(ಲೇಖನ -24)ರಾಜಕೀಯ ಮತ್ತು ಭ್ರಷ್ಟಾಚಾರ

ರಾಜಕೀಯ ಮತ್ತು ಭ್ರಷ್ಟಾಚಾರ ಒಂದು ನಾಣ್ಯದ ಎರಡು ಮುಖಗಳೇ? ,


ಈ ಮಾತು ಎಲ್ಲರ ಮನಸಲ್ಲಿ ನಿಜವಾಗ್ಲೂ ತೋರಬಹುದು. ರಾಜಕೀಯವೆಂಬುದು ಪಿಡುಗಲ್ಲ, ಭ್ರಷ್ಟಾಚಾರವೆಂಬುದು ಕೂಡ ಪಿಡುಗಲ್ಲ. ಆದರೆ 90% ವಿವೇಕವಿಲ್ಲದಿರುವ ರಾಜಕೀಯ ನಾಯಕರು ಮತ್ತು ಕೈತುಂಬಾ ಸಂಬಳವಿದ್ದರೂ ಗಿಂಬಳ ಎಂಬ ಹೆಸರಲ್ಲಿ ಸಾರ್ವಜನಿಕರನ್ನು ಪೀಡಿಸುವ  ಸರಕಾರಿ ಉದ್ಯೋಗಿಗಳು ಹಣಕ್ಕಾಗಿ ಕೈ ಚಾಚಿ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಒಂದು ವ್ಯವಸ್ಥಿತ ಪಂಗಡ . ಇವೆಲ್ಲಾ ನೋಡುವಾಗ ನಿಜವಾಗಲೂ ಪ್ರತಿಯೊಂದು ಕ್ಷೇತ್ರದಲ್ಲಿ ಅಭಿವೃದ್ಧಿ ಅನ್ನೋದು ಮರೀಚಿಕೆಯಾಗುತ್ತಿದೆ. ರಾಜಕೀಯ ಮತ್ತು ಭ್ರಷ್ಟಾಚಾರ ಕಬ್ಬಿಣದ ಸಂಕೋಲೆಯಂತೆ, ಅವೆರಡು  ಒಂದಾಗಿ ಕೆಲಸ ಮಾಡಿದಾಗ ಸಾಮಾನ್ಯ ಜನರ ಪರಿಸ್ಥಿತಿ ಊಹಿಸಲು ಅಸಾಧ್ಯ. ನನ್ನ ಕಣ್ಣಾರೆ ಕಂಡ ಅದೆಷ್ಟು ನಿದರ್ಶನ, ಅದು ನೀವು ಕೂಡ ಅನುಭವಿಸಿರಬಹುದು. ಇಂದೂ ಅನುಭವಿಸುತ್ತಿರಬಹುದು!!

      ಒಂದೊಂದುಸಲ ನನಗನಿಸುತ್ತದೆ ನಿಜವಾಗಲೂ ನಮ್ಮ ವ್ಯವಸ್ಥೆಗಳ ಅವಶ್ಯಕತೆ ಸಾಮಾನ್ಯ ಜನರಿಗೆ ಉಪಯೋಗವಿದೆಯಾ? ನ್ಯಾಯಾಂಗ, ಕಾರ್ಯಂಗ, ಶಾಸಕಾಂಗದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ರಾಜಕೀಯ ಮತ್ತು ಭ್ರಷ್ಟಾಚಾರ ತನ್ನ ಪೌರುಷ ತೋರುತ್ತಲಿದೆ. ಅದಕ್ಕೆ ಕಾರಣ ನಮ್ಮಲಿರುವ ವಿದ್ಯಾವಂತರೆಂದು ಕರೆದುಕೊಳ್ಳುತ್ತಿರುವ ಅದೆಷ್ಟು ಅಧಿಕಾರಿಗಳು, ಅದೆಷ್ಟು ರಾಜಕೀಯ ನಾಯಕರು ದೇಶ, ಊರು, ವ್ಯವಸ್ಥೆ ಇದರ ಬಗ್ಗೆ ಅಲ್ಪವೂ ಕಾಳಜಿವಹಿಸದೆ ತನ್ನಿಷ್ಟ ನೆರವೇರಿಸಲು ಎಲ್ಲಾ ವ್ಯವಸ್ಥೆಯಲ್ಲಿ ಮೂಗು ತೂರಿಸಿ ಬಂಡವಾಳಗಳಿಸುವ ಕೇಂದ್ರಗಳಾಗಿ ಮಾರ್ಪಡುತ್ತಿದೆ. ಈ ಹಿಂದೆಯೂ ಇವತ್ತಿಗೂ ರಾಜಾರೋಷವಾಗಿ ನಡೆದಿರುವ ಅದೆಷ್ಟು ಭಷ್ಟಾಚಾರದ ಪ್ರಕರಣಗಳು ಒಂದಲ್ಲ ಒಂದು ರೀತಿಯಲ್ಲಿ ಪ್ರತಿಯೊಬ್ಬ ಪ್ರಜೆಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ತೊಂದರೆಗಳನ್ನು ತಂದುಕೊಟ್ಟಿದೆ. ಭ್ರಷ್ಟಾಚಾರದ ವಿರುದ್ಧ ದನಿ ಎತ್ತಿದವರ ಜೀವವನ್ನು ಬಲಿತೆಗೆದುಕೊಂಡ ಅದೆಷ್ಟು ಪ್ರಕರಣಗಳು ನಡೆದು ಹೋಗಿರಬಹುದು. ಭ್ರಷ್ಟಾಚಾರವೆಂಬ ಜಾಲದಲ್ಲಿ ಸಾಮಾನ್ಯ ಜನರು ತನಗರಿವಿಲ್ಲದಂತೆ  ಸಿಲುಕಿಕೊಂಡರೆ, ಅಧಿಕಾರಿಗಳು, ರಾಜಕೀಯ ನಾಯಕರು ತಮಗೆ ತಿಳಿದುಕೊಂಡೆ ಭ್ರಷ್ಟಾಚಾರವನ್ನು ಮಾಡುತ್ತಿರುತ್ತಾರೆ. ಈ ವಿಷಯಗಳನ್ನು ದಿನಾಲು ದಿನಪತ್ರಿಕೆ, ಟಿವಿ ಮಾಧ್ಯಮಗಳ ಮೂಲಕ ನಾವು ನೋಡಿ ಮರೆತುಬಿಡುತ್ತೇವೆ  ಮತ್ತು ಪ್ರಭಾವಶಾಲಿಗಳು ಸಾಮಾನ್ಯ ಜನರಿಗೆ  ಕಂಡಿತವಾಗಿ ತೊಂದರೆಗಳನ್ನು ಕೊಡುವ ಸಾಧ್ಯತೆಗಳು ಇರುವುದರಿಂದ ಭ್ರಷ್ಟಾಚಾರದ ವಿರುದ್ಧ ದನಿಯೆತ್ತುವವರು ಬಹಳ ವಿರಳ.

 ನನ್ನ ಜೀವನದಲ್ಲಿ, ಅಥವಾ ನಿಮ್ಮ ಜೀವನದಲ್ಲಿ ನೀವು ಕೂಡ ಇಂತಹ ಅನೇಕ ಘಟನೆಗಳನ್ನು ಎದುರಿಸಿ, ಅನುಭವಿಸುತ್ತಾ ಇರಬಹುದು. ಇತ್ತೀಚಿನ ದಿನಗಳಲ್ಲಿ ಅಥವಾ ಹಿಂದಿನ ದಿನಗಳಲ್ಲೂ ಎಲ್ಲಾ ವ್ಯವಸ್ಥೆಯಲ್ಲಿ ಕಾಂಚಾಣದ ಶಬ್ದ ನಿರಂತರವಾಗಿ ಇದ್ದೇ ಇದೆ. ಕೆಲವೊಂದು ಉದಾಹರಣೆಗಳು ಹೇಳುವುದಕ್ಕೆ ಬಹಳ ಅಸಹ್ಯವಾದರೂ ಇಲ್ಲಿ ಬರೆಯಬೇಕಾದ ಅನಿವಾರ್ಯತೆ ನನಗೆ ಆಗುತ್ತಿದೆ, ನಮ್ಮ ದೇಶದಲ್ಲಿ ಪ್ರಜ್ಞಾವಂತರ ಕೊರತೆ ಬಹಳಷ್ಟಿದೆ, ಸಮಾಜದ ಹಿತದೃಷ್ಟಿಯನ್ನು ನೋಡುವ ಜನನಾಯಕರು ಬಹಳ ವಿರಳವಾಗಿದ್ದಾರೆ. ಅಪ್ಪಿತಪ್ಪಿ ಒಂದಷ್ಟು ಜನ ಸದುದ್ದೇಶದಿಂದ ಸಮಾಜ ಬದಲಾವಣೆ ಆಗಬೇಕು, ನಮ್ಮ ವ್ಯವಸ್ಥೆಗಳು ಅತ್ಯಂತ ಉತ್ತಮ ಸ್ಥಿತಿಗೆ ಬರಬೇಕು ಮನೋಭಾವನೆಯೊಂದಿಗೆ, ಪ್ರಾಮಾಣಿಕವಾಗಿ ಕೆಲಸ ಮಾಡಿದರೂ, ಅವರನ್ನು ಮೆಟ್ಟಿನಿಲ್ಲಲು ಸಾವಿರಾರು ಭ್ರಷ್ಟಾಚಾರಿಗಳು, ಭ್ರಷ್ಟ ಅಧಿಕಾರಿಗಳು, ಭ್ರಷ್ಟ ನ್ಯಾಯಾಧೀಶರು, ಭ್ರಷ್ಟ ಪೊಲೀಸರು, ಭ್ರಷ್ಟ ನ್ಯಾಯವಾದಿಗಳು  ಎಲ್ಲರೂ ಸೇರಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವ ಜನರನ್ನೆ ತನ್ನ ಹತೋಟಿಗೆ ತೆಗೆದುಕೊಂಡು ಒಂದು ವೇಳೆ  ಬಗ್ಗದೆ ಹೋದಲ್ಲಿ ಅವರ ಜೀವಕ್ಕೆ ತೊಂದರೆ ಮತ್ತು  ಅವರ ಕುಟುಂಬಗಳಿಗೆ ತೊಂದರೆಗಳನ್ನು ಕೊಟ್ಟು ನಾಶಮಾಡಿದ ನಿದರ್ಶನಗಳು ಇದ್ದಿರಬಹುದು.

      ನನ್ನ ಸಾಧಾರಣ ವಯಸ್ಸು ಹದಿನೈದು ವರ್ಷದ ಸಮಯದಲ್ಲಿ ನಾನು ಅನುಭವಿಸಿದ ಕೆಲವು ನಿದರ್ಶನ , ಇಂದಿಗೂ ನನ್ನಲಿ, ರೋಷ, ಕೋಪ ಉಕ್ಕುವಂತೆ ಮಾಡುತ್ತಿದೆ. ತೀರಾ ಬಡತನ ತಂದೆ-ತಾಯಿ ಅವಿದ್ಯಾವಂತರು, ಮುಗ್ಧರು, ಸತ್ಯವಂತರು, ಪ್ರಾಮಾಣಿಕರು ಆದರೆ ಅವರ ಪ್ರಾಮಾಣಿಕತೆ, ಮುಗ್ಧತೆಯನ್ನು ದುರುಪಯೋಗಪಡಿಸಿಕೊಂಡ ಅದೆಷ್ಟು ಜನರು! ಒಂದಲ್ಲ ಒಂದು ರೀತಿಯಲ್ಲಿ ದಬ್ಬಾಳಿಕೆ, ಬ್ರಷ್ಟಾಚಾರ, ಅಧಿಕಾರಶಾಹಿ, ಪ್ರಭಾವಿ ವ್ಯಕ್ತಿಗಳೆಂದು ಹೇಳಿಕೊಳ್ಳುವ ಮೂರ್ಖ ಜನರ ನಡುವೆ ತನಗರಿವಿಲ್ಲದೆ ಸಿಕ್ಕಿಬಿದ್ದು ಅನುಭವಿಸಿದ ನೋವುಗಳು ಒಂದಲ್ಲ ಎರಡಲ್ಲ....! ಸಾಮಾನ್ಯರಂತೆ ನಾನು ವಿದ್ಯಾಭ್ಯಾಸವನ್ನು ಮಾಡುತ್ತಿರುವಾಗ ಸರ್ಕಾರದ ಸವಲತ್ತು ಮತ್ತು ಸ್ಕಾಲರ್ಶಿಪ್ ಪಡೆಯುವ  ಪ್ರಯತ್ನ, ಅದಕ್ಕೆ ಬೇಕಾದಂತಹ ಜಾತಿ ಪ್ರಮಾಣ ಪತ್ರ ಮತ್ತು ಆದಾಯ ಪ್ರಮಾಣ ಪತ್ರದ ಅಗತ್ಯತೆ, ಅದಕ್ಕಾಗಿ ಪಂಚಾಯತು ಕಚೇರಿ ಮತ್ತು ತಾಲೂಕು ಕಚೇರಿಗೆ ಅಲೆದಾಡುವ ಸಮಯ, ಅದೊಂದು ದಿನ  ಭರ್ತಿ ಗೊಳಿಸಿದ ಅರ್ಜಿಯೊಂದಿಗೆ ಗ್ರಾಮ ಪಂಚಾಯಿತಿಗೆ ಹೋದಾಗ ಗ್ರಾಮ ಲೆಕ್ಕಾಧಿಕಾರಿ  ಭರ್ತಿ ಮಾಡಿದ ಅರ್ಜಿಯನ್ನು ಸ್ವೀಕರಿಸದೆ, ಸುಮಾರು 15 ಬಾರಿಗೂ ಅಲೆದಾಟ ಮಾಡಿಸಿದ ಘಟನೆ, ಕೊನೆಗೆ  ಹ (ಣ) ಕೊಡುವಂತೆ ಒತ್ತಾಯ ಮಾಡಿ, ಮತ್ತೆ ಸಹಿಯನ್ನು ಹಾಕಿದ ಗ್ರಾಮಾಧಿಕಾರಿ ಇಂದು ಬಹಳ ದೊಡ್ಡ ಹುದ್ದೆಯಲ್ಲಿ ಮೆರೆಯುತ್ತಿರಬಹುದು! ನನ್ನಂತೆ ಸಾವಿರಾರು ಜನರಲ್ಲಿ ಅದೆಷ್ಟು ದುಡ್ಡುನ್ನು ಮಾಡಿ ಬಂಗಲೆ, ಬಂಗಾರ, ಕಾರು, ಐಷಾರಾಮಿ ಜೀವನ, ತನ್ನ ಹೆಂಡತಿ ಮಕ್ಕಳಿಗೆ ದೇಶ-ವಿದೇಶಗಳ ವಿದ್ಯಾಭ್ಯಾಸಕ್ಕೆ ಕಳುಹಿಸುತ್ತಿರಬಹುದು. 

        ನೆರೆಕರೆ, ಸಂಬಂಧ, ಅಥವಾ  ಸಮಾಜದಲ್ಲಿ ಬದುಕುವಾಗ ಎದುರಾದ ಒಂದು ಚಿಕ್ಕ ಸನ್ನಿವೇಶದಲ್ಲಿ ಪೊಲೀಸ್ ಠಾಣೆಗೆ ಹೋಗಬೇಕಾದ ಅನಿವಾರ್ಯತೆ ಬಂದೊದಗಿತು, ವಿದ್ಯಾರ್ಥಿ ಜೀವನ ಸಂದರ್ಭದಲ್ಲಿ ಅನುಭವಿಸಬಾರದ ಕಷ್ಟಗಳನ್ನು ಅನುಭವಿಸಿದರು ಸಂದರ್ಭಗಳು ಮಾತ್ರ ಇಂದಿಗೂ ನನ್ನ ಮನಸ್ಸಲ್ಲಿ ಅಚ್ಚಾಗಿ ಬಿಟ್ಟಿದೆ. ಸಾಮಾನ್ಯವಾಗಿ ತೊಂದರೆಗಳಾದಾಗ, ಪೊಲೀಸು ಕಚೇರಿಗೆ ದೂರುಗಳನ್ನು ನೀಡಲು ಹೊಗುತ್ತಾರೆ, ಅದರಂತೆ ನನ್ನ ತಂದೆಯು ಒಂದು ವಿಷಯದಲ್ಲಿ ದೂರು ದಾಖಲು ಮಾಡಲು ಪೊಲೀಸ್ ಠಾಣೆ ಹತ್ತಿದ ವಿಷಯ! ( ಈ ವಿಷಯಗಳನ್ನು ನಾನು ಯಾಕೆ ಹೇಳುತ್ತಿದ್ದೇನೆ ಅಂದರೆ , ವ್ಯವಸ್ಥೆಗಳು ಎಷ್ಟರಮಟ್ಟಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತವೆ,  ಮತ್ತು ಸತ್ಯವಾದ ಪ್ರಾಮಾಣಿಕ ಅಧಿಕಾರಿಗಳು ಇಲ್ಲದೇ ಹೋದಲ್ಲಿ ಸಾಮಾನ್ಯ ಜನರು ಅನುಭವಿಸುವ ಕೆಲವು ನಿದರ್ಶನ ಹೇಳಲು ಪ್ರಯತ್ನ )  ಈ ಸಂಧರ್ಭಗಳು ಜೀವನದ ಪಾಠವೆಂದು ಪರಿಗಣಿಸುವ ಬದಲು, ಸಮಾಜದಲ್ಲಿ ದುಷ್ಟರು, ವಿಕೃತರು, ಯಾವ ರೀತಿಯಲ್ಲಿ ಎಲ್ಲಿ ಸೇರಿಕೊಂಡಿರುತ್ತಾರೆ ಅನ್ನೋದನ್ನು ತಿಳಿಯಳಸಾಧ್ಯ! ಅದಿರಲಿ, ದೂರು ಕೊಟ್ಟಾಯಿತು, ಸ್ಥಳ ಮಹಜರಿಗೆ ಹಾಜರಿ, ಆದರೆ ಪೊಲೀಸನಲ್ಲಿ ಪೆನ್ನು ಇಲ್ಲ, ಪೇಪರು ಇಲ್ಲ, ಸ್ಥಳಕ್ಕೆ ಹೋಗಲು ವಾಹನವು ಇಲ್ಲ!  (ಸರ್ಕಾರದ ಸಮಸ್ಯೆ ಇದ್ದೀರಬಹುದೇ! ) ಏನಪ್ಪಾ ಸಮಸ್ಯೆ ನಡಿ ಹೋಗೋಣ, ಪೇಟೆಗೆ ಹೋಗಿ ಕಾರು ತಗೊಂಡು ಬಾ! ಹೇಳಿಕೆಯಂತೆ ಅನಿವಾರ್ಯವಾಗಿ ತರಬೇಕಾಯಿತು, ಕಿಸೆಯಲ್ಲಿ ಕೇವಲ ನೂರು ರೂಪಾಯಿ! ಪೊಲೀಸರೆಂದರೆ ಭಯ ಅದರ ನಡುವಲ್ಲಿ ಇವರ ಆರೈಕೆ, ಕಾರಲ್ಲಿ ಏರಿದರು, ಏ ಇಳಿಯಪ್ಪ ಓ ಅಲ್ಲಿ ಹೋಗಿ ಒಂದು ಬಂಡಲ್ ಪೇಪರ್ ಪೆನ್ನು ತಾ! ಇಳಿಯಲೇ ಬೇಕಾಯ್ತು ಇಳಿದೆ, ಅಂಗಡಿ ಮಾಲೀಕನಲ್ಲಿ ದುಡ್ಡು ಮತ್ತೆ ಕೊಡುತ್ತೇನೆ ಎಂದು ಪೇಪರು ತಂದುಬಿಟ್ಟೆ ! ಸ್ಥಳಕ್ಕೆ ಹೋಗಿ ಹಿಂತಿರುಗುವ ಸಮಯ. ಏನಪ್ಪಾ ಎಷ್ಟಿದೆ ಕೈಲಿ, ಸರ್ ನೂರು ರೂಪಾಯಿ ಇದೆ, ಸರಿ ಇಲ್ಲಿ ಕೊಡು! ಆಯ್ತು ಸರ್, ಸರಿ ಹೋಗೋಣ, ಎಂದು ಹೋಗಿ ಬಿಟ್ಟ ಪೊಲೀಸ! ( ಅವನೇ ಇವತ್ತು ಎಷ್ಟು ಜನರಿಗೆ ಇಂತಹ ಕೆಲ್ಸ ಮಾಡಿರಬಹುದು! ಅವನ ಬಳಿ ಹೋದ ನಮ್ಮಂತವರ ಸ್ಥಿತಿ ಏನಾಗಿರಬಹುದು ). ಕಥೆಯೂ ಅಲ್ಲ ಜೀವನವೂ ಅಲ್ಲ,!

       ಅಂತಹುದೇ ಇನ್ನೊಂದು ಇನ್ನೊಂದು ನಿದರ್ಶನ, ನನ್ನ ಕುಟುಂಬದೊಂದಿಗೆ ಕಾರಲ್ಲಿ ಒಂದು ಕಡೆ ಪ್ರಯಾಣ, ಪಯಣಿಸುತ್ತಿದ್ದ ಸಂದರ್ಭದಲ್ಲಿ ಒಂದು ಕಡೆ ಪೋಲಿಸು ವಾಹನ ಮತ್ತು ಪೊಲೀಸರು! ಅಡ್ಡಗಟ್ಟಿ  ಎಲ್ಲರನ್ನೂ ತಪಾಸಣೆ ಮಾಡುವಂತೆ ನನ್ನನ್ನು ತಪಾಸಣೆ ಮಾಡಿಬಿಟ್ಟರು, ಎಲ್ಲಾ ದಾಖಲೆಗಳು ಸರಿ ಇದ್ದರು ಹೊಸ ವಾಹನವಾಗಿದ್ದರರೂ,

 ಸುಖಾಸುಮ್ಮನೆ ಸುಮಾರು 10 ನಿಮಿಷಗಳ ಕಾಲ ಬದಿಗೆ ನಿಲ್ಲಿಸಿಬಿಟ್ಟರು, ಒಬ್ಬ ಪೋಲಿಸ ಏನಪ್ಪಾ ಬೆಲ್ಟ್ ಹಾಕಿಲ್ಲ ಅಲ್ವಾ ನೀನು! ಆಶ್ಚರ್ಯ! ಪ್ರತ್ಯುತ್ತರ ಕೊಟ್ಟುಬಿಟ್ಟೆ , ಸರ್ ನಾನ್ ಬೆಲ್ಟ್ ಹಾಕಿದ್ದೇನೆ! ನೋಡಪ್ಪ ಅಲ್ಲಿ, ಎಸ್ಐ ಕರೀತಿದಾರೆ, ಆಯ್ತು ಸರ್, ಅವರಲ್ಲಿಗೆ ಹೋಗುತ್ತಿದ್ದಂತೆ, ಸಂಪೂರ್ಣ ಪಾನಮತ್ತರಾಗಿದ್ದ ಎಸ್ಐ ಒಬ್ಬರು  ಎರಡು ಕೈಯನ್ನು  ಕಾರಿನ ಮೇಲೆ ಇಟ್ಟುಕೊಂಡು ಮದ್ಯಪಾನಮಾಡಿ ನಿಲ್ಲಲು ಆಗದೆ, ಅಲ್ಲಾಡುತಿದ್ದರು! ಪರಿಸ್ಥಿತಿ ಅರ್ಥ ಮಾಡಿಕೊಂಡ ನಾನು, ನನ್ನ ಸಂಗಡಿಗ ಮಿಲಿಟರಿ ಉದ್ಯೋಗಿ ಅವರ ಗುರುತುಚೀಟಿ ಕಾನ್ಸ್ಟೇಬಲ್ ಹತ್ತಿರ ತೊರಿಸಿದ ಮೇಲೆ ಬಿಟ್ಟು ಬಿಟ್ಟರು!( ಕಾನೂನು ಪಾಲಕ ಪಾನಮತ್ತನಾಗಿ ದುಡ್ಡು ತೆಗೆದುಕೊಂಡು ಅದೆಷ್ಟು ದೊಡ್ಡ ಮನೆ ಕಟ್ಟಿ, ಬ್ಯಾಂಕ್ ಡೆಪಾಸಿಟ್ ಇಟ್ಟಿದ್ದಾನೋ ದೇವರೇ ಬಲ್ಲ!)

      ಯಾರಿಗೂ ಆಸ್ತಿಯನ್ನು ಮಾಡಿ ಇಡಬೇಡಿ, ಒಂದು ವೇಳೆ ನಿಮ್ಮ ಬಳಿ ತುಂಬಾ ಆಸ್ತಿ ಇದ್ದರೆ ಸಾಯುವ ಮುನ್ನ ಸರಿಯಾದ ರೀತಿಯಲ್ಲಿ ಕೊಡದೇ ಸಾಯಬೇಡಿ! ಯಾಕೆಂದರೆ ಅತೀ ಆಸ್ತಿ ಇದ್ದಾಗ ಆಸೆ ಜಾಸ್ತಿ ಯಾಗಿ, ಹೆಂಡತಿ ಮಕ್ಕಳು, ಅಣ್ಣ ತಮ್ಮಂದಿರ ಹೊಡೆದಾಟ ಹೆಚ್ಚಿನ ಮನೆಗಳಲ್ಲಿ, ಬೇಡ ಬೇಡ ವೆಂದರೂ ಬೂದಿ ಮುಚ್ಚಿದ ಕೆಂಡದಂತೆ! ಉರಿಯುತ್ತಾ ಇರುತ್ತದೆ. ಅದು ನನ್ನ ಅಪ್ಪನಿಗೂ ಎದುರಾಯಿತು, ಅಪ್ಪನ ಸಮಾನ ದೊಡ್ಡಪ್ಪ ತಮ್ಮನಿಗೆ ಮೋಸ ಮಾಡಿಬಿಟ್ಟ! ನನ್ನದೇ ಆಸ್ತಿ ಹೇಳಿಬಿಟ್ಟ, ಕೇಳಿ ಕೇಳಿ ಬೇಸತ್ತ ತಮ್ಮ, ತಂಗಿಯರು ಕೋರ್ಟು ಮೆಟ್ಟಿಲು ಹತ್ತಿಬಿಟ್ಟರು, ಆಯ್ತು, ಎಕರೆಗಟ್ಟಲೆ ಜಾಗ, ಕೋರ್ಟು ಮೊರೆ, ಪ್ರಕರಣದಲ್ಲಿ ನಂಬಿ ಹೋದ ವಕೀಲನೆ ಬತ್ತಿ ಇಟ್ಟ, ಎದುರಾಳಿಯೊಂದಿಗೆ ಸೇರಿಬಿಟ್ಟ, ಅಣ್ಣ ತಮ್ಮನಿಗೆ ಸೇರಬೇಕಾದ ಪಿತ್ರಾರ್ಜಿತ ಆಸ್ತಿ, ಮೂರನೇಯವನಿಗೆ ಹೋಗುವಂತೆ ಪ್ರಯತ್ನಪಟ್ಟ!  ಮೂರನೆಯವ ವಿದ್ಯಾವಂತ ಬ್ಯಾಂಕ್ ಉದ್ಯೋಗಿ, ಅಣ್ಣ ತಮ್ಮಂದಿರು ಅವಿದ್ಯಾವಂತ! ಅವಿವೇಕಿಗಳು! ಇಲ್ಲಿ ಹಣವಂತರ ಆಟ, ರಾಜಕೀಯ ವ್ಯಕ್ತಿಗಳ ಆಟ, ಮತ್ತು ವಿರೋಧಿಗಳ ವ್ಯವಸ್ಥಿತ ರಂಪಾಟ! ಇದಕ್ಕೂ ರಾಜಕೀಯ ಭ್ರಷ್ಟಾಚಾರಕ್ಕೆ ಏನು ಸಂಬಂಧ ಅಂತೀರಾ! ಇದೆ ನೋಡಿ - ವಕೀಲ ಕೇಸು ತೆಗೆದುಕೊಂಡ! ಯಾವ ಹುಚ್ಚನಿಗೂ ತಿಳಿಯುತ್ತದೆ ಎಲ್ಲಾ ದಾಖಲೆ ನೋಡಿದಾಗ ವ್ಯವಸ್ಥಿತ ಮೋಸ ಅಣ್ಣ ತಮ್ಮನಿಗೆ! ಆದರೆ ' ಏನೂ ತಿಳಿಯದ ಇವರಿಗೆ ನೋಟು ತಗೊಂಡು ಸುಮ್ಮನಾದ ವಕೀಲ , ನ್ಯಾಯಾಧೀಶ ಕೊನೆಗೆ ಹೇಳಿಬಿಟ್ಟ! (ನ್ಯಾಯ ದೇವತೆ ಕಿವಿಗೆ ಹತ್ತಿ ಇಟ್ಟು ನಿದ್ದೆ ಮಾಡಿದ್ದಳು - ಕಣ್ಣಿಗೆ ಬಟ್ಟೆ ಮಾತ್ರ ಕಟ್ಟಿಲ್ಲ ಎಂಬುದು ) - ಅಯ್ಯೋ ಪಾಪ ನ್ಯಾಯಾಲಯ ಅಲೆದಾಟ - 30 -40-50 ವರುಷ! ಅದೆಷ್ಟು ಪ್ರಕರಣ ಇಂದಿಗೂ ಕೊಳೆಯುತ್ತಿದೆ! ಮೆಟ್ಟಿಲು ಹತ್ತಿದವರು, ಆಕಾಶದ ಏಣಿ ಪ್ರಯತ್ನ ಪಟ್ಟಂತೆ, ಇದು ಅನ್ವಯ ಬಡವನಿಗೆ, ಅವಿದ್ಯಾವಂತನಿಗೆ, ಅಸಾಯಕನಿಗೆ!  ( ಡೀಲಿಂಗ್ ಆಸ್ತಿ 10 ಕೋಟಿ ಆಗಿದ್ದರೆ,  ಒಂದಷ್ಟು ಪೆರ್ಸೆಂಟ್ - ಡೀಲ್ ಮಾಡಿದವರಿಗೆ! ಡೀಲ್ ಮಾಡುವವರು ನಿಮ್ಮವರೇ! ಅವರೊಂದಿಗೆ ವಾದಿಗಳು! ದೀಶರು! ಲೀಸರು! ಕಾರಿಗಳು! )

     ವಾಹನ ಪರವಾನಿಗೆ ಬೇಕೇ, ನೇರ ಸಾಲಲ್ಲಿ ನಿಂತರೆ ಬೇಗ ಸಿಗದು, ಅಡ್ಡ ಸಾಲಲ್ಲಿ ನಿಂತರೆ ಅಲ್ಲಲ್ಲಿ, ಬ್ರೋಕರ್ ಗಳು, ಇದು ಎಲ್ಲಾ ಕಡೆ, ಪಂಚಾಯ್ತು, ಪೊಲೀಸ್ ಠಾಣೆ, ತಾಲೂಕು ಜಿಲ್ಲಾ ಕಛೇರಿ, ( ನನ್ನಲ್ಲಿ ,  MLA, Judge,  Police commissioner ಎಲ್ಲರ ಪರಿಚಯ ಇದೆ ಹೇಳುತ್ತಾ ಹಣಮಾಡುವ ಜನರು , ಇಂತಹ ಜನರು ಒಂದೇ ಬಟ್ಟಲು ಹಿಡಿದು ಊಟ ಮಾಡುವ ಸಮಯದಲ್ಲಿ, ಒಂದೊಂದು ಪ್ರಕರಣಗಳು ನರಪಿಶಾಚಿಗಳಿಗೆ ಅಕ್ಷಯ ಪಾತ್ರೆ ಆಗಿ ಬಿಡುತ್ತದೆ! ( ಆ ಹಣವನ್ನೆಲ್ಲ ತನಗಾಗಿ, ತನ್ನವರಿಗಾಗಿ ಕೋಟಿಗಟ್ಟಲೆ ಹಣಮಾಡಲು ಪ್ರಯತ್ನಿಸುತ್ತಿರುವ ಕೊಳಚೆ ಹುಳಗಳು!)


       ರಾಜಕೀಯ ವ್ಯವಸ್ಥೆ, ವೋಟು ಗಿಟ್ಟಿಸಿಕೊಳ್ಳಲು ಮಾತ್ರ ಇರಬಾರದು! ನ್ಯಾಯಾಂಗ, ಕಾರ್ಯಂಗ, ಶಾಸಕಾಂಗ! ಇವೆಲ್ಲವೂ ಪಾರದರ್ಶಕವಾಗಿ ಕೆಲಸ ಮಾಡ್ಲೇಬೇಕು! ಅಧಿಕಾರಿಗಳು ಸರ್ಕಾರಿ ಸಂಬಳವನ್ನು ಪಡೆದು ತೃಪ್ತಿಯಿಂದ ಬದುಕಬೇಕು! ಅತಿಯಾದ ಆಸ್ತಿ ಮಾಡಿಕೊಳ್ಳಲು ಜನರ ಪ್ರಾಣ ತಿನ್ನಬಾರದು , ಕೈ ಕಾಲು, ಜೀವದ ಪ್ರತೀ ಅಂಗಗಳು ಸರಿಯಾಗಿರುವಾಗ ಟೇಬಲು, ಟಾಯ್ಲೆಟ್, ಕಾರು, ಫೈಲ್ ಒಳಗಡೆ ಹಣಗಳನ್ನು ತೆಗೆದುಕೊಂಡು ಕೋಟಿ ಕೋಟಿ ಹಣ ಮಾಡಬಾರದು. ಸರ್ಕಾರದ ಹಣವನ್ನು ನುಂಗಿ ತೇಗಬಾರದು, ಬದಲಾಗಿ ಅಧಿಕಾರಿಗಳೇ, ಬದಲಾಗಿ ನ್ಯಾಯವಾದಿಗಳೇ, ಬದಲಾಗಿ ಪೊಲೀಸರೆ, ಬದಲಾಗಿ ರಾಜಕೀಯ ಜನಗಳೇ! ನಿಮ್ಮಿಂದ ನಮ್ಮ ದೇಶದ ಬದಲಾವಣೆ ಸಾಧ್ಯ, ನಿಮ್ಮಿಂದ ನಮ್ಮ ಊರು ಉನ್ನತಿಯಾಗಲು ಸಾಧ್ಯ, ನಿಮ್ಮಿಂದ ಎಷ್ಟೋ ಸಂಸಾರ ಸುಖವಾಗಿ ಬಾಳಲು ಸಾಧ್ಯ, ನಿಮ್ಮಿಂದ ಉತ್ತಮವಾದ ಸಮಾಜ ನಿರ್ಮಾಣ ಸಾಧ್ಯ,ಕೆಲಸ ಸಿಕ್ಕಿದಾಗ ನೀವು ಮಾಡಿಕೊಳ್ಳುವ ಪ್ರಮಾಣ ನಿಮ್ಮ  ಕೊನೆಯವರೆಗೂ ಪಾಲಿಸಿ, ನಿಜವಾದ ವಿದ್ಯಾವಂತರು ನೀವೆಂದು ಸಾಬೀತುಪಡಿಸಿ. ಸಾಧ್ಯವಿಲ್ಲದ ಕೆಲಸಗಲಿಲ್ಲ , ತಮ್ಮ ತಮ್ಮ ಮನಸ್ಥಿತಿ ಬದಲಾಯಿಸಿಕೊಳ್ಳಿ, ತಮ್ಮ ಗುಣಮಟ್ಟವನ್ನು ತೋರಿಸಿ, ಭ್ರಷ್ಟಾಚಾರದ ವಿರುದ್ಧ ಯುವಕರೆಲ್ಲ ಕೆಲಸಮಾಡಿ , ಭ್ರಷ್ಟಾಚಾರದ ವಿರುದ್ಧ ಪ್ರತೀ ಪ್ರಜೆ ಪ್ರಶ್ನೆ ಮಾಡಿ, ಪ್ರತೀ ಗ್ರಾಮದಲ್ಲಿ ಕನಿಷ್ಠ 500 ಜನ ಗ್ರಾಮದ ಲೆಕ್ಕಾಚಾರ ಪ್ರಶ್ನಿಸಿ, ತಾಲೂಕಿನಲ್ಲಿ ಸಾವಿರಾರು ಜನ ಒಂದುಗೂಡಿ ದನಿಯೆರಿಸಿ! ಪ್ರತೀ ಪ್ರಜೆ ಭ್ರಷ್ಟಚಾರವನ್ನು ಓಡಿಸಲು ಶ್ರಮಮಾಡಿ!


ಈ ಬರಹ, ಯಾರ ವಿರುದ್ಧವೂ ಅಲ್ಲ, ಯಾರನ್ನೂ ಗುರಿಯಾಗಿಸಿ ಅಲ್ಲ, ಅಥವಾ ವ್ಯಕ್ತಿ, ಹುದ್ದೆ, ವ್ಯವಸ್ಥೆಯ ವಿರುದ್ಧವಾಗಿ ಅಲ್ಲ, ನನ್ನಂತೆ ಚಡಪಡಿಸುತ್ತಿರುವ ಸಾವಿರಾರು ಜನರ ದನಿ, ಸಾವಿರಾರು ಕುಟುಂಬದ ದನಿ, ಸಾವಿರಾರು ಯುವಕ, ಯುವತಿ, ಮುಂದಿನ ಪೀಳಿಗೆಗೆ ಭಾರತ ದೇಶವನ್ನ ಇನ್ನಷ್ಟು ಸದೃಗೊಳಿಸುವ ದನಿ.

ಬನ್ನಿ ಭಾರತೀಯರೇ, ನಿಮ್ಮ ನಿಮ್ಮ ಮನೆಗಳಲ್ಲಿ, ಮನಗಳಲ್ಲಿ  ಪ್ರಾಮಾಣಿಕವಾಗಿ ಪ್ರಮಾಣ ಮಾಡಿಕೊಳ್ಳಿ, ನಾನು ಭ್ರಷ್ಟಾಚಾರ ಮಾಡಲಾರೆ, ನಾನು ದೇಶದ ಆಸ್ತಿ, ನಾನು ಸಮಾಜದ ಜವಾಬ್ದಾರಿಯುತ ವ್ಯಕ್ತಿ, ಅಪ್ಪಿ ತಪ್ಪಿಯೂ ನಾನು ಭ್ರಷ್ಟಾಚಾರ ಮಾಡುವುದಿಲ್ಲ, ಮಾಡಲು ಬಿಡುವುದಿಲ್ಲ.

(ಈ ಬರವಣಿಗೆಯಲ್ಲಿರುವ ಪ್ರತಿಯೊಂದು ವಾಕ್ಯ ಕಾಲ್ಪನಿಕ, ಯಾರಿಗೂ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಂಬಂಧಪಟ್ಟಿಲ್ಲ )

ಜೈ ಭಾರತ.                 

                                  ✍️ಮಾಧವ. ಕೆ. ಅಂಜಾರು.


Comments

  1. ಒಳ್ಳೆಯ‌ ವಿಷಯ. ಧನ್ಯವಾದಗಳು.‌ಶುಭಾಶಯ.🎉

    ReplyDelete
  2. ನಿಮ್ಮ ಅನಿಸಿಕೆ ಎಲ್ಲಾ ಸರಿಯಿದೆ. ವ್ಯವಸ್ಥೆ ಸರಿಪಡಿಸಲಾದಷ್ಟು ಕೆಟ್ಟಿದೆ. ಈಗ ನಮ್ಮ ಜನಪ್ರತಿನಿಧಿಗಳು ಇರುವವರು ಬರೇ ರಾಜಕಾರಣಿಗಳು. ಅವರು ನಮ್ಮ ನಾಯಕರಲ್ಲ ಎಂಬ ಸತ್ಯವನ್ನು ನಾವು ತಿಳಿದಿರಬೇಕು. ಜನರ ಒಳಿತು ಅವರಲ್ಲಿ ಹೆಚ್ಚಿನವರ ಮನಸ್ಸಲ್ಲಿಲ್ಲ. ಪರ್ಸೆಂಟೇಜು ತೆಗೆದುಕೊಂಡು ದುಡ್ಡು ಮಾಡೋದೇ ಅವರ ಕಾಯಕ. ಯಥಾ ಪ್ರಜಾ ತಥಾ ರಾಜ ಅನ್ನುವಂತಿದೆ ಈಗಿನ ಪರಿಸ್ಥಿತಿ.

    ReplyDelete

Post a Comment

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.

(ಲೇಖನ -100), "ಕುವೈಟ್ ಕಲಾ ಮಾಣಿಕ್ಯ" ಒಬ್ಬ ಕಲಾಗಾರನ ನಿಜವಾದ ಜೀವನ ಕ್ರಮ, ಶ್ರಮ ಮತ್ತು ಸಾಧನೆಯ ಹಾದಿ, ಕಲೆ ಎಂಬುವುದು ಎಲ್ಲರಿಗೂ ಒಲಿಯುವುದಿಲ್ಲ ಆದರೆ ಒಂದಲ್ಲ ಒಂದು ರೀತಿಯ ಕಲೆಯ ಶಕ್ತಿ ಪ್ರತಿಯೊಬ್ಬರಲ್ಲೂ ಇರುತ್ತದೆ