Posts

Showing posts from 2026

ಪ್ರಯತ್ನ

ದೇವರು ಬರೆವ ಹಣೆಬರಹಕ್ಕೆ  ಹೊಣೆಯಾದರೂ  ರಕ್ಕಸರು ಬರೆವ ಹಣೆಬರಹಕ್ಕೆ  ಹೊಣೆಯಾಗಬೇಡ  ನೀತಿವಂತರ ಮಾತಿಗೆ  ಬೆಲೆಕೊಟ್ಟರೂ  ಪಾಪಿಗಳ ಮಾತಿಗೆ  ತಲೆಬಾಗಬೇಡ  ಜೀವನವೆಂಬ ಸಾಗರದಲ್ಲಿ  ಬಿರುಗಾಳಿ ಬಂದರೂ  ದಡ ಸೇರುವ ಪ್ರಯತ್ನ  ನಿಲ್ಲಿಸಲೇ ಬೇಡ.      ✍🏻ಮಾಧವ ಕೆ ಅಂಜಾರು 

ನೆಮ್ಮದಿಯಿತ್ತು

ಅವನು ತಂದ ಒಡವೆಯೊಳಗೆ  ಬಡವರ ಶಾಪವಿತ್ತು  ದರೋಡೆಯ ಮೂಲವಿತ್ತು  ಮೋಸದ ಜಾಲಾವಿತ್ತು  ಕಣ್ಣೀರ ಹನಿಯಿತ್ತು, ಇವನು ತಂದ ಒಡವೆಯೊಳಗೆ  ನಿಯತ್ತಿನ ಏಣಿಇತ್ತು  ಸಂತೋಷದ ಕ್ಷಣಗಳಿತ್ತು  ಪ್ರೀತಿಯ ಪುಟಗಳಿತ್ತು  ಭರವಸೆಯ ದಿನಗಳಿತ್ತು  ಅವನ ಅಂತಸ್ತು ಬೆಳೆಯುತ್ತಿತ್ತು  ಆತ್ಮಸಾಕ್ಷಿ ಅಳುತ್ತಳಿತ್ತು  ಇವನ ಅಂತಸ್ತು ಬೆಳೆಯುತಿತ್ತು  ಅಂತರಾಳದ ನೆಮ್ಮದಿಯಿತ್ತು.     ✍🏻ಮಾಧವ. ಕೆ ಅಂಜಾರು 

ವೃತ್ತಿಯಾಗಿತ್ತು

ಮೋಸ ಮಾಡುವುದೇ  ಅವನ ವೃತ್ತಿಯಾಗಿತ್ತು  ಅದಕ್ಕೆ ಮೋಸಮಾಡುತ್ತಲೇ  ಅವನಿಗೆ ತೃಪ್ತಿಯಾಗುತಿತ್ತು, ಕಾಸು ಮಾಡುವುದೇ  ಅವನ ಗುರಿಯಾಗಿತ್ತು  ಅದಕ್ಕೆ ಸುಳ್ಳು ಹೇಳುತ್ತಲೇ  ಅವನಿಗೆ ದಿನಹೋಗುತಿತ್ತು, ವೇಷ ಬದಲಿಸುವುದೇ  ಅವನ ಹವ್ಯಾಸವಾಗಿತ್ತು  ಅದಕ್ಕೆ ಬಣ್ಣ ಬಳಿಯುತ್ತಲೇ  ಅವನ ಬಣ್ಣ ಬಯಲಾಗುತಿತ್ತು.       ✍🏻ಮಾಧವ ಕೆ ಅಂಜಾರು 

ಕೃತಕ ಬುದ್ಧಿಮತ್ತೆ- (Artificial Inteligence) ಮತ್ತು ಬುದ್ಧಿವಂತಿಕೆ.

Image
ಕೃತಕ ಬುದ್ಧಿಮತ್ತೆ- ( Artificial Inteligence ) ಮತ್ತು ಬುದ್ಧಿವಂತಿಕೆ. ವಿಜ್ಞಾನ ಮುಂದುವರಿಯುತ್ತಿರುವಂತೆ  ತಾಂತ್ರಿಕ ಕ್ಷೇತ್ರದಲ್ಲಿ ಬಹಳಷ್ಟು ಬೆಳವಣಿಗೆಗಳನ್ನು ಕಾಣುತ್ತಿರುವ ನಾವುಗಳು, ಇತ್ತೀಚಿನ ದಿನಗಳಲ್ಲಿ AI ಟೆಕ್ನಾಲಜಿಯನ್ನು ಹೆಚ್ಚಾಗಿ ಉಪಯೋಗಿಸಿಕೊಳ್ಳುತ್ತಿದ್ದೇವೆ. ಅದರಲ್ಲೂ ವಿಭಿನ್ನ ಕಂಪನಿಗಳ ವಿವಿಧ ತರಹದ ಅಪ್ಲಿಕೇಶನ್ ಅಭಿವೃದ್ಧಿ ಪಡಿಸಿ ತನ್ನ ಗ್ರಾಹಕರನ್ನು ಬೆಳೆಸಿಕೊಳ್ಳುತ್ತಿದೆ. ಈ AI ಟೆಕ್ನಾಲಜಿ, ರೋಬೋಟ್, ಕಂಪ್ಯೂಟರ್, ವಿಮಾನ, ಮೊಬೈಲ್ ಹಾಗೂ ಯುದ್ಧ ತಂತ್ರಗಳಲ್ಲಿ ಕೂಡ ಉಪಯೋಗಿಸುವ ಮಟ್ಟಿಗೆ ಬೆಳೆದಿದ್ದು ಇದೊಂದು ಬಹಳ ದೊಡ್ಡ ಬದಲಾವಣೆಯಾಗಿದೆ. ಅದರೊಂದಿಗೆ ಅವಲಂಬಿತಾರಗುತ್ತಿರುವ ನಾವು ನಮ್ಮ ಸ್ವತಃ ಬುದ್ದಿವಂತಿಕೆಯನ್ನು ತೀರಾ ಕಡಿಮೆಯಾಗಿ ಉಪಯೋಗಿಸುವ ಮಟ್ಟಕ್ಕೆ ಬರುತ್ತಿದ್ದೆವೋ ಅನಿಸುತ್ತಿದೆ. ಅದರಲ್ಲೂ ಒಂದು ಕಾಲದಲ್ಲಿ ತೆಗೆದ ಕಪ್ಪು ಬಿಳಿ ಚಿತ್ರಗಳನ್ನು  ಇಂದಿನ ಯುಗದಲ್ಲಿ ಕುಣಿಯುವಂತೆ, ಮಾತನಾಡುವಂತೆ ಮಾಡುತ್ತಿರುವ AI ಇನ್ನೂ ಮುಂದಿನ ದಿನಗಳಲ್ಲಿ ಏನೆಲ್ಲಾ ಮಾಡಬಹುದು ಅಲ್ಲವೇ? ಇಲ್ಲಿ ಮನುಷ್ಯನ ಬುದ್ದಿವಂತಿಕೆ ಏನನ್ನೂ ಮಾಡಬಹುದು ಎಂಬ ಸಂದೇಶ ಕೊಡುತ್ತಿದೆ.           ಕೃತಕ ಬುದ್ದಿವಂತಿಕೆ ಬುದ್ದಿವಂತರಿಂದಲೇ ಮಾಡಲ್ಪಟಿದ್ದು ಆದರೆ ಅದನ್ನು ತಿಳಿಯದ ಇಂದಿನ ಕೆಲವು ಮಕ್ಕಳು ತನ್ನ ದೈನಂದಿನ ಚಟುವಟಿಕೆಗಳಲ್ಲಿ ಅತಿಯಾಗಿ ಅವಲಂಬಿತರಾಗುತ್ತಿದ್ದ...