Posts

Showing posts from July, 2020

ಸಾವಿರ ಕನಸು (ಕವನ -95)

ಸಾವಿರ ಕನಸು ********* ತನ್ನ ಕಂದಮ್ಮ ಬೆಳೆಯುತ್ತಿರುವಾಗ ಸಾವಿರ ಕನಸನು ಹೊತ್ತುನಡೆದ ಪೋಷಕರಿಗೆ ಹೊತ್ತು ಗೊತ್ತಿಲ್ಲದೇ ವೃದ್ದಾಶ್ರಮ ತೋರಿಸಿಬಿಟ್ಟರು ಬೆಳೆದು ನಿಂತ ಮಕ್ಕಳು, ತನ್ನ ನೋವಮರೆತು ಜೀವಕ್ಕಿಂತ ಜಾಸ್ತಿ ಪ್ರೀತಿಸಿದ ಅಮ್ಮನ ಮರೆತು ಒಂದೊತ್ತು ತುತ್ತು ಕೊಡದ ಸ್ಥಿತಿಗೆ ತಲುಪಿಬಿಟ್ಟರು ಪೋಷಕರ ನೋವನರಿಯದ ಬಿಕನಾಶಿ ಮಕ್ಕಳು 😭 ✍️ಮಾಧವ ಅಂಜಾರು 🌹

ಕುರುಡ (ಕವನ -96)

ಕುರುಡ ***** ಆಯ್ಕೆಗಳು ಇಲ್ಲವಾದಾಗ ಆಸೆಗಳು ಇಲ್ಲವಾಗುತ್ತದೆ ಪ್ರೀತಿಯೇ ಇಲ್ಲವಾದಾಗ ಎಲ್ಲವೂ ಮರೆಯಾಗುತ್ತದೆ ಕಣ್ಣಿದ್ದು ಕುರುಡನಾಗಬೇಕು ಹೀಯಾಳಿಸುವವರ ಮುಂದೆ ನನ್ನ ನಾನು ಕಾಯಬೇಕಾದರೆ ಬದುಕಿದ್ದೂ ಸತ್ತಂತಿರಬೇಕು ತಿಳಿದು ಮಾಡುವ ತಪ್ಪಿಗೆ ಬುದ್ದಿಮಾತು ವ್ಯರ್ಥ ಅಳೆದು ಬದುಕುವ ಜನರಿಗೆ ವಿವರಣೆ ಮಾಡೋದು ವ್ಯರ್ಥ    ✍️ಮಾಧವ ಅಂಜಾರು 🌹

ಬದುಕಿದರೆ ಸಾಕು (ಕವನ -98)

ಬದುಕಿದರೆ ಸಾಕು ************* ನಾನು ಬದುಕಿದರೆ  ಸಾಕು ಎನ್ನ ತುತ್ತನು ನಾನೇ ತಿನ್ನುವ ಶಕ್ತಿ ಇರೋತನಕ ನಾನು ಬದುಕಿದರೆ ಸಾಕು ಎನ್ನ ಬಾಯಾರಿಕೆ ನಾನೇ ನೀಗಿಸುವ ತನಕ ನಾನು ಬದುಕಿದರೆ ಸಾಕು ಎನ್ನ ಕಾಲಲಿ ನಾನು ನಡೆಯುವತನಕ ನಾನು ಬದುಕಿದರೆ ಸಾಕು ಎನ್ನ ಮೊಗದಲಿ ಸಂತೋಷವಿರೋತನಕ ನಾನು ಬದುಕಿದರೆ ಸಾಕು ತಂದೆ ತಾಯಿಯ ಆಶೀರ್ವಾದ ಇರೋತನಕ ನಾನು ಬದುಕಿದರೆ ಸಾಕು ಹೆಂಡತಿ ಮಕ್ಕಳ ಪ್ರೀತಿ ಇರೋ ತನಕ,  ನಾನು ಬದುಕಿದರೆ ಸಾಕು ಸಮಾಜಕೆ ಒಳಿತು ಮಾಡೋತನಕ ನಾನು ಇದ್ದರೆ ಸಾಕು ಎನ್ನ ನೋವನು ಅರ್ಥಮಾಡುವ ಜನರಿರೋತನಕ ನಾನು ಉಳಿದರೆ ಸಾಕು ಪಾಪಿಗಳು ಅಳಿಯೋತನಕ ನಾನು ಉಸಿರಾಡಿದರೆ ಸಾಕು ಕಣ್ಣೀರ ಒರೆಸೋರಿರೋತನಕ ನಾನು ಬೆಳೆದರೆ ಸಾಕು ಎನ್ನ ಹಾರೈಸುವ ಸಜ್ಜನಿರೋತನಕ ನಾನು ಬದುಕಿದರೆ ಸಾಕು ದುಡಿದು ತಿಂದು ಬದುಕುವತನಕ ನಾನು ಬದುಕಿದರೆ ಸಾಕು ದೇವನ ಕರುಣೆ ಸದಾ ನನ್ನಲಿರೋತನಕ ✍️ಮಾಧವ ಅಂಜಾರು 🌹🙏

ದೇವರಂತೆ ಇರುವನು (ಕವನ -99)

ದೇವರಂತೆ ಇರುವನು *************** ಸತ್ಯ ಹೇಳುತ್ತಿರುವವರಿಗೆ ಸತ್ಯವನ್ನು ಬಿಟ್ಟು ಸುಳ್ಳು ಹೇಳೋಕೆ ಮುಜುಗರವಾಗುತ್ತದೆ  ಸುಳ್ಳು ಹೇಳುವವರಿಗೆ  ಸತ್ಯವನ್ನು ಬಿಟ್ಟು  ಸುಳ್ಳು ಹೇಳೋದಕ್ಕೆ  ಮುಜುಗರವಿಲ್ಲ  ಕಳ್ಳತನ ಮಾಡುತ್ತಿದ್ದವನಿಗೆ  ಕಳ್ಳತನ ಮಾಡದಿದ್ದರೆ  ಇಂದು ಸಂಪಾದಿಸಿಲ್ಲ  ಅನ್ನೋದು ಬಹಳ ಚಿಂತೆ  ಬಡವ-ಬಲ್ಲಿದ ನಿಗೆ  ಸಹಾಯ ಮಾಡುತ್ತಿದ್ದವ  ಇಂದು ಸಹಾಯ ಮಾಡಲು  ಆಗಲಿಲ್ಲವೆಂದರೆ ಬರೋದಿಲ್ಲ ನಿದ್ದೆ  ಎಲ್ಲರಿಗಾಗಿ ಇರುವವನು  ದೇವರಂತೆ ಇರುವನು  ಸಮಾಜವನ್ನು ಕೆಡಿಸುವವನು  ರಾಕ್ಷಸನಂತೆ ಇರುವನು ✍️ ಮಾಧವ ನಾಯ್ಕ್ ಅಂಜಾರು🙏

ನಿಲ್ಲಬಹುದು ಜೀವನ (ಕವನ -100)

ನಿಲ್ಲಬಹುದು ಜೀವನ *************** ನಾ ಬರೆವ ಕವನ ಅದೆನ್ನ ಜೀವನ ನೀ ಎನ್ನ ಗೆಳತಿಯೋ ನಾ ನಿನ್ನ ಗೆಳೆಯನೋ ಅದೊಂದು ಕ್ಷಣ ನನ್ನಲಿರೋ ಭಾವನೆ ಮೂಡಿ ಬರುತಿದೆ ದಿನಾ ಜೊತೆಯಲಿರು ನೀ ಎನ್ನ ಜೀವನ ಪಾವನ, ನಾ ಬರೆವ ಕವನ ಅದೆನ್ನ ಪ್ರಾಣ ನೀ ಎನ್ನ ಒಡತಿಯೋ ನಾ ನಿನ್ನ ಒಡೆಯನೋ ಅದೊಂದು ಕ್ಷಣ ನನ್ನಲಿರೋ ಕರುಣೆ ಹೊರಹೊಮ್ಮುತಲಿದೆ ದಿನಾ ಹೇಳುತಿರು ನೀ ಬೆಳಗಲಿ  ಜೀವನ, ನಾ ಬರೆವ ಕವನ ಅದು ನಿನ್ನ ಜೀವನ ಓದಿ ಹೇಳುತಿರು ನೀ ಸಂತೋಷದ ಕ್ಷಣ ಹಾಡುತಿರು ನೀ ಇಷ್ಟಬಂದ  ಸ್ವರದಲಿ ಇಂದಿಗೋ ನಾಳೆಗೊ ನಿಲ್ಲಬಹುದು ಜೀವನ ಉಳಿಯಬಹುದೆಂಬ ಆಸೆ ಎನ್ನ ಜೀವನ ಕವನ ✍️ಮಾಧವ ನಾಯ್ಕ್ ಅಂಜಾರು 🌹🙏