Posts

Showing posts from December, 2023

ಲೇಖನ -116) ಇಸವಿ 2024 ರ, 24 ಕನಸುಗಳು ನನಸಾಗಲಿ ನಮ್ಮ ನಿಮ್ಮೆಲ್ಲರ ಬದುಕು ಹಸನಾಗಲಿ,

Image
✍️Madhav K Anjar (ಲೇಖನ -116) ಇಸವಿ 2024 ರ, 24 ಕನಸುಗಳು ನನಸಾಗಲಿ ನಮ್ಮ ನಿಮ್ಮೆಲ್ಲರ ಬದುಕು ಹಸನಾಗಲಿ,  ವರುಷದ ಕೊನೆಯ ದಿನದಲ್ಲಿ ನಾವೆಲ್ಲರೂ ಭವ್ಯ ಭಾರತದ ಕನಸಿಗೆ ಸೇತುವೆಯಾಗೋಣ, ಡಿಸೆಂಬರ್ 31, 2023. ರ ರಾತ್ರಿ 12 ಗಂಟೆಗೆ ಎಲ್ಲರೂ ಹೊಸ ವರುಷವನ್ನು ಸ್ವಾಗತಿಸಲು ತಯಾರಿಯಲ್ಲಿದ್ದೀರಾ?, ಹೆಚ್ಚಿನ ಜನರು ತಮ್ಮ ಗೆಳೆಯ ಗೆಳತಿ ಕುಟುಂಬ ಮತ್ತು ಸಂಗಡಿಗರೊಂದಿಗೆ ಸೇರಿ ವಿಭಿನ್ನ ರೀತಿಯ ಆಚರಣೆಗೆ ಅಣಿಯಗುತ್ತೀರಿ ಆದರೆ ನಮ್ಮ ಆಚರಣೆ ಕೇವಲವಾಗಿ ಮೋಜು ಮಸ್ತಿಗೆ ಸೀಮಿತವಾಗಿರದೆ ಕೆಲವೊಂದು ಕನಸುಗಳ ಜೊತೆಗೆ ಆಚರಿಸುವಂತಾಗಲಿ.  ಸಾವಿರಾರು ಕನಸುಗಳನ್ನು ಹೊತ್ತು  ಮುನ್ನುಗ್ಗುತ್ತಿರುವ ನಮ್ಮ ದೇಶಕ್ಕಾಗಿ ನಿಮ್ಮೆಲ್ಲರ ಕಿರು ಕಾಣಿಕೆ ಇರಲಿ. ಅದೇನು ಅಂತಹದು ಆಲೋಚನೆಗಳು ನಿಮ್ಮ ಮನಸಲ್ಲಿ ಮೂಡಿಲ್ಲವೇ, ಇಂದು ಹೊಸ ಚಿಂತನೆಗಳೊಂದಿಗೆ ಹೊಸ ವರುಷವನ್ನು ಸ್ವಾಗತಿಸಲು ನಾವೆಲ್ಲರೂ ತಯಾರಾಗೋಣ.           ಭಾರತವೆಂಬುವುದು ಸೌಭಾಗ್ಯವಂತರ ದೇಶ, ಪ್ರಪಂಚದಲ್ಲಿ ಇನ್ನೆಲ್ಲೂ ಇಲ್ಲದ ಸ್ವಾತಂತ್ರ್ಯ, ನಮ್ಮ ದೇಶದ ಮಣ್ಣಲ್ಲಿ, ಪ್ರತೀ ಪ್ರಜೆಗೂ ಇಲ್ಲಿದೆ ಹಕ್ಕು ಸಾಧಿಸಬೇಕೆಂದು ಛಲವಿದ್ದರೆ ಭಾರತ ಸೂಕ್ತ ಪ್ರದೇಶ, ಸಂಪತ್ತಿನ ಆಗರವಾಗಿದ್ದ ದೇಶವನ್ನು ಅದೆಷ್ಟು ವಿದೇಶಿಗರು ಬಂದು ಲೂಟಿ ಮಾಡಿದ್ದರೂ ಬರಿದಾಗಿಸಲು ಸಾಧ್ಯವಾಗಲಿಲ್ಲ, ಅನೇಕ ದೇಶ ಭಕ್ತರನ್ನು ಕೊಂದು ರಕ್ತ ಕುಡಿದಿದ್ದರೂ ಭಾರತವನ್ನು ನಾಶ ಮಾ...

(ಲೇಖನ -115)ಸಂಗೀತವನ್ನು ಕೇಳುವ ಹವ್ಯಾಸವನ್ನು ಬೆಳೆಸಿಕೊಳ್ಳಿ, ಮುಂಜಾನೆಯ ಸಂಗೀತ, ಮದ್ಯಾಹ್ನದ ಸಂಗೀತ, ಸಾಯಂಕಾಲ ದ ಸಂಗೀತ ಇದರಲ್ಲಿ ವ್ಯತ್ಯಾಸ ತಿಳಿದುಕೊಂಡು ಮನಸ್ಸನ್ನು ಹಗುರಗೊಳಿಸಿ.

Image
✍️Madhav. K. Anjar. (ಲೇಖನ -115) ಮನ  ತಣಿಸುವ ಸಂಗೀತ - Music,  ಸಂಗೀತಕ್ಕೆ ಸೋಲದೆ ಇರುವ ಜೀವಿಗಳಿಲ್ಲ, ಸಂಗೀತ ಲೋಕದಲ್ಲಿ ಮುಳುಗಿದಾಕ್ಷಣ ಎಲ್ಲವನ್ನೂ ಮರೆಯುವ ಅನೇಕ ಸಂಧರ್ಭಗಳನ್ನು ನಾವೆಲ್ಲರೂ ಅನುಭವಿಸಿರುತ್ತೇವೆ. ಸಂಗೀತಕ್ಕೆ ಅದೇನು ಶಕ್ತಿ ಅಲ್ಲವೇ? ರಾಗ, ಲಯ, ತಾಳ ಎಲ್ಲವನ್ನೂ ಸರಿಯಾಗಿಸಿ ಹೊರ ಹೊಮ್ಮವ ಸ್ವರ ಅದೆಷ್ಟು ಮನಸುಗಳನ್ನು ಶಾಂತಿಯಾಗಿಸುತ್ತದೆ, ಸ್ವರದೊಂದಿಗೆ ಜೊತೆಯಾಗುವ ಸಂಗೀತ ಸಾಧನಗಳು ಸಂಗೀತಗಾರರ ಕಂಠಕ್ಕೆ ಮತ್ತಷ್ಟು ಮೆರುಗು ಕೊಡುತ್ತವೆ. ಸಂಗೀತ ಕಲೆ ಕೆಲವೇ ಕೆಲವರಲ್ಲಿ ಇರುತ್ತದೆ, ಹಾಡುವುದು ಅಷ್ಟು ಸುಲಭವೂ ಅಲ್ಲ, ಕೇಳುಗರಿಗೆ ಹಾಡುವುದು ಸುಲಭವಾಗಿ ಕಂಡರೂ, ಹಾಡನ್ನು ಹಾಡಿದಾಗಲೇ ಅದರ ಮರ್ಮ ಗೊತ್ತಾಗುವುದು. ಹಾಡು ಉತ್ತಮವಾದ ಸ್ವರದಿಂದ ಕೂಡಿದ್ದರೆ ಮಾತ್ರ ಕೇಳಲು ಇಂಪಾಗಿರುತ್ತದೆ,ನಮ್ಮ ಸಂತೋಷವನ್ನು ಹಂಚಿಕೊಳ್ಳುವ ಸಂಧರ್ಭಗಳಲ್ಲಿ, ಮನಸ್ಸಿಗೆ ಬೇಸರವಾದಾಗ, ಅಥವಾ ಒಬ್ಬಂಟಿತನದ ಸಮಯದಲ್ಲಿ ಹಾಡನ್ನು ಕೇಳುತ್ತ ಮೈ ಮರೆಯುತ್ತೇವೆ ನಮಗೆ ಅರಿವಿಲ್ಲದೆ,  ಪ್ರತಿಯೊಂದು ಸಂಗೀತ ಸಾಧನಗಳಲ್ಲಿ ಹೊರ ಹೊಮ್ಮವ ಸ್ವರಕ್ಕೆ ವಿಶಿಷ್ಟ ಶಕ್ತಿ ಇರುತ್ತದೆ.  ಕೊಳಲು ಊದುವ ಸಂಧರ್ಭದಲ್ಲಿ ದನ ಕರುಗಳು ತನ್ನ ಕಿವಿಯನ್ನು ನೇರ ಮಾಡಿಕೊಂಡು ಕೊಳಲಿನ ದನಿಯನ್ನು ಆಲಿಸುವ, ಮತ್ತು ಅದರಲ್ಲಿ ಹೊಮ್ಮವ ಸಂಗೀತಕ್ಕೆ ಕುಣಿಯುವ ಪ್ರಸಂಗವನ್ನು ನಾವು ನೋಡುತ್ತೇವೆ, ಹಾಗೆಯೇ ಭಜನೆ ಸಂಕೀರ್ತನೆ, ರಸ ಮಂಜರಿ ಇಂತಹ ಅನ...

(ಲೇಖನ -114) - ದೈಹಿಕ ಆರೋಗ್ಯ ಮತ್ತು ಮಾನಸಿಕ ಆರೋಗ್ಯ

Image
(ಲೇಖನ -114) - ದೈಹಿಕ ಆರೋಗ್ಯ ಮತ್ತು ಮಾನಸಿಕ ಆರೋಗ್ಯ -ದೈಹಿಕವಾಗಿ ಜೀವದ ಪ್ರತಿಯೊಂದು ಅಂಗಗಳು  ಸರಿಯಾಗಿ ಕೆಲಸ ಮಾಡುತ್ತಾ, ಆರೋಗ್ಯದಲ್ಲಿ ಯಾವುದೇ ಏರುಪೇರುಗಳಿಲ್ಲದೆ ಚೆನ್ನಾಗಿದ್ದರೂ ಮಾನಸಿಕವಾಗಿ ಸರಿಯಾಗಿಲ್ಲದಿದ್ದರೆ ಅವರ ಬದುಕು  ಬಹಳ ದೊಡ್ಡ ಸಮಸ್ಯೆಯಾಗಿ ಮಾರ್ಪಾಡಾಗಿರುತ್ತದೆ. ಜೀವದ  ಪ್ರತಿಯೊಂದು ಅಂಗಗಳು  ಮಾನವನಿಗೆ  ಅಥವಾ  ಪ್ರಾಣಿಗಳಿಗೆ ಬಹಳ ಪ್ರಾಮುಖ್ಯ, ಒಂದು ಸಲ  ಅಂಗಾಂಗಗಳನ್ನು ಕಳೆದುಕೊಂಡಾಗ  ಅದರಲ್ಲಾಗುವ  ತೊಂದರೆಗಳು  ಅನುಭವಿಸಿದವರಿಗೆ ಮಾತ್ರ ಗೊತ್ತು. ಜೀವ ಸರಿಯಾಗಿ ಇರುವಾಗ ತಮ್ಮ ಅಜಾಗ್ರತೆಯಿಂದ ಅಥವಾ ಅವಘಡಗಳಲ್ಲಿ  ಅದೆಷ್ಟೋ ಜನರು  ಶಾಶ್ವತವಾಗಿ  ಅಂಗವಿಕಲರಾಗುತ್ತಾರೆ. ರೋಗಕ್ಕೆ ತುತ್ತಾಗಿ ಅಂಗವಿಕಲರಾದಾಗ ಮಾನಸಿಕವಾಗಿ ಕುಗ್ಗಿ ಹೋಗಿ ಅಲ್ಲಿ ಬದುಕಲು ಆಗದೇ ಇಲ್ಲಿ ಜೀವಿಸಲೂ ಆಗದೇ ಕಷ್ಟ ಪಡುವ ಜೀವಗಳು ನಮ್ಮ ಕಣ್ಣ ಮುಂದೆ ಕಾಣುತಿರುತ್ತದೆ.        ಈ ವಿಷಯದಲ್ಲಿ, ಕಷ್ಟಗಳು  ನೋಡುವವರ ಕಣ್ಣಿಗೆ  ಗೊತ್ತಾಗುವುದಿಲ್ಲ, ನಿಜವಾಗಿ  ತೊಂದರೆಗೆ  ಒಳಪಟ್ಟು  ಜೀವಿಸುವವರು  ಅನೇಕ ಮಂದಿ ನಮ್ಮ ಸಮಾಜದಲ್ಲಿದ್ದಾರೆ. ಹೆಚ್ಚಿನ ಜನರು ಆಸ್ಪತ್ರೆಯಲ್ಲಿ ಜೀವನ್ಮರಣದಲ್ಲಿ, ಮತ್ತು ಅನೇಕ ಜನರು ತಮ್ಮ ಮನೆಗಳಲ್ಲಿ ತೊಂದರೆಗಳೊಂದಿಗೆ ಬದುಕುತಿದ್ದಾರೆ. ಆಕಸ್ಮಿಕ ಘಟನೆಗಳಿಗೆನೂ ಮಾ...

ನಾನಿನ್ನ ನೆನೆದಾಗ!

ಯಾಕಿಷ್ಟು ನಿನ್ನ ಕನಸು ಯಾಕಿಷ್ಟು ನಿನ್ನ ನೆನಪು ತುಂಟಾಟ ನಿನ್ನ ಪಾಠ ಪ್ರೀತಿಯ ನಿನ್ನ ನೋಟ ಹಗಲಿರುಳು ಕಾಡುತಿದೆ ಕದ್ದು ಬಿಟ್ಟೆಯಾ ನನ್ನ ಮನಸು! ಮುಗುಳುನಗೆ ಕಂಡಾಗ ನೀನೆದುರು ನಿಂತಾಗ ಜಗವನ್ನೇ ಮರೆಯುವೆ ನಿನ್ನೊಂದಿಗೆ ಬೆರೆತಾಗ ಪ್ರೇಮದ ಪಾಠವ ಕೇಳುತ್ತ ಕುಳಿತಾಗ! ಸಾವಿರ ಜನ್ಮದ ಪುಣ್ಯದ ಫಲವೋ ಬಾಳಿನ ಪುಟಗಳ ನವವಿಧ ಅದ್ಯಾಯ ಬರೆಯುವ ನೀನಂತೂ ಜೊತೆಯಾಗಿರುವೆಯಾ  ನಾನಿನ್ನ ನೆನೆದಾಗ!      ✍️ ಮಾಧವ. ಕೆ. ಅಂಜಾರು