ಲೇಖನ (57) ಹೌದ ಅಪ್ಪಾ? ಒಳ್ಳೆಯ ಕೆಲಸಗಳನ್ನು ಮಾಡಿದ್ರೆ ಬೇಗ ದೇವರತ್ರ ಹೋಗ್ತಿವಂತೆ!

ಹೌದ ಅಪ್ಪಾ? ಒಳ್ಳೆಯ ಕೆಲಸಗಳನ್ನು ಮಾಡಿದರೆ ದೇವರು ಬೇಗ ನಮ್ಮನ್ನು ಕರೆಸಿಕೊಳ್ಳುತ್ತಾನಂತೆ! ಇಲ್ಲ ಮಗು, ನಿನಗೆ ಯಾರು ಹೇಳಿದ್ದು? ಮತ್ತೆ ಅಮ್ಮ ಹೇಳಿದ್ರು, ಪುನೀತ್ ರಾಜಕುಮಾರ್ ದೇವರ ಹತ್ತಿರ ಬೇಗ ಹೋಗಿ ಬಿಟ್ಟರು, ಯಾಕೆ ಕೇಳಿದಾಗ ಅವರು ತುಂಬಾ ಒಳ್ಳೆಯ ಕೆಲ್ಸ ಮಾಡುತಿದ್ದರಂತೆ! ಅದಕ್ಕೆ ಬೇಗನೆ ಹೋಗಿಬಿಟ್ಟರಂತೆ. ಈ ಮಾತು ನನ್ನ ಮಗುವಿನ ಬಾಯಲ್ಲಿ ಕೇಳಿದಾಗ ತಬ್ಬಿಬ್ಬಾದೆ. ಏನು ಹೇಳಬೇಕೆಂದು ತೋಚಲಿಲ್ಲ. ಮಕ್ಕಳ ಮನಸ್ಸು ಬಹಳ ಮುಗ್ದ, ಶುದ್ಧ, ಮಕ್ಕಳೆಂದರೆ ದೇವರು, ಕಲ್ಮಶವಿಲ್ಲದೆ ಜೀವಿಸುವ ಸುಂದರವಾದ ಜೀವನ. ಪುನೀತ್ ರಾಜ್ ಕುಮಾರ್ ರವರು ಅಗಲಿದ ಸಮಯದಲ್ಲಿ ಭಾರತೀಯ ಪ್ರವಾಸಿ ಪರಿಷತ್ ಕುವೈಟ್ ಕರ್ನಾಟಕ ಘಟಕ ಶೃದ್ದಂಜಲಿ ಕಾರ್ಯಕ್ರಮ ನೆರವೇರಿಸಿದಾಗ ಹೆಂಡತಿ ಮಕ್ಕಳೊಂದಿಗೆ ಹೋಗಿದ್ದೆ, ಕಾರ್ಯಕ್ರಮದಲ್ಲಿ ಎಲ್ಲರು ಗೌರವ ಸಮರ್ಪಿಸುವಾಗ ಮಕ್ಕಳು ಕೂಡ  ಹೂವನ್ನು ಹಾಕಿ ಅಗಲಿದ ಆತ್ಮಕ್ಕೆ ಶಾಂತಿ ಸಿಗಲೆಂದು ಕೈ ಮುಗಿದು ಬಂದಿದ್ದಾರೆ.  ಈ ಸಂಧರ್ಭದಲ್ಲಿ 2.5ವರುಷದ ನನ್ನ ಮಗಳು, 6 ವರುಷದ ಮಗ ಪುಷ್ಪವನ್ನು ಹಾಕಿ ಇಟ್ಟಿರುವ ಫೋಟೋಗೆ ಮುತ್ತನ್ನು ತಾನಾಗಿಯೇ ಕೊಟ್ಟಳು, ಇಲ್ಲಿ ಗಮನಿಸಿದರೆ ಮನುಷ್ಯ ಮಾಡುವ ಸತ್ಕಾರ್ಯಗಳು ವಿಶೇಷ ಶಕ್ತಿಯನ್ನು ಹೊಂದುತ್ತದೆ, ಆ ಕೆಲಸಕ್ಕೆ ಭೂಮಿಯಲ್ಲಿರುವ ಪ್ರತೀ ಜೀವಿಗಳು ಸ್ಪಂದಿಸುತ್ತವೆ, ತಾನಾಗಿಯೇ ಎಲ್ಲಾ ಒಳಿತಿನ ಜನರೊಂದಿಗೆ ಗೊತ್ತಿಲ್ಲದೇ ಸೇರಿಬಿಡುತ್ತದೆ.



         ನನಗೆ ಹೆಚ್ಚಾಗಿ ಚಲನಚಿತ್ರಗಳನ್ನು ನೋಡುವ ಅಭ್ಯಾಸವಿಲ್ಲ, ಆದರೆ ಪುನೀತ್ ರಾಜಕುಮಾರ್ ರವರು ತಮ್ಮ ವೃತ್ತಿಯನ್ನು ಮಾಡುತ್ತಲೇ, ಸಮಾಜಕ್ಕೆ ಬೇಕಾದಷ್ಟು ಕೊಟ್ಟು ಹೋಗಿದ್ದಾರೆ ಅನ್ನುವುದು ಅವರು ಅಗಲಿದ ನಂತರ ಜಗಕ್ಕೆ ಗೊತ್ತಾಯಿತು. ಕೋಟಿಗಟ್ಟಲೆ ಜನರ ಉಸಿರಾಗಿದ್ದ ಒಂದು ಜೀವ ಕಳೆದು ಹೋದಾಗ ನಂತರ ಬದುಕಿರುವ ಜನರ ಪಾಡು ಎಷ್ಟು ಭಯಾನಕ ವಾಗುತ್ತದೆ ಅಲ್ಲವೇ?

   ಬದುಕಿದರೆ ಆದರ್ಶವಾಗಿ ಬದುಕು, ಬದುಕಿದರೆ ವಂಚನೆ ಇಲ್ಲದೆ ಬದುಕು, ಬದುಕಿದರೆ ಸತ್ಯವಂತನಾಗಿ ಬದುಕು, ಬದುಕಿದರೆ ಗುಣವಂತನಾಗಿ ಬದುಕು. ಹೊಟ್ಟೆಕಿಚ್ಚು, ಮತ್ಸರ, ದಬ್ಬಾಳಿಕೆ, ದ್ರೋಹ ಇಂತಹ ಕೆಲಸಗಳನ್ನು ಮಾಡಿ ನೀನೆಷ್ಟು ಸಂಪಾದಿಸಿದರೂ ನಿನ್ನ ಬೆಲೆ ಏನೂ ಇರುವುದಿಲ್ಲ, ನಿನ್ನಲಿರುವ ಎಲ್ಲಾ ಐಶ್ವರ್ಯಗಳು ಶೂನ್ಯಕ್ಕೆ ಸಮಾನ. ಹೆಸರಿಗಾಗಿ ಸಮಾಜ ಸೇವೆಗೆ ಇಳಿಯಬೇಡ, ಹೆಸರಿಗಾಗಿ ಸಹಾಯ ಮಾಡಲು ಬೇಡ, ಹೆಸರಿಗಾಗಿ ಒಳಿತಿನ ಕೆಲಸಕ್ಕೆ ಇಳಿಯಬೇಡ, ನೀನು ಮಾಡುತ್ತಿರುವ ಸೇವೆ ನಿನಗೆ ತಿಳಿದು ಬದುಕಿದರೆ ಸಾಕು, ನಿನ್ನ ಆತ್ಮಕ್ಕೆ ವಂಚಿಸಿ ನೀನು ಬದುಕುತಿದ್ದರೆ ನಿನ್ನ ಕೊನೆಗಾಲಕ್ಕೆ ಪಶ್ಚಾತಾಪ ಪಡುವ ಅಗತ್ಯ ಬರುವುದಿಲ್ಲ! ನಿನ್ನ ಹೆಸರು ಅಮರವಾಗಿ ಉಳಿಯಬೇಕಿದ್ದರೆ ಸದ್ದಿಲ್ಲದೇ ನಿನ್ನ ಕೆಲಸವನು ಮಾಡುತ್ತಿರು, ಯಾರ ಪ್ರಶಸ್ತಿಗೂ ಕಾಯಬೇಡ, ನನ್ನ ಆತ್ಮೀಯ ಗೆಳೆಯನೊಬ್ಬನ ಮಾತು, ನೀನು ಮಾಡುತ್ತಿರುವ ಕೆಲಸ ನಿನ್ನ ತಂದೆ ತಾಯಿಗೂ, ಮನೆಯ ದೈವ ದೇವರಿಗೂ, ಮತ್ತು ನಂಬಿದ ದೇವರಿಗೆ ತಿಳಿದಿದ್ದರೆ ಸಾಕು. ನಿನಗೆ ಯಾವ ಸಮಯದಲ್ಲಿ ಏನು ಸಿಗಬೇಕೋ ದೇವರೇ ಕೊಡುತ್ತಾರೆ.

      THE PASSION OF INDIA (R)( ಭಾರತದ ಅನುರಾಗ ) ಈ ಗುಂಪಿನಲ್ಲಿ ಸ್ಪಷ್ಟ ಮನಸ್ಸಿನ ಮನುಜರ ಸರಪಳಿ ಗಟ್ಟಿಯಾಗಿರಲಿ. ಸೇರಲು ಬಯಸುವ ಪುಣ್ಯವಂತರಿಗೆ ಸ್ವಾಗತ. ಜಾತಿ ಮತ ಪಂಗಡ ದೇಶ ವಿದೇಶದ ಭೇದ ಭಾವಗಳಿಲ್ಲದೆ, ಮನುಜನಾಗಿ ಬದುಕುವ ನಿಮಗೆ ನನ್ನ ನಮನಗಳು

             ಶುಭವಾಗಲಿ 🌹

              ✍️ಮಾಧವ ನಾಯ್ಕ್ ಅಂಜಾರು. 







Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.

(ಲೇಖನ -100), "ಕುವೈಟ್ ಕಲಾ ಮಾಣಿಕ್ಯ" ಒಬ್ಬ ಕಲಾಗಾರನ ನಿಜವಾದ ಜೀವನ ಕ್ರಮ, ಶ್ರಮ ಮತ್ತು ಸಾಧನೆಯ ಹಾದಿ, ಕಲೆ ಎಂಬುವುದು ಎಲ್ಲರಿಗೂ ಒಲಿಯುವುದಿಲ್ಲ ಆದರೆ ಒಂದಲ್ಲ ಒಂದು ರೀತಿಯ ಕಲೆಯ ಶಕ್ತಿ ಪ್ರತಿಯೊಬ್ಬರಲ್ಲೂ ಇರುತ್ತದೆ