(ಲೇಖನ -107)ಕೊರೋನ ಕಾಲದಲ್ಲಿ ಮನೆಯಿಂದ ಕಿತ್ತೊಗೆಸೆದ ಕೇಬಲ್ ಇಂದಿಗೂ ಇಲ್ಲ ಕಾರಣವಷ್ಟೇ, ನಮ್ಮನ್ನು ಅತಿಯಾಗಿ ಭಯಗೊಳಿಸಿ ದಿನಾಲೂ ಸಾಯಿಸುತ್ತಿದ್ದ TV
✍️Madhav. K. Anjar (ಲೇಖನ -107) ಮೂರ್ಖರ ಪೆಟ್ಟಿಗೆಯೆಂದು ಕರೆಯಲ್ಪಡುವ (TV)ಯನ್ನು ನೋಡುವುದನ್ನೇ ಬಿಟ್ಟಿದ್ದೇನೆ! ಯಾಕೆಂದರೆ ನನ್ನನ್ನು ಇನ್ನಷ್ಟು ವಿಶ್ರಾಂತಿಇಲ್ಲವಾಗಿಸುವುದು ಬೇಡವೆಂದು, ನಮ್ಮ ಇಂದಿನ ಮಾಧ್ಯಮಗಳು ವಿಷಯಗಳನ್ನು ಖಾರ ಪುಡಿ ಮಸಾಲಾ ಹಾಕಿ ರುಬ್ಬುತ್ತಾ ವೀಕ್ಷಕರ ಒಳ್ಳೆಯ ಮನಸ್ಸನ್ನು ವಿಕಾರಗೊಳಿಸಿ ಒಂದಷ್ಟು ಅವಿವೇಕಿಗಳನ್ನು ತನ್ನ ಕ್ಯಾಮೆರ ಮುಂದೆ ಕೂರಿಸಿ ವಿಚಾರವಲ್ಲದ ವಿಚಾರಗಳನ್ನು ಗಂಟೆಗಟ್ಟಲೆ ಮಾತನ್ನಾಡಿ ಸ್ವಲ್ಪ ದಿನ ಜಾಸ್ತಿ ಬದುಕುವವರನ್ನು ಬೇಗನೆ ಮುಗಿಸಿಬಿಡುವ ತಾಕತ್ತು ಕೆಲವು TV ಮಾಧ್ಯಮಗಳಿಗೆ ಇದೆ. ತನ್ನ ಜಾತಿಗಾಗಿ, ಧರ್ಮಕ್ಕಾಗಿ, ಪಕ್ಷಕ್ಕಾಗಿ ಮತ್ತು ಬೆಂಬಲಿಗರಿಗಾಗಿ ಬೆಳಗ್ಗಿನಿಂದ ಮಧ್ಯರಾತ್ರಿಯವರೆಗೆ ಬಾಯಿಗೆ ಬಂದ ಹಾಗೆ ಮಾತನಾಡುತ್ತ ಮಕ್ಕಳಿಂದ ಹಿರಿಯರವರೆಗಿನ ಮನಸ್ಸನ್ನು ಹಾಳು ಮಾಡುತ್ತಿರುವ ಮಟ್ಟಿಗೆ ಬೆಳೆದು ಹೋಗಿದೆ. ಹತ್ತಿಪ್ಪತು ವರುಷದ ಹಿಂದೆ ಮಾಧ್ಯಮಗಳಿಗೆ ಅದರದ್ದೇ ಆದ ನಿಯಮಗಳಿತ್ತು ಆ ನಿಯಮಗಳನ್ನು ಜನರ ಒಳಿತಿಗಾಗಿ ಪಾಲಿಸುತಿದ್ದ ಚಾನೆಲ್ಗಳು ಇಂದು ಬರೇ ಹಣ ಸಂಪಾದನೆಯ ಗುರಿಯೊಂದಿಗೆ ಸತ್ಯವನ್ನು ಸುಳ್ಳಾಗಿಸಿ, ಸುಳ್ಳನ್ನು ಸತ್ಯವಾಗಿಸಿ ಬಿತ್ತರಿಸುವ ಕೆಲಸವನ್ನು ಮಾಡುತ್ತ ತನ್ನ ಹೊಟ್ಟೆಯನ್ನು ತುಂಬಿಸುತ್ತ ಇದ್ದಾರೆ. ಕೊರೋನ ಕಾಲದಲ್ಲಿ ಮನೆಯಿಂದ ಕಿತ್ತೊಗೆಸೆದ ಕೇಬಲ್ ಇಂದಿಗೂ ಇಲ್ಲ ಕಾರಣವಷ್ಟೇ, ನಮ್ಮನ್ನು ಅತಿಯಾಗಿ ಭಯಗೊಳಿಸಿ ದಿನಾಲೂ ಸ...