ಲೇಖನ (58) ವ್ಯವಸ್ಥೆಗಳನ್ನೇ ಬುಡಮೇಲು ಮಾಡುತ್ತಿರುವ ಭ್ರಷ್ಟ ರಾಜಕಾರಣ ಮತ್ತು ದುಷ್ಟ ರಾಜಕಾರಣ. ಯಾರೇನು ಉಳಿದರೇನು ಅಳಿದರೇನು ನನ್ನ ದ್ಯೇಯ ಕೋಟಿಗಟ್ಟಲೆ ಹಣಮಾಡುವುದು.
ಲೇಖನ (58) ವ್ಯವಸ್ಥೆಗಳನ್ನೇ ಬುಡಮೇಲು ಮಾಡುತ್ತಿರುವ ಭ್ರಷ್ಟ ರಾಜಕಾರಣ ಮತ್ತು ದುಷ್ಟ ರಾಜಕಾರಣ. ಯಾರೇನು ಉಳಿದರೇನು ಅಳಿದರೇನು ನನ್ನ ದ್ಯೇಯ ಕೋಟಿಗಟ್ಟಲೆ ಹಣಮಾಡುವುದು, ನಾವು ಜನರ ಉದ್ಧಾರಕ್ಕೆ ಇಳಿದರೆ ನಾಳೆ ಬದುಕಲು ಕಷ್ಟ ಪಡಬೇಕಾದೀತು, ಸಿಕ್ಕಿದ ಅವಕಾಶಗಳನ್ನು ಉಪಯೋಗಿಸಿ ಎಷ್ಟು ಹಣಗಳಿಸಲು ಸಾಧ್ಯವೋ ಅಷ್ಟು ಹಣವನ್ನು ಮಾಡಿಬಿಡಬೇಕು, ಜನರನ್ನು ಸರಿಮಾಡಲು ಯಾರಿಂದಲೂ ಸಾಧ್ಯವಿಲ್ಲ, ಅದು ಮಾಡುವುದು ಕೂಡ ಸರಿಯಲ್ಲ, ಎಷ್ಟು ಸೇವೆ ಮಾಡಿದರೂ ನಮಗೇನು ಲಾಭ? ಸರ್ಕಾರದ ಹಣ ನಾವೇನು ಜನರಿಂದ ನೇರವಾಗಿ ಪಡೆಯುತ್ತಿಲ್ಲ, 10 ಕೋಟಿ ಅನುದಾನವನ್ನು ಬಿಡುಗಡೆಗೊಳಿಸಿ ಲೆಕ್ಕ ಪತ್ರಗಳನ್ನು ಸರಿಯಾಗಿ ಜೋಡಿಸಿ ಒಂದಷ್ಟು ದಾಖಲೆಗಳನ್ನು ಮಾಡಿ ಎಲ್ಲಾ ಕೆಲಸಗಳು ಸರಿಯಾಗಿ ನಡೆದುಹೋಗಿವೆ, ಸರ್ಕಾರದ ಬೊಕ್ಕಸಕ್ಕೆ ಪಂಗನಾಮ ಹಾಕುವ ಪ್ರಸಂಗಗಳು ನಡೆದಿರಬಹುದು ಅಲ್ಲವೇ! ಇಲ್ಲಿ ಸಾಮಾನ್ಯ ಜನರ ಪಾಲೇನು? ಎಲ್ಲರೂ ಅವರವರ ಕೆಲಸಗಳಲ್ಲಿ ಮಗ್ನ, ರಾಜಕೀಯ ವ್ಯಕ್ತಿಗಳ ಸುದ್ದಿಗೆ ಹೋಗಬಾರದು ಅವರು ನಮ್ಮನ್ನು ಏನಾದರು ಮಾಡಿದರೆ? ನಾಳೆ ನನ್ನ ಹೆಂಡತಿ ಮಕ್ಕಳಿಗೆ ಯಾರು ಗತಿ? ಅವರು ಏನಾದರು ಮಾಡಿ ಸಾಯಲಿ, ನಮ್ಮ ಕೆಲಸವಾಗಬೇಕಾದ್ರೆ ನಾವು ಕೊಟ್ಟು ಮಾಡಿ ಬಿಡುವ, ಅಥವಾ ನಮ್ಮ ಪರಿಚಯದ ಜನ ಶಾಸಕರು ಅವರಲ್ಲಿ ಹೇಳಿದರೆ ಮಾಡಿಕೊಡುತ್ತಾರೆ, ಅವರುಗಳು ಮಾಡಲಾಗಲಿಲ್ಲವೆಂದರೆ ನಾವು ನಾಳೆ ಓಟು ಹಾಕುವುದು ಬೇಡ, ಮತ್ತೆ ಕಲಿಸೋಣ ಅವರಿಗೆ ಇಂತಹ ಚಿಂತನೆಗಳಲ್ಲಿಯೇ ಸಾಮಾನ್ಯ ಜನರು ತನ್ನ ಜೀವನ ತೆಗಿಯುತ್ತಿರುತ್ತಾರೆ, ನಿದರ್ಶನ ಗಳನ್ನು ನೀವು ನೋಡುತ್ತಿರಬಹುದು, ಒಂದು ಬಸ್ಸು ನಿಲ್ದಾಣ ಕಟ್ಟಲು 10 ಲಕ್ಷ ಬಿಡುಗಡೆಗೊಂಡರೆ ಬಸ್ಸು ನಿಲ್ದಾಣ ನೋಡುವಾಗ 3 ಲಕ್ಷವೂ ಖರ್ಚು ಮಾಡದೆ ಕಟ್ಟಿರುವಂತೆ ಕಾಣುವ ಸ್ಥಿತಿ. ಇದನ್ನು ಪ್ರಶ್ನೆ ಮಾಡದ ವಿದ್ಯಾವಂತರು, ಬುದ್ದಿವಂತರು, ಗುಣವಂತರು, ಮತ್ತು ಸ್ಥಿತಿವಂತರು. ನಮಗ್ಯಾಕೆ ಬೇಕು ಅದೆಲ್ಲ ನನ್ನ ಕೈಲಿ ಏನಾದರೂ ಹೋಗಿದ್ಯಾ? ಸರ್ಕಾರದ ಹಣ, ಹೋಗ್ಲಿ ಬಿಡಿ. ನಮಗೆ ಬೇಕಾದಷ್ಟು ಕೆಲ್ಸಗಳಿವೆ, ಅದಕೆಲ್ಲ ಹೋದ್ರೆ ನಮ್ಮ ಸಮಯ ವ್ಯರ್ಥ, ಸುಮ್ಮನಿದ್ದು ನಮ್ಮ ಕೆಲಸ ಮಾಡಿ ಇರೋಣ.
ನನ್ನ ಪ್ರೀತಿಯ ಜನರೇ! ಒಂದು ಸಲ ನಿಮ್ಮ ನಿಮ್ಮ ಊರಿನ ಸ್ಥಿತಿ ನೋಡಿಕೊಳ್ಳಿ, ಭಾರತದ ಸಾಮಾನ್ಯ ಜನರು ಬಹಳಷ್ಟು ಪ್ರಾಮಾಣಿಕರು, ಮುಗ್ದರು, ಎಷ್ಟು ಮುಗ್ದರೆಂದರೆ ತನ್ನ ಮನೆ ಮಾತ್ರ ಪ್ರಪಂಚ, ಹತ್ತಿರದ ಮನೆ ಬೆಂಕಿಯಲ್ಲಿ ಹೊತ್ತಿ ಉರಿದರು ಪರವಾಗಿಲ್ಲ, ನಮ್ಮ ಗ್ರಾಮ, ಪಟ್ಟಣ ಗಬ್ಬುನಾರುತಿದ್ದರೂ ತೊಂದರೆಯಿಲ್ಲ, ಮನೆಗೆ ಹೋಗುವ ದಾರಿ ದೀಪ ಹೋಗಿದ್ದರೂ ಪರವಾಗಿಲ್ಲ, ಕುಡಿಯುವ ನೀರಿನಲ್ಲಿ ಟ್ಯಾಂಕು ಸೋರಿ ನೀರು ಪಾಲಾಗುತ್ತಿದ್ದರು ನಮಗೆ ಅಡ್ಡಿಯಿಲ್ಲ, ಪಂಚಾಯತು, ನಗರಸಭೆ ಹಾಕಿರುವ ನೀರಿನ ಪೈಪುಗಳು ಯಾವ ಗುಣಮಟ್ಟದ್ದು, ಎಷ್ಟು ನೀರು ಎಲ್ಲಿ ಪೋಲಾಗುತ್ರಿದೆ ನಮಗೆ ಬೇಕಾಗಿಲ್ಲ, ಅರಣ್ಯ ಪ್ರದೇಶಗಳು ನಾಶವಾಗಿ ಹೋದರೆ ನಮಗೇನು? ನದಿ ನೀರು ಕಲ್ಮಶವಾದರೆ ನಾವೇನು ಮಾಡುವುದು? ನಮ್ಮ ವ್ಯವಸ್ಥೆಯೇ ಸರಿಯಾಗಿಲ್ಲವೆಂದರೆ ನಾವೇನು ಮಾಡುವುದು ಗಾಳಿ ಬಂದ ಕಡೆ ಹೋಗುವ, ಒಟ್ಟಾರೆ ಹೇಗಾದ್ರು ಮಾಡಿ ಬದುಕಬೇಕಲ್ಲವೇ! ನಾವೆಷ್ಟು ಸಂಕುಚಿತಾರಾಗಿದ್ದೇವೆ! ನಮಗೆ ಯಾವುದೂ ಅಗತ್ಯವಿಲ್ಲ! ಅರಣ್ಯ ಪ್ರದೇಶವನ್ನು ಬಿಲ್ಡರ್ಗಳು ನುಂಗಲಿ, ಹಳ್ಳಿಯನ್ನು ಕಾರ್ಖಾನೆಗಳು ನುಂಗಲಿ! ಹಳ್ಳಿಯಲ್ಲಿರುವ ಹಳೆಯ ಕಟ್ಟಡಗಳು ಬಿದ್ದು ಹೋಗಲಿ, ಸಾರ್ವಜನಿಕ ಶೋಚಾಲಯ ನೀರಿಲ್ಲದೆ ಗಬ್ಬು ನಾರುತ್ತಿರಲಿ, ಕೃಷಿ ಭೂಮಿಗಳು ಪಟ್ಟಣವಾಗಲಿ, ನಮಗೇನು ಅಲ್ಲವೇ? ಇದನೆಲ್ಲ ಸರಿ ಮಾಡಲು ಸಾಧ್ಯವೇ? ಯಾರು ಮಾಡುತ್ತಾರೆ?
ಸರ್ಕಾರಿ ಆಸ್ಪತ್ರೆಗಳಲ್ಲಿ ಅವ್ಯವಸ್ಥೆ ಇರಲಿ, ಕಟ್ಟಡ ಸುಣ್ಣ ಬಣ್ಣವಿಲ್ಲದೆ ಇರಲಿ, ಆಂಬುಲೆನ್ಸ್ ಒದಾಡದಿರಲಿ, ಭ್ರಷ್ಟ ಅಧಿಕಾರಿಗಳನ್ನು ಪ್ರಶ್ನೆ ಮಾಡಲು ಸಾಧ್ಯವೇ? ಪೊಲೀಸರಾಗಲಿ, ನ್ಯಾಯದಿಶಾರಗಲಿ, ನ್ಯಾಯವಾದಿಗಳೇ ಆಗಲಿ, ಎಲ್ಲರೂ ಸೇರಿ ನಿನ್ನನ್ನು ಮುಗಿಸಿಬಿಟ್ಟರೆ? ಹಾಗಾಗಿ ಸುಮ್ಮನಿದ್ದು ನನ್ನ ಕೆಲಸ ನಾನು ಮಾಡಿ ಬದುಕುತ್ತೇನೆ! ಹೀಗೆ ಆಲೋಚಿಸುವ 98 % ಜನರು ನಮ್ಮ ಅಕ್ಕ ಪಕ್ಕ ಇರಬಹುದು! ಒಂದೊಂದು ನನಗೂ ಅನಿಸುತ್ತದೆ! ಆದರೆ ನಾವೆಷ್ಟು ಜವಾಬ್ದಾರಿಯುತ ಪ್ರಜೆಗಳು? ನಾವು ಎಷ್ಟರಮಟ್ಟಿಗೆ ನಮ್ಮ ನಾಡಿನ ಎಳ್ಗತಿಗೆ ಹೋಗಿದ್ದೇವೆ? ನಮ್ಮ ಮನೆಗೆ ಯಾವೆಲ್ಲ ಜನರು ತೊಂದರೆಗಳನ್ನು ಮಾಡಲು ಭ್ರಷ್ಟ ರಾಜಕೀಯ ಮತ್ತು ದುಷ್ಟ ರಾಜಕೀಯವನ್ನು ಉಪಯೋಗಿಸಿದ್ದಾರೆ! ಒಮ್ಮೆ ಆಲೋಚಿಸಬೇಕಾಗುತ್ತದೆ ! ಪ್ರಬುದ್ಧತೆ ಮರಿಮಕ್ಕಳು ಮಾಡಿ ಓದಿಸಿ ಅವರಿಗೆ ಒಂದು ಒಳ್ಳೆಯ ಕೆಲಸ ಸಿಕ್ಕಿದರೆ ಸಾಕು ಎನ್ನುವುದು ಎಲ್ಲರಿಗೂ ಸಹಜವಾಗಿ ಬರುವಂತದ್ದೇ ಆದರೆ, ದೇಶವೆಂಬ ವ್ಯವಸ್ಥೆಯಲ್ಲಿ ಸಾವಿರಾರು ಅವವ್ಯವಸ್ಥೆ ಪ್ರಶ್ನೆಮಾಡುವ ಜನರು ಎಷ್ಟು ಜನರಿದ್ದಾರೆ? ದೇಶದ ಅಭಿಮಾನ ಬರೇ ಬಾವುಟದಲ್ಲಿ ಇದ್ದರೆ ಸಾಕೆ? ಅಥವಾ ಯುದ್ಧದಲ್ಲಿ ವೀರಮರಣ ಹೊಂದಿದ ಸೈನಿಕರಿಗೆ ನಮನ ಸಲ್ಲಿಸಿದರೆ ಸಾಕೆ? ನಮ್ಮೆಲ್ಲರ ಹಣ ಎಲ್ಲಿ ಹೇಗೆ ಎಷ್ಟು ಪ್ರಯೋಜನಕ್ಕೆ ಹೋಗುತ್ತಿದೆ? ನಮ್ಮ ಕಾರ್ಯಂಗ, ಶಾಸಕಾಂಗ, ನ್ಯಾಯಾಂಗವನ್ನು ಅರಿತು ಗೌರವಿಸಿ ನಡೆದುಕೊಳ್ಳುವ ಎಷ್ಟು ಅಧಿಕಾರಿಗಳು, ರಾಜಕೀಯ ವ್ಯಕ್ತಿ ಗಳಿದ್ದಾರೆ? ರಾಜಕೀಯ ಲಾಭ ಪಡೆದುಕೊಳ್ಳುವ ಅವರ ಅನುಯಾಯಿಗಳಿಗೆ ಮಾತ್ರ ವ್ಯವಸ್ಥೆಗಳ ಸ್ಪಂದನ, ಎಲ್ಲಾ ರೀತಿಯಲ್ಲಿ ರಕ್ಷಣೆಗಳು ಸಿಗುವುದಿದ್ದರೆ ಸಾಮಾನ್ಯ ಜನರಿಗೆ ಸುಳ್ಳು ಭರವಸೆಗಳನ್ನು ಕೊಡುವ ಅಧಿಕಾರಿಗಳು, ಜನಸೇವಕರು ನಮಗೆ ಅವಶ್ಯಕತೆ ಇದೆಯಾ?
TPI - The Passion Of India (R)ಭಾರತದ ಅನುರಾಗ, ಭಾರತ ದೇಶದಲ್ಲಿ ಪ್ರಬುದ್ಧ, ಜವಾಬ್ದಾರಿಯುತ ಜನರ ಸಂಖ್ಯೆ ಹೆಚ್ಚಾಗಲೆಂಬ ಹಾರೈಕೆಯೊಂದಿಗೆ.
✍️ಮಾಧವ ಅಂಜಾರು
Comments
Post a Comment