Posts

Showing posts from November, 2024

ಹೆಜ್ಜೆಯ ಫಲ

ನೀ ನನ್ನ ಜೊತೆಯಲಿರಲು ಕಾರಣ  ದೇವರು ಕೊಟ್ಟ ವರ  ನಾ ನಿನ್ನ ಜೊತೆಗಿರಲು ಕಾರಣ  ನಿನ್ನ ಪ್ರಾರ್ಥನೆಯ ಫಲ  ಗೆಳೆಯನಾಗಿಯೂ  ಗೆಳತಿಯಾಗಿಯೂ  ಸತಿಯಾಗಿಯೂ  ಸಂಬಂಧಗಳು ಉಳಿಯಲು ಕಾರಣ  ನಿನ್ನಲಿರುವ ತಾಳ್ಮೆಯ ಫಲ  ಇಂದು ನಾಳೆ ಎಂದೆಂದಿಗೂ  ಜೊತೆ ಜೊತೆಗೆ ಇರಬೇಕಾದರೆ  ನಾವಿಬ್ಬರು  ಹಾಕುವ  ಬದುಕಿನ ಹೆಜ್ಜೆಯ ಫಲ.        ✍️ಮಾಧವ. ಕೆ. ಅಂಜಾರು 

ನಾವು ಬೇಡವೆಂದರೆ

ನಮ್ಮೊಳಗೇ ನಾವು ಕಚ್ಚಾಡಿದರೆ  ನಮ್ಮವರಿಗೇ ಬೆಲೆ ಇರುವುದಿಲ್ಲ  ನಮ್ಮವರನ್ನೇ ನಾವು ವಧೆ ಮಾಡಿದರೆ  ಮಾಡುವ ಕೆಲಸಕ್ಕೆ ಬೆಲೆ ಇಲ್ಲ  ನಮ್ಮವರನ್ನೇ ನಾವು ಬೇಡವೆಂದರೆ  ನಮ್ಮವರು ಸೇರುವುದಿಲ್ಲ  ನಮ್ಮವರನ್ನೇ  ದುರುಪಯೋಗ ಮಾಡಿದರೆ  ನಾಳೆ ನಿಮಗೆ ಬೆಲೆ ಇಲ್ಲ  ನಮ್ಮವರನ್ನೇ ನಾವು ತುಳಿದರೆ  ನಾಳೆ ನಮ್ಮವರೇ ಇರುವುದಿಲ್ಲ  ನಮ್ಮವರೇಲ್ಲರೂ ಸೇರಿ ನಡೆದರೆ  ಯಾರಿಗೂ ಭಯವಿರುವುದಿಲ್ಲ.        ✍️ಮಾಧವ. ಕೆ ಅಂಜಾರು 

ಭಾರತೀಯ ರಾಯಭಾರಿ ಕಛೇರಿ ಕುವೈಟ್ ನಲ್ಲಿ, ಹುಲಿಗಳ ಆರ್ಭಟ

Image
 ಭಾರತೀಯ ರಾಯಭಾರಿ ಕುವೈಟ್ ನಲ್ಲಿ, ಹುಲಿಕುಣಿತ ತುಳು ಸಂಸ್ಕೃತಿಯ ಭಾಗವಾಗಿರುವ ಹುಲಿಕುಣಿತ ವಿದೇಶದಲ್ಲಿ ರಾರಾಜಿಸುತ್ತ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತಿದೆ, ತುಳುವರು ಪ್ರಪಂಚದ ಯಾವ ಮೂಲೆಯಲ್ಲಿದ್ದರೂ ತಮ್ಮ ಸಂಪ್ರದಾಯವನ್ನು ಬಿಟ್ಟು ಕೊಡುವುದಿಲ್ಲ, ನಮಸ್ಕಾರ ಊರುಡು ಒಲ್ಪ ದಿಂದ ಆರಂಭ ಆಗುವ ಸಂಭಾಷಣೆ, ಹುಲಿ ಕುಣಿತದಂತಹ ಅನೇಕ ಸಂಪ್ರದಾಯವನ್ನು ಬಹಳಷ್ಟು ಶೃದ್ದೆಯಿಂದ ಮತ್ತು ಶಿಸ್ತಿನಿಂದ ಮಾಡಿ ತುಳುವರ ಸಂಸ್ಕೃತಿಗೆ ಇನ್ನಷ್ಟು ಮೆರುಗು ಕೊಡುವ ತುಳು ಬಿಲ್ಲವ ಸಂಘದ ಸದಸ್ಯರ ತಂಡ ಅನೇಕ ಕಾರ್ಯಕ್ರಮದಲ್ಲಿ ತಮ್ಮನ್ನು ತೊಡಗಿಸಿಕೊಡಿರುತ್ತಾರೆ, ಒಟ್ಟಾರೆ ಹೆಚ್ಚಿನ ಕಲಾವಿದರು ಕುವೈಟ್ನಲ್ಲಿ ವಾಸವಾಗಿದ್ದಾರೆ ಹೇಳಬಹುದು.            ನೃತ್ಯ, ನಾಟಕ, ಪ್ರಹಸನ, ಹುಲಿವೇಷ, ಕರ್ನಾಟ/ ಭಾರತದ ಅನೇಕ ಇತಿಹಾಸದ ಸನ್ನಿವೇಶವನ್ನು ವೇದಿಕೆಯಲ್ಲಿ ನೋಡುವ ಅವಕಾಶವನ್ನು ಅನೇಕ ಸಂಘ ಸಂಸ್ಥೆಗಳು ನಿರಂತರ ಮಾಡುತ್ತಿರುವುದು ನಮಗೆಲ್ಲರಿಗೂ ಸಂತೋಷವನ್ನೂ ತಂದು ಕೊಡುತ್ತಲಿದೆ. ನಾವು ಚಿಕ್ಕವರಿದ್ದಾಗ ನಡೆಯುತ್ತಿದ ಹುಲಿ ಕುಣಿತಕ್ಕೊ, ಇಂದಿನ ದಿನದಲ್ಲಿ ನಡೆಯುವ ಕುಣಿತಕ್ಕೂ ಬಹಳಷ್ಟು ಬದಲಾವಣೆ ಕಂಡಿರುತ್ತೇನೆ.         ವೇಷಭೂಷಣೆ ಅತ್ಯಂತ ಸುಂದರ, ಹಾಕುವ ಹೆಜ್ಜೆ, ಎಲ್ಲವೂ ಬಹಳಷ್ಟು ಚೆನ್ನಾಗಿ ಮೂಡಿ ಬರುತ್ತದೆ. ಎಲ್ಲಾ ಕಲಾವಿದರಿಗೂ ಇನ್ನಷ್ಟು ಹೆಚ್ಚಿನ ಯಶಸ್ಸು ಮತ್ತು ಆಶೀರ್ವಾದ ಸ...

ಕ್ಷಣಿಕ

ಅತಿಯಾದ ಭಯ  ಏನನ್ನೂ ಕೊಡದು  ಅತಿಯಾದ ಚಿಂತೆ  ಸಮಸ್ಯೆಯನ್ನು  ಬಗೆಹರಿಸದು   ಬರುವುದೆಲ್ಲ ಬರಲಿ  ನಿನ್ನ ಶಕ್ತಿ ನಿನಗೆ  ಮಾತ್ರ ಗೊತ್ತಿರಲಿ  ಮತ್ತೆಲ್ಲವೂ ಕ್ಷಣಿಕ  ನೆನಪಿರಲಿ   ✍️ ಮಾಧವ. ಕೆ. ಅಂಜಾರು.

ಯೋಗವಿದ್ದರೂ ಯೋಗ್ಯತೆ ಬೇಕು

ಯೋಗವಿದ್ದರೂ ಯೋಗ್ಯತೆ ಬೇಕು  ಭಾಗ್ಯವಿದ್ದರೂ ಛಲವಿರಬೇಕು  ಸಾಧ್ಯವಿದ್ದರೂ ಮನಸಿರಬೇಕು  ಕೋಪವಿದ್ದರೂ ಹಿಡಿತವಿರಬೇಕು  ದ್ವೇಷವಿದ್ದರೂ ಮಿತವಿರಬೇಕು  ಕಾಸಿದ್ದರೂ ಗುಣವಿರಬೇಕು  ಲೋಪವಿದ್ದರೂ ಒಪ್ಪಿಕೊಳ್ಳಬೇಕು  ಬಡತನವಿದ್ದರೂ ನಗುವಿರಬೇಕು            ✍️ಮಾಧವ. ಕೆ. ಅಂಜಾರು            

ಜೊತೆಗೊಬ್ಬನಿದ್ದರೆ ಸಾಕು

ಜೊತೆಗೊಬ್ಬನಿದ್ದರೆ ಸಾಕು  ನೀತಿವಂತ  ಜೊತೆಗೂಬ್ಬನಿದ್ದರೆ ಸಾಕು  ನ್ಯಾಯವಂತ  ಜೊತೆಗೂಬ್ಬನಿದ್ದರೆ ಸಾಕು  ಸತ್ಯವಂತ  ಜೊತೆಗೂಬ್ಬನಿದ್ದರೆ ಸಾಕು  ಬುದ್ದಿವಂತ  ಜೊತೆಗೂಬ್ಬನಿದ್ದರೆ ಸಾಕು  ಧೈರ್ಯವಂತ  ಜೊತೆಗೂಬ್ಬನಿದ್ದರೆ ಸಾಕು  ವಿದ್ಯಾವಂತ  ಜೊತೆಗೊಬ್ಬನಿದ್ದರೆ ಸಾಕು  ಗುಣವಂತ  ಜೊತೆಗೊಬ್ಬನಿದ್ದರೆ ಸಾಕು  ಹೃದಯವಂತ      ✍️ಮಾಧವ. ಕೆ. ಅಂಜಾರು 

ನಿಂದಿಸುವವರೂ ಬೇಕು

ಸ್ಪಂದಿಸುವವರೂ ಬೇಕು  ನಿನ್ನ ನಿಂದಿಸುವವರೂ ಬೇಕು  ಹೊನ್ನ ತಟ್ಟೆಯಲಿ  ತಿನ್ನುವವರೂ ಬೇಕು  ಬೆನ್ನ ಹಿಂದೆ  ಮಾತಾಡುವವರೂ ಬೇಕು  ಕಣ್ಣ ಮುಂದೆ  ಆಟ ಆಡುವವರೂ ಬೇಕು  ಜಯಿಸುವವರೂ ಬೇಕು  ಸೋಲುವವರೂ ಬೇಕು  ಸೋತು ಸೋತು  ಗೆಲುವು ಕಾಣುವವರು ಬೇಕು  ನಿನ್ನ ಪ್ರತೀ ನಡೆಯನ್ನು  ಗಮನಿಸುವವರೂ ಬೇಕು,        ✍️ಮಾಧವ. ಕೆ ಅಂಜಾರು