Posts

Showing posts from August, 2018

ಹಾವಿಗೆ ಹಾಲೆರೆದರೇ

ಹಾವಿಗೆ ಹಾಲೆರೆದರೇ ಅದರ ವಿಷ ಕಮ್ಮಿಯಾಗೋದೇ ? ಮೂರ್ಖನ ಸಹವಾಸದಲಿ ನಮ್ಮ ಬುದ್ಧಿ ವೃದ್ದಿಯಾಗೋದೇ ? ಮೂರ್ಖನು , ಹಾವೂ ಸಮಯ ಸಿಕ್ಕಾಗ ವಿಷ ಹೊರ ಹಾಕೋದು ಖಚಿತ ಹಾಗೆಂದು , ಹಾವಿನ   ಭಯ ಬೇಡ ಮೂರ್ಖನ ಹೆದರಿಕೆ ಬೇಡ ಹಾವಿಗೆ ಹಾವಾಡಿಗನಾಗು ..! ಮೂರ್ಖನ ಬಿಟ್ಟು ಹೋಗು ಹಾಗಿದ್ದರೆ , ನಮಗೆ ನಮ್ಮ ಸಂತೋಷ ಖಚಿತ ..!    -ಮಾಧವ ಅಂಜಾರು

sahaja

ಸಹಜ ಎಲ್ಲಾ ದಂಪತಿಗಳಲ್ಲಿ ಇಂತಹದೊಂದು ವಾದ ಒಂದು ದಿನ ಬಂದಿರಬಹುದು ಸ್ವಲ್ಪ ನೋಡಿ ಅವರೆಷ್ಟು ಒಳ್ಳೆಯವರು ...! ಅವನು ಹೆಂಡತಿಯನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುವನು ...! ಅವಳು ಗಂಡನನ್ನು ... ಎಷ್ಟು ಮುದ್ದಾಗಿ ನೋಡಿಕೊಳ್ಳುವನು ...! ಪಾಪ ನೋಡಿದವರಿಗೇನು ಗೊತ್ತು ಕ್ಷಣಕಾಲ ನೋಡಿದ ಸಂತೋಷ ಸ್ವಲ್ಪ ಸಮಯದಲ್ಲೇ ಮುರಿದು ಬಿತ್ತು ಅವರವರ ಗುಟ್ಟು ಅವರಿಗೇ ಗೊತ್ತು ಮತ್ತವರನು ನೋಡುವುದು ಬಿಟ್ಟು ನಡೆಯಿರಿ ಸರಿಯಾಗಿ ಇನ್ನೊಬ್ಬರು ಮಾಡದಿರಲಿ ನಿಮಗೆ ಬೊಟ್ಟು .. !                       -ಮಾಧವ ಅಂಜಾರು

ಸಂಸ್ಕಾರ ಇರದವರಿಗೆ ...!

ಸಂಸ್ಕಾರ  ಇರದವರಿಗೆ ...! ಸಂಸ್ಕಾರ  ಇರದವರಿಗೆ ...! ಸಂಸಾರದ ಹೊಣೆ, ಭಾರ ಹೆಂಡತಿಗೆ ಗಂಡ ಭಾರ ಗಂಡನಿಗೆ ಹೆಂಡತಿ ಭಾರ ಒಟ್ಟಾರೆ ಸಂಸಾರವಿರೋದಿಲ್ಲ ನೇರ .. ! ಸಂಸಾರದಲ್ಲಿ, ಒಬ್ಬರಿಗೆ ಮಾತ್ರ ಸಂಸ್ಕಾರ ಇದ್ದರೆ ... ಸಂಸಾರ ನಡೆಸುವುದೂ ಅತಿಯಾದ ಭಾರ ಸಂಸಾರ  ನಡೆಸುವವನೂ ಆಗುವನು ಭಾರ ...! ಸಂಸ್ಕಾರ ಮತ್ತು ಸಂಸಾರ ಇದ್ದರೆ ನೇರ ...! ಸಂಸಾರ ಸುಖ ಸಾಗರ .. ತಪ್ಪಿದರೆ ಸಂಸಾರವಾಗೋದು ಸದಾ ಭೋರ್ಗರೆಯುವ ಸಾಗರ ..!                 -   ಮಾಧವ ಅಂಜಾರು  

ಅದೆಷ್ಟು ಕ್ರೂರತೆ

ಅದೆಷ್ಟು ಕ್ರೂರತೆ ಅದೆಷ್ಟು ಅರಾಜಕತೆ ಅದೆಷ್ಟು ದುರ್ನಡತೆ ಅದೆಷ್ಟು ರೌದ್ರತೆ ಇಂದಿನ ದಿನಗಳಲ್ಲಾ ಅಹಂಕಾರಿಗಳಿಗೆ ಮೀಸಲು ಕೊಲೆಗಾರರಿಗೆ ಮೀಸಲು ದುಷ್ಟರಿಗೆ ಮೀಸಲು ಅಧರ್ಮಿಯರಿಗೆ ಮೀಸಲು .. ! ಆಸ್ತಿಗಾಗಿ ಕೊಲೆ ಪ್ರೀತಿಗಾಗಿ ಆತ್ಮ ಹತ್ಯೆ ಪ್ರೇಮಿಗಳಾಗಿ ವಂಚನೆ ಧರ್ಮಕ್ಕಾಗಿ ಹೊಡೆದಾಟ ಪ್ರಚಾರಕ್ಕೆ ಹಾರಾಟ ರಾಜಕೀಯಕ್ಕೆ ನಾಟಕ .. ಇದೆಲ್ಲವ ನೋಡುತ್ತಿದ್ದರೆ ಭೂಮಿಯಲ್ಲಿ ಮನುಷ್ಯ ಹುಟ್ಟಿದ್ದೇ ತಪ್ಪಾಗಿ , ದೇವರೊಬ್ಬನಿದ್ದರೆ  ? ಯಾಕೆ  ಇದಕ್ಕೆಲ್ಲಾ ಸಂಪೂರ್ಣ  ವಿರಾಮ ಹಾಕೋದರಲ್ಲಿ ತಡ ...!          -ಮಾಧವ ಅಂಜಾರು  

ಭಕುತರೆಲ್ಲರೂ

ಭಕುತರೆಲ್ಲರೂ ಶಕ್ತಿ ಮೀರಿ ಭಕ್ತಿ ಮಾಡಬೇಕೇ ಹೊರತು ,  ಅರ್ಚನೆಗೆ ಗಂಧ ಪುಷ್ಪ ಶೃಂಗಾರ ಮಾಡಲಾಗದಿದ್ದರೆ ಸಾಲ ಮಾಡಿ ಆಡಂಭರ ತೋರಿಸಿದರೆ ಯಾವ ಧರ್ಮದ ದೇವರೂ ಒಲಿಯೋದಿಲ್ಲ ಖಂಡಿತ , ಎಲ್ಲಾ ಧರ್ಮಗಳ ಭೋದನೆಯೊಂದೇ ಶಾಂತಿ ಶಾಂತಿ ಶಾಂತಿ ಸಹಬಾಳ್ವೆಯೇ ನಮ್ಮೆಲ್ಲರ ಧರ್ಮ , ಕ್ರಮ ಆದರೆ , ಮಾಡುವದು ಕಂಡರೆ ಅಧರ್ಮ , ತಿಳಿಯೋದು ಅದರಲ್ಲೇ ಯಾರಿಗೂ ಗೊತ್ತಿಲ್ಲ ಧರ್ಮ ಹಿಂದೂ ಗಳ ಯಾತ್ರೆ ಮುಸ್ಲಿಮರ ಯಾತ್ರೆ ಕ್ರಿಶ್ಚಿಯನ್ನರ ಯಾತ್ರೆ ಮತ್ತೆಲ್ಲರ ಯಾತ್ರೆ ... ಮನ ಶಾಂತಿಗೆ, ಬೇಡಿಕೆ ಈಡೇರಿಕೆಗೆ ... ! ನಾವೆಲ್ಲಾ ಮನುಶ್ಯರು ಮನುಜರಾಗಿ ಬಾಳೋಣ ಬೆರೆತು ಜೀವನ ಮಾಡೋಣ ..           -ಮಾಧವ ಅಂಜಾರು

ನ್ಯಾಯಾಲಯ

 ನ್ಯಾಯಾಲಯ ನ್ಯಾಯಾಲಯ ಒಂದು ದೇವಾಲಯದಂತೆ ನ್ಯಾಯಾಧೀಶರು ದೇವರಿದ್ದಂತೆ ನ್ಯಾಯವಾದಿಗಳು ಅರ್ಚಕರಂತೆ ಜನ ಸಾಮಾನ್ಯರು ಭಕುತರಂತೆ .... ದೇವರು ಇರೋ ಜಾಗದಲ್ಲಿ ಅರ್ಚಕರ ಉದ್ಯೋಗವಷ್ಟೇ ಭಕುತರ ಬೇಡಿಕೆಯಷ್ಟೇ ದೇವರು ಒಲಿಯೋದು ಬಹಳ ವಿರಳ ಯಾಕೆಂದರೆ ? ಇದು ಕಲಿಯುಗವಂತೆ...! ಅರ್ಚಕರೆಲ್ಲರೂ  , ಭಕ್ತರ ಬೇಡಿಕೆಯನ್ನು ದೇವರ ಮುಂದೆ ಸ್ಪಟಿಸೋದು ಮಾತ್ರ ದೇವರೆಲ್ಲರೂ  ಕಣ್ಣು ಮುಚ್ಚಿ ಆಲಿಸೋದು ಮಾತ್ರ ಯಾಕೆಂದರೆ ? ಇದು ಅಂತ್ಯ ಯುಗವಂತೆ .. ! ನ್ಯಾಯ ಅನ್ಯಾಯ ದೇವರೂ ಮಾಡಿದ್ದಾರಂತೆ ಅರ್ಚಕರೂ ಮಾಡುತ್ತಾರಂತೆ ಭಕ್ತನಿಗೆ ಮಾತ್ರ ಅರಿವೇ ಆಗೋದಿಲ್ಲ .. ದೇವರ ಮುಂದೆ ಏನೆಲ್ಲಾ ಸಂತೆ .. ಯಾಕೆಂದರೆ ,,,,? ಇದು ಬಲಿಯುಗವಂತೆ ....                   -ಮಾಧವ ಅಂಜಾರು