Posts

Showing posts from December, 2022

ಲೇಖನ -80)- ಕ್ಷಮೆ ಇರಲಿ - ಕ್ಷಮಿಸಿ ಬಿಡು ನನ್ನನು , ಈ ಹಿಂದೆ ನಾನು ಮಾಡಿರುವ ಪ್ರತಿ ತಪ್ಪಿಗೆ ಕ್ಷಮೆಯಿರಲಿ.

Image
 ( ಲೇಖನ -80)- ಕ್ಷಮೆ ಇರಲಿ -  ಕ್ಷಮಿಸಿ ಬಿಡು ನನ್ನನು , ಈ ಹಿಂದೆ  ನಾನು ಮಾಡಿರುವ ಪ್ರತಿ ತಪ್ಪಿಗೆ ಕ್ಷಮೆಯಿರಲಿ. ನಾನು ನಿನ್ನ ಹೀಯಾಳಿಸಿರಬಹುದು, ನಾನು ನಿನನ್ನು ಬೈದಿರಬಹುದು, ನಾನು ನಿನ್ನನ್ನು ಹೊಡೆದಿರಬಹುದು, ನಾನು ನಿನಗೆ ಸಂತೋಷ ಕೊಡದಿರಬಹುದು, ಗೊತ್ತಿಲ್ಲದೆ ಮಾಡಿದ ಪ್ರತಿಯೊಂದು ತಪ್ಪಿಗೆ ನಿನ್ನಲ್ಲಿ ಕ್ಷಮೆ ಕೇಳುವೆ, ಎನ್ನ ಗುರುವೇ, ಎನ್ನ ತಂದೆ ತಾಯಿ, ಬಂದು ಬಳಗ, ಸಂಬಂಧಿಗಳೇ, ಮತ್ತು ನನ್ನ ಹೆಂಡತಿ ಮಕ್ಕಳೇ. ಸಹ ಕೆಲಸಾಗರರೇ, ಎನ್ನ ಶ್ರಮಕ್ಕೆ ಬೆಲೆ ಕೊಡುವ ನೀವುಗಳೇ ನನ್ನಿಂದ ನಿಮಗೆ ನೋವಾಗಿದ್ದರೆ ಕ್ಷಮಿಸಿಬಿಡಿ. ಈ ಪ್ರಪಂಚದಲ್ಲಿ ಬದುಕಿರುವ ಪ್ರತೀ ಜೀವಿಗಳೇ, ನನ್ನನು ಕ್ಷಮಿಸು. ಮಾನವನಾದ ಎನಗೆ ದ್ವೇಷ, ಮೋಹ, ಮದ ಮತ್ಸರ, ನಗು, ಗೌರವ, ಸೌಜನ್ಯ, ಮರ್ಯಾದೆ, ಸಹಾಯ, ಪ್ರೀತಿ, ಪ್ರೇಮ ಎಲ್ಲವನ್ನು ಕಲಿಸಿದ್ದಾರೆ, ನನ್ನ ಇತಿಮಿತಿಯನ್ನು ದಾಟಿ ವ್ಯವಹರಿಸಿದ್ದರೆ ದಯವಿಟ್ಟು ಕ್ಷಮಿಸಿಬಿಡು.          ನನ್ನ ವಯಸ್ಸು ಇದ್ದರೆ ಇರಬಹುದು 60 70 80, ಅದಕ್ಕಿಂತಲೂ ಮುಂಚೆ ನಾನು ಇಹಲೋಕ ತ್ಯಜಿಸಬಹುದು, ಭವಿಷ್ಯವನ್ನು ಅರಿಯದ ನಾನು ಈವರೆಗೆ ಇರುವುದೇ ನಿಮ್ಮೆಲ್ಲರ ಆಶೀರ್ವಾದದಿಂದ, ದೇವರು ನೀಡಿರುವ ಆಯುಷ್ಯದಿಂದ, ಮತ್ತು ಆರೋಗ್ಯದಿಂದ. ನನ್ನ ಬದುಕಿನಲ್ಲಿ ಆಸೆ ಆಕಾಂಕ್ಷೆಗಳು ಜೀವಂತವಾಗಿದೆ, ಆಸೆ ಆಕಾಂಕ್ಷೆಗಳಿಗೆ  ನಿಮ್ಮನ್ನು ಬಲಿಪಶು ಮಾಡಲು ನನ್ನ ನನ್ನ ಮನಸು ಒಪ್ಪದು, ಆಡಂಬರದ ಜೀವನ ನನ್ನ ಆಯ್ಕೆ ಅಲ್ಲ, ಅನ್ಯಾಯ ಸಂಪಾದನೆ

(ಲೇಖನ 79 ) ಮಮತೆಯ ತೊಟ್ಟಿಲು

Image
 (ಲೇಖನ 79 ) ಮಮತೆಯ ತೊಟ್ಟಿಲು     ತಾಯಿಯು ಮಕ್ಕಳ ಮೇಲೆ ತೋರಿಸುವ ಪ್ರೀತಿ ಮಮತೆಯಾದರೆ, ಆ ಪ್ರೀತಿಗೆ ಬೆಲೆ ಕಟ್ಟುವ ಸಾಧ್ಯತೆ ಯಾವ ಮಕ್ಕಳಿಗೂ ಬರದು. ಮಮತೆ ಅನ್ನೋದು ದೊಡ್ಡವರು ತನಗಿಂತ ಚಿಕ್ಕವರಿಗೆ ತೋರುವ ಪ್ರೀತಿ ವಾತ್ಸಲ್ಯ. ಮಕ್ಕಳನ್ನು ಹೊಂದಿರುವ ಪ್ರತಿ ತಾಯಿಯ ಪ್ರೀತಿ, ಮಮಕಾರ, ಆರೈಕೆ, ಹಾರೈಕೆ, ವರ್ಣಿಸಲು ಸಾಧ್ಯವಿಲ್ಲ. ತನ್ನ ಮಕ್ಕಳಿಗಾಗಿ ತಾಯಿ ಪಡುವ ಕಷ್ಟಗಳು ಒಂದೆಡೆಯಾದರೆ, ಜವಾಬ್ದಾರಿಯುತ ಅಪ್ಪ ಸಂಸಾರಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡಿ ಬದುಕುತ್ತಿರುತ್ತಾನೆ.         ಮಕ್ಕಳು ಎಲ್ಲಿದ್ದರೂ ಕ್ಷೇಮವಾಗಿರಲಿ ಆ ದೇವರು ಸದಾಕಾಲ ಕಾಪಾಡುತ್ತಿರಲಿ ನನಗೆ ಕಷ್ಟವಾದರೂ ಪರವಾಗಿಲ್ಲ ನನ್ನ ಮಕ್ಕಳಿಗೆ ಕಿಂಚಿತ್ತು ಕಷ್ಟವನ್ನು ಕೊಡಬೇಡ ದೇವರೇ ಎನ್ನುತ್ತಾ, ಸದಾ ಹಾರೈಸುವ ಜೀವ ತಾಯಿಯೊಬ್ಬಳೇ. ಮಕ್ಕಳಿಗೆ ಏನೇ ಕಷ್ಟ ಬಂದರೂ  ಅದನ್ನು ಎದುರಿಸುವ ಶಕ್ತಿಯನ್ನು ಕೊಡುತ್ತಿರು, ಭಗವಂತ ನೀನೆ ಅವರನ್ನು ಕಾಪಾಡುತ್ತಿರು ಎಂದು ಮನದೊಳಗೆ ಹಾರೈಸುವ ಪೋಷಕರು . ತಂದೆ ತಾಯಿಯ ಮತ್ತು ಮಕ್ಕಳ ನಡುವಿನ ಬಾಂಧವ್ಯ,ಸಂಬಂಧ ವರ್ಣಿಸಲಸಾಧ್ಯ.  ನಮ್ಮ ಜೀವನದಲ್ಲಿ ತಂದೆ ತಾಯಿ ನೀಡಿದ ಪ್ರೀತಿ ಎಂದಿಗೂ ಮರೆಯಲು ಸಾಧ್ಯವೇ ಇಲ್ಲ. ನಮ್ಮ ಬಾಲ್ಯತನದಿಂದ, ನಮ್ಮ ಮುಪ್ಪಿನ ಜೀವನ ಮುಗಿದು ಸಾಯುವವರೆಗೂ ತಂದೆ ತಾಯಿಯ ಪ್ರೀತಿ ಸದಾ ನಮ್ಮ ಕಣ್ಣ ಮುಂದೆ ಇರುತ್ತದೆ.        ಮಗಾ, ಮಗಳೇ ಬೆಳಗಾಯ್ತು ಎದ್ದೇಳು, ಕೈ ಕಾಲು ಮುಖ ತೊಳೆದು ತಿಂಡಿ ತಿನ್ನು ಶಾಲೆಗೆ ಹೋ

(ಲೇಖನ 78 ) ಅರಣ್ಯ ನಾಶ = ನಮ್ಮೆಲ್ಲರ ನಾಶ. ಎಗ್ಗಿಲ್ಲದೇ ನಡೆಯುತ್ತಿದೆ ಅರಣ್ಯ ಸಂಪತ್ತಿನ ಲೂಟಿ

Image
 (ಲೇಖನ 78 ) ಅರಣ್ಯ ನಾಶ = ನಮ್ಮೆಲ್ಲರ ನಾಶ. ಎಗ್ಗಿಲ್ಲದೇ ನಡೆಯುತ್ತಿದೆ ಅರಣ್ಯ ಸಂಪತ್ತಿನ ಲೂಟಿ, ಪ್ರಕೃತಿಯ  ಅತ್ಯಾಚಾರ, ಕಾಡನ್ನು ನಾಶಪಡಿಸಿ, ಪಟ್ಟಣವನ್ನಾಗಿ ಪರಿವರ್ತಿಸಲು ಪ್ರಭಾವಿ ವ್ಯಕ್ತಿಗಳ ಮಹಾಕೂಡುಗೆ. ಅಗತ್ಯವಿಲ್ಲದ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದು, ಹೆಕ್ಟೇರುಗಟ್ಟಲೆ ದಟ್ಟಾರಣ್ಯವನ್ನು ಅಗೆದು, ಸುಂದರಮಯ ವಾದ  ಬೆಟ್ಟಗುಡ್ಡಗಳನ್ನು ಸಮತಟ್ಟ ಮಾಡಿ  ಕಾನೂನಿನ  ಲೋಪದೋಷಗಳನ್ನು ದುರುಪಯೋಗ ಮಾಡಿಕೊಂಡು, ಕಾಡಿನ ರಕ್ಷಕರೆಲ್ಲರೂ ಭಕ್ಷಕರಾಗಿ ಮಾರ್ಪಟ್ಟು ತುಂಬಾ ವ್ಯವಸ್ಥಿತವಾಗಿ ಹಣದ ಕಂತೆಯನ್ನು ಕಟ್ಟಿಕೊಂಡು ಐಷಾರಾಮಿ ಬದುಕು ಮಾಡುತ್ತಿರುವ ಕೆಲವರು ಭವಿಷ್ಯದ ಬಗ್ಗೆ ಚಿಂತೆ ಇಲ್ಲದೆ ಬದುಕುತ್ತಿದ್ದಾರೆ. ಈಗಾಗಲೇ  ಹಲವು ರೀತಿಯ ಪ್ರಕೃತಿ ವಿಕೋಪಗಳನ್ನು ಎದುರಿಸಲಾಗದೆ  ನಮ್ಮ ವ್ಯವಸ್ಥೆಗಳೇ ಮಾಡಿ ಕೊಟ್ಟ ಗುಂಡಿಗೆ ಬಿದ್ದು ಸರ್ವನಾಶವಾಗುತ್ತಿದ್ದಾರೆ. ಇತ್ತೀಚೆಗೆ  ಸರ್ಕಾರಿ ಜಾಗದ ಅಕ್ರಮ ಸಕ್ರಮಕ್ಕೆ ಅರ್ಜಿಯನ್ನು ಕರೆದಾಗ, ರಾಜಕೀಯ ಶಕ್ತಿ, ರಾಜಕೀಯ ಚೇಲಾಗಳು ತನ್ನ ಶಕ್ತಿಯನ್ನು ದಟ್ಟಾರಣ್ಯ  ಕಡಿದು  ಕೃಷಿಯೆಂಬ ಸುಳ್ಳು ಕಾರಣ ಕೊಟ್ಟು, ದೊಡ್ಡ ದೊಡ್ಡ ಮರಗಳನ್ನು ನೆಲಕ್ಕುರುಳಿಸಿ ಜಾಗವನ್ನು ಭಕ್ಷಿಸುವ  ಕೆಲಸಕ್ಕೆ ಕೈ ಹಾಕುತ್ತಿದ್ದಾರೆ. ಕೆಲವು ಅಪ್ರಾಮಾಣಿಕ  ಅಧಿಕಾರಿಗಳು, ಗ್ರಾಮಸೇವಕರು, ಗ್ರಾಮ ಲೆಕ್ಕಾಧಿಕಾರಿ, ಅಧ್ಯಕ್ಷರು ಸದಸ್ಯರು, ಅರಣ್ಯ ಅಧಿಕಾರಿಗಳು, ಸಂಪೂರ್ಣ ವ್ಯವಸ್ಥೆ ಕೈ ಜೋಡಿಸಿಕೊಂಡು  ತನಗೆ ಬರುವ ಪಾಲನ್

ಕಾಪಾಡುವೆ ಜೀವ ಕೊಟ್ಟು

ಕಣ್ಣಲ್ಲಿ ಕಣ್ಣನಿಟ್ಟು ಮನಸಲ್ಲಿ ಮನಸನಿಟ್ಟು ಹೃದಯದೊಳಗೆ ನಿನ್ನನಿಟ್ಟು ಕಾಪಾಡುವೆ ಜೀವ ಕೊಟ್ಟು, ಪ್ರೀತಿಯಲಿ ತಲೆಯ ಸವರಿ ಪ್ರೇಮದಲಿ ಮುತ್ತನು ಕೊಟ್ಟು ಮೈಮರೆಯುವೆ ನನ್ನನು ಉಸಿರಾಗುವೆಯಾ? ಮಾತು ಕೊಟ್ಟು.            -Madhav. K. Anjar

ನಗುತಾ ನಿಂತಾಗ

ನೀ ನಗುತಾ ನಿಂತಾಗ ಸವಿ ಮಾತು ನುಡಿದಾಗ ಸೋತೆ...ನಾನಾಗ! ನಿನ್ನ ಕಣ್ಣಲೇನು ಮಾಯೆ ಎನ್ನ ಹೃದಯದೊಳು ನೀಯೇ  ಸನಿಹಕೆ ಬಾರೆಯ ತಡವೇತಕೆ ನೀನಿಗ! ಬಾಗಿಲನು ತೆರೆದಾಗ  ನಿನ್ನ ಮೊಗವ ಕಂಡಾಗ ಸೋತೆ.. ನಾನಾಗ! ಬೇಲೂರ ಶಿಲೆಯಂತೆ ನಿನ್ನ ಚೆಂದದಾಕಾರ ಶಿಲ್ಪಿಯೇ ನಾಚುವ ನಿನ್ನ ಆ ಸೌಂದರ್ಯಕೆ ಹೇಗಿರಲಿ ನಾನೀಗ!        ✍️Madhav. K. Anjar 

(ಲೇಖನ -76)ದಿನ ಬೆಳಗಾಗುತ್ತಿದ್ದಂತೆ, ಅಪೌಷ್ಟಿಕ ಆಹಾರದ ದಾಸರಾಗುತ್ತಿರುವ ಇಂದಿನ ಪೀಳಿಗೆ,

Image
(ಲೇಖನ -76) ದಿನ ಬೆಳಗಾಗುತ್ತಿದ್ದಂತೆ, ಅಪೌಷ್ಟಿಕ ಆಹಾರದ ದಾಸರಾಗುತ್ತಿರುವ ಇಂದಿನ ಪೀಳಿಗೆ, ಬಹಳಷ್ಟು ಬದಲಾವಣೆ ನಮ್ಮ ಆಹಾರ ಪದ್ಧತಿಯಲ್ಲಿ ಆಗಿ ಹೋಗಿದೆ. ಸುಲಭವಾಗಿ ಅಲ್ಪಪರಿಶ್ರಮ ಮತ್ತು ಸಮಯದಲ್ಲಿ ಸಿಗಲ್ಪಡುವ ಆಹಾರಕ್ಕೆ ಹೆಚ್ಚಿನವರು ಸೇರಿಕೊಳ್ಳುತ್ತಿದ್ದಾರೆ. ಇಂದಿನ ಕಾಲದಲ್ಲಿ ಹೆಚ್ಚಾಗಿ ಬಹಳಷ್ಟು ಜನರು ಸಮಯವೇ ಇಲ್ಲವೆಂದು ಹೇಳುತ್ತಾ, ಪಾಶ್ಚರೀಕರಿಸಿದ ಆಹಾರ ಪದಾರ್ಥಗಳು ತಂದು ತಿನ್ನುತ್ತಿದ್ದಾರೆ. ನಮ್ಮ ಬಾಲ್ಯದಲ್ಲಿ ಸೇವಿಸುತ್ತಿದ್ದ  ಆಹಾರ ಪದಾರ್ಥ ಬರ ಬರುತ್ತಾ ಮಾಯವಾಗುತ್ತಿದೆ. ಬೆಳಗೆದ್ದು ಇಡ್ಲಿ, ದೋಸೆ, ತಂಗಳನ್ನ, ಮೊಸರು, ಉಪ್ಪಿನಕಾಯಿ ಊಟ, ಮೀನು, ಮನೆಯಲ್ಲಿ ಸಾಕಿರುವ ಕೋಳಿ, ಮೊಲ, ಕಾಡುತ್ಪತ್ತಿಯಲ್ಲಿ ಸಿಗುತ್ತಿದ್ದ ಫಲವಸ್ತು, (ಹಲಸು, ಮಾವಿನಕಾಯಿ, ನೇರಳೆ, ಗೇರುಹಣ್ಣು, ಗೇರುಬೀಜ, ಹೆಬ್ಬಲಸು, ಸೀತಾಫಲ, ರಾಮ ಫಲ, ಮುಂತಾದವು ) ಹಾಗೆಯೇ ಸಸ್ಯಾಹಾರ, ತರಕಾರಿ, ಬಸಳೆ, ಅಲಸಂಡೆ, ಪಪ್ಪಾಯ, ಕುಂಬಳಕಾಯಿ, ಸೌತೆಕಾಯಿ, ಕಾಳು ಬೇಳೆ, ಎಲ್ಲವೂ ಹೆಚ್ಚಾಗಿ ಗದ್ದೆಯಲ್ಲಿ ಬೆಳೆಸಿ ತಾಜಾತನದಿಂದ ಕೂಡಿದ ಆಹಾರವನ್ನು ಸೇವಿಸುತಿದ್ದ ಕಾಲ. ಆರೋಗ್ಯ, ಆಯುಷ್ಯ, ತ್ವಚೆ, ಎಲ್ಲವೂ ಸರಿಯಾಗಿ ಇದ್ದ ಕಾಲ.         ಇಂದಿನ, ಆಹಾರ, ಬ್ರೆಡ್, ಬರ್ಗರ್, ಹಾಟ್ ಡಾಗ್, ಶವರ್ಮ, ಚೈನೀಸ್ ಫಾಸ್ಟ್ ಫುಡ್, ಕೆ. ಎಫ್. ಸಿ. ಪಿಜ್ಜಾ ಮುಂತಾದ ಆಹಾರವನ್ನು ಅತಿಯಾಗಿ ಸೇವಿಸಿ ಆರೋಗ್ಯ ಮತ್ತು ವಿಪರೀತ ಬೊಜ್ಜಿನೊಂದಿಗೆ ಜೀವನ ಕಳೆಯುವ ಸ್ಥಿತಿ. ಆಯುಷ್ಯ

ನಿನ್ನ ಸನ್ನೆ

ಮುಗ್ದ ಮೊಗದೊಳು ಆ ನಿನ್ನ ಸನ್ನೆಯು ಮಿಂಚಾಗಿ ಸೇರಿತೇನ್ನ ಹೃದಯದಾಳದೊಳು, ಆ ನಿನ್ನ ಕೆನ್ನೆಗೆ ಮುತ್ತಿಡಲೇ ನಾನು ಕಣ್ಣಿನ ನೋಟಕೆ ಸೋತೆನು ಇನ್ನೇನು? ನಿನ್ನ ನಗುವಿಗೆ ಚಿಂತೆಯು ಮರೆಯಾಯ್ತು ಮಗುವಿನಂತೆ ನಿನ್ನ ಮುದ್ದಾಡಲೇ ನಾನು ಬಾ ಎನ್ನ ಹತ್ತಿರ ರಾಣಿಯೇ ನೀನು ಉಸಿರಾಗಿ ಸೇರೆನ್ನ ಹೃದಯದ ಗೂಡಿನೋಳು.        - Madhav. k. Anjar