ಲೇಖನ -84, ಹಸಿರು - ಉಸಿರು ನಿಲ್ಲಿಸಿದ ನೇತ್ರಾವತಿ ನದಿ

 (ಲೇಖನ -84, ಹಸಿರು - ಉಸಿರು ನಿಲ್ಲಿಸಿದ ನೇತ್ರಾವತಿ ನದಿ )

         ಕಾಡನ್ನು ಕಡಿದು ನದಿಯ ದಿಕ್ಕು ತಪ್ಪಿಸಿ ನೀರಿನ ಅಭಾವವನ್ನೇ ಹೆಚ್ಚಿಸಿದ ಯೋಜನೆ..,! ಪಶ್ಚಿಮ ಘಟ್ಟವನ್ನು ಮುಟ್ಟಬೇಡಿ, ಮುಂದಿನ ದಿನಗಳಲ್ಲಿ ಬಹಳಷ್ಟು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ, ನೀರು, ಹಸಿರು, ಉಸಿರು ಎಲ್ಲವದಕ್ಕೂ ಪರಿತಪಿಸುವ ಕಾಲ ಬರುತ್ತದೆ ಎಂಬ ಮಾತನ್ನು ಸಾವಿರಾರು ಬಾರಿ ಉತ್ತಮ ತಜ್ಞರು ಹೇಳಿಕೆಗಳನ್ನು ಕೊಟ್ಟಿದ್ದರೂ ಯಾವುದನ್ನೂ ಲೆಕ್ಕಿಸದೇ ಹಣವೆಂಬ ಆಸೆಗೆ ಒಳಗಾಗಿ ಪ್ರಕೃತಿಯನ್ನು ನಾಶ ಮಾಡಿ ಸಾವಿರಾರು ಕೋಟಿಯ ಯೋಜನೆಯನ್ನು ತಂದು ವನ,ಪ್ರಾಣಿ, ಪಕ್ಷಿ ಸಂಕುಲವನ್ನೇ ನಾಶ ಮಾಡಿ ತನ್ನ ತಿಜೋರಿಯನ್ನು ತುಂಬಿಸಿ ಬಾಯಿಗೂ ಗುದಕ್ಕೂ ಹಣದ ಕಂತೆ ತುರುಕಿಸಿ ಕುಳಿತುಕೊಂಡು ಎಸಿ ಕಾರಿನಲ್ಲಿ ತಿರುಗುತ್ತಿರುವ ಅಧಿಕಾರಿಗಳ ಘನ ಕಾರ್ಯಕ್ಕೆ ಏನೂ ತಪ್ಪು ಮಾಡದ ಸಾಮಾನ್ಯ ಪ್ರಜೆಗಳು, ಪ್ರಾಣಿಗಳು, ಪಕ್ಷಿ ಸಂಕುಲ, ಪ್ರಕೃತಿ ಎಲ್ಲವು ನಾಶದ ಹಾದಿ ಹಿಡಿಯುತ್ತಿದೆ.



            ಅಭಿವೃದ್ಧಿಯ ಹರಿಕಾರ, ಧರ್ಮ ರಕ್ಷಕ, ನಮ್ಮದೇ ಪಕ್ಷ ಗೆಲ್ಲಲಿ ಹೇಳುವ ಕಾರ್ಯಕರ್ತರು,ಅಧಿಕಾರಿಗಳು, ಅನ್ಪಡ್ ನೇತಾರರು ದಿನಬೆಳಗಾದರೆ ಬಿಳಿ ಅಂಗಿಯ ಮೊರೆ ಹೋಗಿ ಅಲ್ಲಲ್ಲಿ ಬಿಟ್ಟಿಪತ್ರ ಹಂಚುವಾಗ ಭೂಮಿಯ ಚಿತ್ರಣವನ್ನೇ ಬದಲಾಯಿಸುವ ಜನಪ್ರತಿನಿಧಿಗಳ ಜೊತೆಗೆ ಸೇರಿ ನಡೆಸುವ ಬಲಾತ್ಕಾರದ ಯೋಜನೆಗೆ ತುಪ್ಪ ಸುರಿದು ನೆಕ್ಕಿದ ಪರಿಣಾಮ ಇಂದು ಮಂಗಳೂರು, ಉಡುಪಿ, ಕಾರ್ಕಳ ಮುಂತಾದ ಕಡೆಗಳಿಗೆ ಒಂದು ತೊಟ್ಟು ನೀರಿಲ್ಲದಂತೆ ಮಾಡಿದ ಪುಣ್ಯ ಕಾರ್ಯಕ್ಕೆ ಯಾವ ಪುರಸ್ಕಾರ ಕೊಟ್ಟರೂ ಸಾಲದು!

      ಬರೇ ಘೋಷಣೆಗಳನ್ನು ಕೂಗಿ ಮನೆ ಸೇರುವ ವಿದ್ಯಾವಂತ ಅವಿದ್ಯಾವಂತ ಜನರು ಅಲ್ಪವಾದರೂ ಪ್ರಕೃತಿಯ ಚಿಂತನೆ ಮಾಡುತಿದ್ದರೆ ಇಂದು 40-45 ಡಿಗ್ರಿ ತಾಪಮಾನ ಎದುರಿಸಬೇಕಾಗಿ ಇರಲಿಲ್ಲ, ಇದ್ದ ಅಲ್ಪ ಸ್ವಲ್ಪ ಕಾಡನ್ನು ಸಂಪೂರ್ಣವಾಗಿ ನಾಶ ಮಾಡಿ ದೊಡ್ಡ ದೊಡ್ಡ ಬಂಗಲೆಯೊಳಗೆ AC ಹಾಕಿ ಕುಳಿತುಕೊಂಡು ಕುಡಿಯಲು ನೀರಿಲ್ಲದೆ AC ವೇಸ್ಟ್ ನೀರನ್ನು ಕುಡಿಯುವ ಮಟ್ಟಿಗೆ ತಲುಪಿದ ನಮ್ಮ ಅಭಿವೃದ್ದಿ. ದೊಡ್ಡ ದೊಡ್ಡ ಭಾಷಣ ಮಾಡುವಾಗ ಬಿಸ್ಲೇರಿ ನೀರು ಕುಡಿದು, ಅತೀ ಬಾಯಾರಿಕೆ ಆದಾಗ ಬೀರನ್ನು ಕುಡಿದು ಅಲ್ಲಲ್ಲಿ ತೂರುವ ಅವಿವೇಕಿ ನಾಯಕರುಗಳ ದೊಡ್ಡ ಸಾಧನೆ ನೇತ್ರಾವತಿಯ ಉಸಿರು ನಿಲ್ಲಿಸಿದ ಕಾರ್ಯಕ್ರಮ. ಏನು ಹೇಳಿದರೇನು ಪ್ರಯೋಜನ? ನನ್ನ ಮನೆಗೆ ಪೈಪಲ್ಲಿ ನೀರು ಬಂದರೆ ಸಾಕು ಎಂದು ಹೇಳುತ್ತಿರುವ ಜನರೇ, ಸುಮ್ಮನಿದ್ದರೆ ನಾಳೆ ನಿಮ್ಮ ಮನೆಯೊಳಗೆ ಬರೇ ಗಾಳಿ ಮಾತ್ರ ಬಂದು ಗಾಳಿಯಲ್ಲಿ ನೀರನ್ನು ಶುದ್ದಿಕರಿಸಲು ಹೊಸ ಯೋಜನೆ ತರುತ್ತೇವೆ ಎಂದು ಹೇಳುವ ಹೊಸ ನಾಯಕರು ಬಂದಾಗ ಮಣೆ ಹಾಕಿ ಊಟದೊಂದಿಗೆ ಹೊಸ ನೋಟನ್ನು ಪಡೆದುಕೊಳ್ಳಲು ಹೋಗಬೇಡಿ, ಹಾಗೆ ಮಾಡಿದಲ್ಲಿ ಇದಕ್ಕಿಂತ್ತಲು ಭಯಾನಕ ದಿನಗಳನ್ನು ಎದುರಿಸಲು ತಯಾರಾಗಬೇಕಾಗುತ್ತದೆ.

        ಕಾಡು ಉಳಿಸಿ, ನಾಡು ಬೆಳೆಸಿ, ನದಿ ಉಳಿಸಿ, ಜೀವ ಉಳಿಸಿ, ಪ್ರಕೃತಿ ನಾಶಮಾಡಿ ಅಭಿವೃದ್ಧಿ ನಮಗೆ ಬೇಡ, ಒಂದು ಮರವನ್ನು ಕಡಿದರೆ 10 ಗಿಡವನ್ನು ಮರವಾಗುವವರೆಗೂ ಪೋಷಿಶಿಸುವ ಯೋಜನೆ ಬರಲಿ, ಸರ್ಕಾರಿ ಅಧಿಕಾರಿಗಳು ಸೇರಿ ನಡೆಸುವ ಭೂಮಿಯ ಅತ್ಯಾಚಾರಕ್ಕೆ ಶಿಕ್ಷೆಯನ್ನು ಅನುಭವಿಸಲಿ, ಕಾಸಿಗಾಗಿ ಮರ ಸಾಗಿಸಿ ನೆಲ ವನ್ನು ವಿರೂಪಗೊಳಿಸುವ ಯೋಜನೆಗಳಿಗೆ ಪೂರ್ಣ ವಿರಾಮವಿರಲಿ.  ಜಲ ಸಂಪತ್ತು ಉಳಿಸಲು ನಮ್ಮ ನಿಮ್ಮೆಲ್ಲರ ಕಿರುಪ್ರಯತ್ನವಿರಲಿ, ಇಂದಿನ, ಮುಂದಿನ ಜನಾಂಗಕ್ಕೆ ಅಲ್ಪವಾದರೂ ಉಸಿರಾಡಲು ಬದುಕಲು ಬಿಡಿ. ಪಶ್ಚಿಮ ಘಟ್ಟ, ನಮ್ಮೂರಿನ ಅಲ್ಪ ಸ್ವಲ್ಪ ಕಾಡನ್ನು ಇನ್ನಾದರೂ ಉಳಿಸಲು ಪ್ರಯತ್ನಿಸೋಣ. 😢

            ✍️Madhav. K. Anjar 










Comments

Popular posts from this blog

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ

ಭಾರತೀಯ ರಾಯಭಾರಿ ಕಛೇರಿ ಕುವೈಟ್ ನಲ್ಲಿ, ಹುಲಿಗಳ ಆರ್ಭಟ