ಸತ್ಯವನ್ನು ಹೇಳುವವರು ಸುಳ್ಳು ಹೇಳುವವರೊಂದಿಗೆ ವ್ಯವಹಾರ ಮಾಡಬಾರದು ಸತ್ಯವನ್ನು ಬಿಡದವರು ಸುಳ್ಳು ಹೇಳುತ್ತಲಿರುವವರ ಮಾತನ್ನು ನಂಬಬಾರದು ಸುಳ್ಳು ಹೇಳುತ್ತಲೇ ಬದುಕುವವಗೆ ಸತ್ಯದ ಮಹತ್ವ ತಿಳಿಸುವ ಕೆಲಸಕ್ಕೆ ಕೈ ಹಾಕಬಾರದು ✍️ಮಾಧವ. ಕೆ. ಅಂಜಾರು
ಕೇವಲ ನೂರು ವರುಷ ಬಾಳುವ ಮನುಜಗೆ ಸಾವಿರಾರು ವರುಷ ಬದುಕುವ ಹಂಬಲ ಶಾಶ್ವತವಲ್ಲದ ಹುದ್ದೆ, ಆಸ್ತಿಗಾಗಿ ಮತ್ತೊಬ್ಬರ ಕತ್ತು ಹಿಸುಕಿ ತಿನ್ನುವ ಹಂಬಲ ಹಣಪಡೆದು ಮಾಡುವ ಒಂದೊಂದು ಸನ್ಮಾನಕೆ ಒಂದಿಷ್ಟು ಜನರ ನಾಟಕೀಯ ಬೆಂಬಲ . -✍🏻Madhav K Anjar
ಬೇಲಿಯೇ ಎದ್ದು ಹೊಲ ಮೇದಾಗ ನ್ಯಾಯಾಲಯವೂ ನರಕವಾಗಬಹುದು, ನ್ಯಾಯವಾದಿಯೇ ಅನ್ಯಾಯ ಮಾಡಿದಾಗ ನ್ಯಾಯಕೇಳುವವನು ಅನ್ಯಾಯಕ್ಕೆ ಬಲಿಯಾಗಬಹುದು ನ್ಯಾಯಾಲಯದ ನ್ಯಾಯಾಧಿಶನೇ ಹಣದ ದಾಸನಾದಾಗ ನ್ಯಾಯಾಂಗ ವ್ಯವಸ್ಥೆ ಸಜ್ಜನರನ್ನು ಅಳಿಸಬಹುದು, ✍️ಮಾಧವ ಕೆ ಅಂಜಾರು
ಲಾಭಕ್ಕಾಗಿ ಜೊತೆಗಿರುವವರು ನಿನ್ನ ಸ್ನೇಹಿತರಲ್ಲ ಲಾಭಕ್ಕಾಗಿ ಮಾತಾಡುವವರೂ ನಿನ್ನ ಒಳಿತಿಗಾಗಿ ಅಲ್ಲ ಪೊಳ್ಳು ಮಾತನ್ನಾಡುವವರು ನಿನ್ನ ಸ್ನೇಹಿತರಲ್ಲ ನಿನ್ನ ಉಪಯೋಗಿಸಿ ಬದುಕುವವರೂ ಸ್ನೇಹಿತರಲ್ಲ ಏನನ್ನೂ ಬಯಸದೆ ನಿನ್ನ ಜೊತೆಗಿರುವವರು ನಿಜವಾದ ಸ್ನೇಹಿತರು ನಿನ್ನ ಏಳಿಗೆಯನ್ನು ಬಯಸುತ್ತಲೇ ಇರುವವರು ನಿಜವಾದ ಸ್ನೇಹಿತರು ✍️ಮಾಧವ ಕೆ ಅಂಜಾರು
ಕಳೆದ ಸಮಯ ಮತ್ತೆ ಬರದು ಉಳಿದಿರುವ ಸಮಯ ನಿನಗೆ ತಿಳಿಯದು ಜಗದ ನಿಯಮ ಬದಲಿಸಲಾಗದು ಪಡೆವ ಪುಣ್ಯ ತಡೆಯಲಾಗದು ನೀನು ನೀನಾಗಿರು ಎಂದಿಗೂ ಬದುಕಿನ ಹೋರಾಟಕೆ ವಿರಾಮವಿರದು ✍️ ಮಾಧವ. ಕೆ. ಅಂಜಾರು
ಬೆಂಕಿಯ ಮುಂದೆ ಹೂವಾಗಿರಬೇಡ ಹಾವಿನ ಮುಂದೆ ಇಲಿಯಾಗಿರಬೇಡ ಹಿರಿಯರ ಮುಂದೆ ತನ್ನನ್ನು ಹೊಗಳಿಕೊಳ್ಳಬೇಡ ಕಿರಿಯರ ಮುಂದೆ ಜಾಣನೆನಬೇಡ ಐಶ್ವರ್ಯವಿರುವಾಗ ಅಹಂಕಾರ ಬೇಡ ಬಡತನವಿರುವಾಗ ಧೈರ್ಯಗೆಡಬೇಡ ಯಾರೇನೇಆಗಲಿ ನಾನಿದ್ದರೆ ಸಾಕೆನ್ನಬೇಡ ಬದುಕಿರುವಷ್ಟು ದಿನ ಉಪದ್ರವಿಸಬೇಡ ✍️ಮಾಧವ. ಕೆ ಅಂಜಾರು.