಲ್ಯ ಸಮಯ) ನಮ್ಮ ಜೀವನದಲ್ಲಿ ಮತ್ತೆ ಮತ್ತೆ ಬರದು. ಅವಕಾಶ - ಸಮಯ ಇವೆರಡೂ ಒಂದು ನಾಣ್ಯದ ಮುಖದಂತೆ. ಯಾವುದೇ ಕೆಲಸವನ್ನು ಸಾಧಿಸಲು ಅವಶ್ಯವಾಗಿ ಸಮಯ ಮತ್ತು ಅವಕಾಶಗಳು ಸರಿಸಮನಾಗಿ ಸೇರಿ ಬಂದಾಗ ಸಾಧನೆಎಂಬ ಮೆಟ್ಟಿಲನ್ನು ಏರಲು ಸಾಧ್ಯ. ಕೆಲವೊಮ್ಮೆ ನಮ್ಮ ಜೀವನದಲ್ಲಿ ಬರುವ ಅವಕಾಶಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸದೆ, ಕಳೆದು ಹೋದ ನಂತರ ಪಶ್ಚಾತಾಪಪಡುವ ಅದೆಷ್ಟೋ ಉದಾಹರಣೆಗಳು. ಸರಿಯಾದ ಸಮಯಕ್ಕೆ ಸರಿಯಾದ ನಿರ್ಧಾರ ನಮ್ಮನ್ನು ಮೆಲ್ಲೆತ್ತಬಹುದು.

   ಸಮಸ್ಯೆಗಳ ನಡುವೆ ನಮಗಾಗಿ ನಮ್ಮದೇ ಸಮಯವನ್ನು ಉಪಯೋಗಿಸಿಕೊಳ್ಳಲು ಪ್ರಯತ್ನ ಮಾಡಬೇಕು, ನಿಮ್ಮ ಉದ್ದಾರ, ಸಂತೋಷ, ಅವನತಿ, ಜಗಳ, ಕೋಪ, ಶಾಪ, ಪಾಪ, ಕರ್ಮಗಳಿಗೂ ಉಪಯೋಗಿಸುವ ಅತ್ಯಮೂಲ್ಯ ಸಮಯ ಮತ್ತೆ ಹಿಂತಿರುಗಿ ಬರದು. ಮತ್ಸರ, ಅಹಂಕಾರ, ಸ್ವಾರ್ಥಕ್ಕೆ ಉಪಯೋಗಿಸುವ ಸಮಯವೂ ಭವಿಷ್ಯದ ದಿನಕ್ಕೆ ನಾವು ಕಟ್ಟುವ ಗೋಪುರ. ಅದರರ್ಥ ನಮ್ಮ ಜೀವನದಲ್ಲಿ ನಮ್ಮ ಸಮಯವನ್ನು ಒಳಿತಿಗಾಗಿ ಉಪಯೋಗಿಸಿಕೊಂಡಾಗ ಅಲ್ಪ ಸಮಯ ಬದುಕಿದರೂ ಜೀವನ ಸಾರ್ಥಕವಾಗಬಹುದು, ಇಲ್ಲವಾದಲ್ಲಿ ಜೀವನವೇ ಹೊರೆಯಾಗಬಹುದು.

      ಇಂದು -ನಾನು, ನನ್ನಿಂದ, ನಾನೇ ಎಂಬ ವಿಚಾರಕ್ಕೆ ಕೆಳೆಯುವ ಸಮಯ, ನಾಳೆ - ನಾನು ನನಗಾಗಿ ನನ್ನಿಂದಲೇ ಆದ ಗೋರಿ ಎಂಬ ಚಿಂತೆಯಲ್ಲಿ ಬೀಳುವ ಸಮಯಕ್ಕೆ ಹಾದಿಯಾಗುತ್ತದೆ. ಪ್ರತೀ ಮಾನವನು ತಾನು ಮಾಡುತ್ತಿರುವ ಪ್ರತೀ ಕರ್ಮಕ್ಕೂ ತಾನೇ ಸರದಾರನಾಗುತ್ತಾನೆ. ಸಮಯ ಬಂದಾಗ ಆ ಸಮಯದಲ್ಲಿ ಉಪಯೋಗಿಸಿದ ಸಮಯವನ್ನು ಭವಿಷ್ಯದಲ್ಲಿ ಕರ್ಮವನ್ನು ತೊಳೆಯಲು ಉಪಯೋಗಿಸುತ್ತಾನೆ. ತಂದೆಯಾದವನು ಮಕ್ಕಳಿಗೆ ಸಂಸ್ಕಾರ ಧೈರ್ಯವನ್ನು ಹೇಳಿಕೊಡಲು ಉಪಯೋಗಿಸಿದ  ಸಮಯ, ಮಕ್ಕಳ ಭವಿಷ್ಯಕ್ಕೆ ಉತ್ತಮ ದಾರಿಯನ್ನು ತೋರಿಸುತ್ತದೆ. ಅದೇ ಪೋಷಕರು ತನ್ನ ಮಕ್ಕಳಿಗೆ ನೀಡಿರುವ ಸ್ವಾರ್ಥ, ಕೃತ್ಯ, ಅತಿಯಾಸೆ, ಬರುವ ದಿನಗಳಲ್ಲಿ ಕಾಣುವ ನಿಜವಾದ ಫಲಿತಾಂಶ.

       ಯಾರೇ ಆಗಲಿ, ನಿಮ್ಮ ಸಮಯವನ್ನು ಆದಷ್ಟು ಒಳಿತಿಗಾಗಿ ಉಪಯೋಗಿಸಿ, ನಿಮ್ಮ ಸಮಯವನ್ನು ಅಲ್ಪ ಪರೋಪಕಾರ, ಸಂತೋಷ, ನಗು, ಪ್ರಯತ್ನ, ಪ್ರಯಾಣ, ಮಕ್ಕಳು, ಸಂಸಾರ, ಪೋಷಕರ ಸೇವೆ, ಸಮಾಜ ಸೇವೆ ಹೀಗೆ ಹತ್ತು ಹಲವಾರು ಉತ್ತಮವಾದ ಕೆಲಸಕ್ಕೆ ಮೀಸಲಿಡಲು ಪ್ರಯತ್ನಿಸಿ. ಅದು ಬಿಟ್ಟು, ಕಾಳೆಯುವ, ಮೋಸ ಮಾಡುವ, ಹೊಟ್ಟೆಕಿಚ್ಚು, ಮತ್ಸರ, ದುಷ್ಟಕೃತ್ಯ, ಇನ್ನೊಬ್ಬರ ಅವನತಿಗೆ ಉಪಯೋಗಿಸುವ  ಅತ್ಯಮೂಲ್ಯ ಸಮಯ ಕಳೆದು ಹೋಗುತ್ತದೆ ಹೊರತು ಮತ್ತೆ ಬಾರದು.

       ಅಂದು ಮಾಡಿದ ಒಳಿತಿನ ಕೆಲಸ ಇಂದು ನಾಳೆ ಅನುಭವಿಸಿ ಸಾಯಬಹುದು, ಅಂದು ಮಾಡಿದ ಪಾಪ ಕರ್ಮ ಇಂದು, ನಾಳೆ ಅನುಭವಿಸಿ ನರಳಿ ಹುಳಬಿದ್ದು ನೀರಿಲ್ಲದೇ ಅನಾಥ ಶವವಾಗಿ ಕೊಳೆತು ಹೋಗಲೂ ಬಹುದು. ಪಾಪದ ಗಂಟು ಪರಲೋಕಕ್ಕೆ ನಂಟು. ಸತ್ಕಾರ್ಯದ ಗಂಟು ಸ್ವರ್ಗದ ನಂಟು.

   ಈ ಲೇಖನ ನನ್ನ ಪ್ರೀತಿಯ ಗೆಳೆಯನಿಗೆ ಅರ್ಪಿಸುತ್ತ, ನಿಮಗೆಲ್ಲರಿಗೂ ಶುಭ ಸಮಯ ಸಿಗಲೆಂಬ ಹಾರೈಕೆಯೊಂದಿಗೆ.

                            ✍️Madhav. K. Anjar.

Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

( ಲೇಖನ -122) ಭೂ - ಕೈಲಾಸ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.