(ಲೇಖನ -81) ನಾಳೆ ಎಂಬುದು ಕೊನೆಯ ದಿನವಾದರೆ? ಇಂದು ಆಸೆಗೆ ಕೊನೆಯಿರಬಹುದೇ?

 (ಲೇಖನ -81) ನಾಳೆ ಎಂಬುದು ಕೊನೆಯ ದಿನವಾದರೆ? ಇಂದು ಆಸೆಗೆ ಕೊನೆಯಿರಬಹುದೇ? ಬಯಕೆಗಳು ಸಾವಿರಾರು, ಕನುಸುಗಳು ಸಾವಿರಾರು, ಸಮಸ್ಯೆಗಳು ಸಾವಿರಾರು, ದುಃಖ ದುಮ್ಮಾನಗಳು ನಮ್ಮ ಜೀವನದಲ್ಲಿ ವಿವಿಧ ರೂಪದಲ್ಲಿ ಬರುತ್ತಿರುತ್ತವೆ, ಬಂದು ಹೋಗುತ್ತಿರುತ್ತವೆ. ಯಾವ ಸಂದರ್ಭದಲ್ಲಿ ಯಾವ ವಿಚಾರಗಳು  ನಮ್ಮನ್ನು  ಖುಷಿಗೊಳಿಸುತ್ತದೋ, ಯಾವ ವಿಚಾರಗಳು ನಮ್ಮನ್ನು ಸಂತೋಷಗೊಳಿಸುತ್ತದೆ ಅನ್ನೋದನ್ನ ಒಮ್ಮೊಮ್ಮೆ ನಮಗೆ ಊಹಿಸಲಸಾಧ್ಯ. ನೀವು ಬಯಸಿದ್ದು ಸಿಗದೇ ಇದ್ದಾಗ ಬೇಸರಪಟ್ಟು ಅಲ್ಪ ಸಮಯದ ನಂತರ ತನ್ನನ್ನು ತಾನೇ ಸಮಾಧಾನಪಡಿಸಿಕೊಂಡು ಮುಂದುವರೆಯುವ ಮನಸ್ಥಿತಿ ಕೆಲವರಿಗೆ ಆದರೆ, ಬೇಸರವನ್ನು ತಡೆದುಕೊಳ್ಳಲಾಗದೆ ತನ್ನನ್ನು ತಾನೇ ಶಪಿಸಿಕೊಳ್ಳುವ ಕೆಲವರು, ಸದಾ ಚಂಚಲತೆಯಿಂದ ಕೂಡಿರುವ ಮನಸಿಗೆ ಎಲ್ಲಾ ಬೇಕುಗಳ ನಡುವೆ ತನ್ನ ಹತೋಟಿಯನ್ನು ಕಳೆದುಕೊಳ್ಳುವ ಸ್ಥಿತಿ. ಮಕ್ಕಳಿಗೆ ತಂದೆ ತಾಯಿಯ ಮಮತೆಯ ಕೊರತೆ, ಹೆಂಡತಿಗೆ ಗಂಡನ ಪ್ರೀತಿಯ ಕೊರತೆ, ಗಂಡನಿಗೆ ಹೆಂಡತಿಯ ಆರೈಕೆಯ ಕೊರತೆ, ಗೆಳೆಯ ಗೆಳತಿಯರಿಗೆ ಆಗಾಗ ಬಿಸಿ ತಟ್ಟುವ ವಿಶ್ವಾಸದ ಕೊರತೆ. ಹಾಗೆಯೇ ಸಂಬಂಧಿಗಳಿಗೆ ನನ್ನನ್ನು ಯಾರೂ ಗಮನಿಸುತ್ತಿಲ್ಲ ಎಂಬ ಕೊರತೆ. ಈ ಕೊರತೆಯ ಪಟ್ಟಿಯಲ್ಲಿ ಹೆಚ್ಚಾಗಿ ಎಲ್ಲರೂ ಸಮಾನರು. ಏಕೆಂದರೆ ಒಂದಲ್ಲ ಒಂದು ರೀತಿಯಲ್ಲಿ ಎಲ್ಲಾ ಬಾಂಧವ್ಯದಲ್ಲಿ ಅತಿಯಾದ ನಿರೀಕ್ಷೆಯನ್ನು ಇಟ್ಟು ಬದುಕುವ ನಾವೆಲ್ಲರೂ ಒಂದೊಂದು ಸಲ ವಿಪರೀತ ಮನೋವೇದನೆಗೆ ಒಳಗಾಗಿ ಕೊರ ಗುತ್ತಾ ಬದುಕುತ್ತಿರುತ್ತೇವೆ. ಕೆಲವರು ಇಲ್ಲ ಇಲ್ಲವೆಂದು ತೋರ್ಪಡಿಸಿಕೊಂಡರು, ಅವರ ನಡತೆಯಲ್ಲಿ  ವ್ಯತ್ಯಾಸವನ್ನು ಕಂಡಾಗ ಅರಿತುಕೊಳ್ಳಬಹುದು, ಆದರೆ ನಿರ್ದಿಷ್ಟವಾಗಿ ಸಮಸ್ಯೆಯನ್ನು ಎದುರಿಸುತ್ತಿರುವ ವ್ಯಕ್ತಿಯು ಯಾವ ಮಟ್ಟದಲ್ಲಿದ್ದಾನೆ ಎಂಬುದನ್ನು ಊಹಿಸಲು ಅಸಾಧ್ಯ. ವೈರಿಗೆ ನಿಮ್ಮ ಸಮಸ್ಯೆ ಸಂತೋಷವನ್ನು ತರಬಹುದು, ಪ್ರೀತಿ ಪಾತ್ರರಿಗೆ ನಿಮ್ಮ ಸಮಸ್ಯೆ ದುಃಖವನ್ನು ತರಬಹುದು, ಸಂಬಂಧಿಗಳಿಗೆ ನಿಮ್ಮ ಸಮಸ್ಯೆ ಭಾರವಾಗಿಯೂ ಕಾಣಬಹುದು ಅಥವಾ ನಿಜವಾದ ಬಂಧನಗಳಿಗೆ ಒತ್ತು ಕೊಡುವವರು   ಸಮಸ್ಯೆಯನ್ನು ಬಗೆಹರಿಸಲು ಅಲ್ಪವಾದರೂ ಸಹಾಯ ಮಾಡುವುದು.

         ಇಂದಿನ ಕಾಲದಲ್ಲಿ, ಈ ಮೇಲಿನ ಇಲ್ಲ ಬಾಂಧವ್ಯಗಳು ಕೇವಲ ನಾಟಕೀಯವಾಗಿ ನಡೆಯುತ್ತಿದೆ ಹೊರತು ನಿಜ ಸ್ವರೂಪದ ಸಂಬಂಧಗಳು ಬಹಳಷ್ಟು ಕಡಿಮೆಯಾಗಿ ಹೋಗಿದೆ. ಕೆಲವರಿಗೆ ತನ್ನ ಮನೆಯ ವಿಚಾರಗಳಿಗಿಂತ ಹೆಚ್ಚಾಗಿ ಅನ್ಯರ ಮನೆಯ   ವಿಚಾರಗಳೇ  ತಿಳಿದಿರುತ್ತದೆ. ಯಾಕೆಂದರೆ ಇನ್ನೊಬ್ಬನ ಸಮಸ್ಯೆಗಳಲ್ಲಿ ಸಹಾಯಕಿಂತ ಜಾಸ್ತಿ ಒಂದಷ್ಟು ಪ್ರಯೋಜನಗಳೇ ಇಲ್ಲದ ಮಾತುಗಳನ್ನಾಡಿ ಡಂಗುರವನ್ನು ಸಾರುತ್ತಿರುವ ಮನಸ್ಥಿತಿ. ಈ ಸಮಾಜದಲ್ಲಿ ಬದುಕು ನಡೆಸುವುದೇ ಒಂದು ಸವಾಲು, ಹೇಗಿದ್ದರೂ, ಏನಿದ್ದರೂ, ಒಂದಲ್ಲ ಒಂದು ರೀತಿಯಲ್ಲಿ ರಣಹದ್ದು ಗಳಂತೆ  ಸಂಬಂಧವೇ ಇಲ್ಲದ ವಿಚಾರಗಳಲ್ಲಿ ತಲೆ ಹಾಕಿ ಇರುವ ಅಲ್ಪಸ್ವಲ್ಪ ನೆಮ್ಮದಿಯನ್ನು ಕೆಡಿಸಬಿಡುವ ಜನರನ್ನು ಅಲ್ಲಲ್ಲಿ ಕಾಣಬಹುದು. ಅವರಿಗೂ ತಿಳಿಯದ ವಿಷಯವೇನೆಂದರೆ ನಾಳೆ ಎಂಬುದು ಕೊನೆಯ ದಿನವಾದರೆ ಮಾಡುತ್ತಿರುವ ಅನಾಚಾರಗಳಿಗೂ ಕೊನೆಯ ಪಕ್ಷ ಹಿಂದಿನ ದಿನವಾದರೂ ತನ್ನ ಚಾಳಿಯನ್ನು  ನಿಲ್ಲಿಸಲು ಪ್ರಯತ್ನ ಮಾಡಬಹುದೇ? ನೀವು ಏನಂತೀರಾ?...



          ಈ ಜಗತ್ತಿನಲ್ಲಿ ಎಷ್ಟು ಪ್ರಾಮಾಣಿಕವಾಗಿದ್ದರು ಸಾಲದು, ನಿಮ್ಮ ಪ್ರಾಮಾಣಿಕತೆಯನ್ನು ಕೆಲವರು ಪ್ರಯೋಜನಕ್ಕಾಗಿ ಉಪಯೋಗಿಸಿಕೊಂಡರೆ, ನಿಮ್ಮ ಪ್ರಾಮಾಣಿಕತೆಯನ್ನು ಕೆಲವರು ಬಂಡವಾಳವಾಗಿ ಉಪಯೋಗಿಸುತ್ತಾರೆ. ಒಟ್ಟಾರೆ ಬದುಕೆನ್ನುವುದು ಒಂದು ವಿದ್ಯೆ ಹೊರತು ಆ ವಿಧ್ಯೆಯು ಕೊನೆ ಉಸಿರಿನ ತನಕ   ಕಲಿತು ಮುಗಿಸಲಾಗದು.  ಬಾಲ್ಯ ಯೌವ್ವನ, ಮುದ್ದಿವಯಸ್ಸಿನವರೆಗೂ ಎಲ್ಲಾ ಸಂದರ್ಭಗಳಲ್ಲಿ  ನಾವುಗಳು ಕಲಿಯುತ್ತಿರುವ ಪಾಠಕ್ಕೆ   ಪೂರ್ಣ ವಿರಾಮ ವಂತು ನಮಗೆ ನೀಡಲು ಸಾಧ್ಯವಿಲ್ಲ.

      ಮನುಜರಾಗಿರುವ ನಮಗೆ ಅನ್ಯರ ಬದುಕು ಸುಲಭವಾಗಿ ಕಂಡರೂ ತನ್ನ ಬದುಕು  ಕಷ್ಟವಾಗಿ ಕಾಣುತ್ತದೆ ತನ್ನ ಗಳಿಕೆಗೆ ತಕ್ಕಂತೆ ಜೀವಿಸುತ್ತಿರುವ ನಾವೆಲ್ಲರೂ ಸಮಸ್ಯೆಗಳನ್ನು ಇನ್ನಷ್ಟು ಹೆಚ್ಚು ಬೆಳೆಸಿಕೊಂಡು ಒದ್ದಾಡುವ ಪರಿಸ್ಥಿತಿ. ಅಲ್ಪ ಜನರು ಅಲ್ಪ ಮನಸ್ಥಿತಿಯಿಂದ ಬದುಕಿದರೆ, ಇನ್ನು ಸ್ವಲ್ಪ ಜನರು ತಾನು ತನ್ನವರಿಗಾಗಿ ಮಾತ್ರ ಜೀವನವನ್ನು ಸಾಗಿಸುತ್ತಾರೆ. ನಾವೆಲ್ಲರೂ ಮನುಷ್ಯರು ನಮ್ಮಿಂದ ಇನ್ಯಾರಿಗೂ ತೊಂದರೆ ಆಗಕೂಡದು, ಸಾಧ್ಯವಾದಷ್ಟು ಸಹಾಯ ಹಸ್ತ ಚಾಚಿ ಬದುಕುವ ಜನರು ಒಂದಷ್ಟು ನ್ಯಾಯಯುತವಾಗಿ ಬದುಕನ್ನು ಸಾಗಿಸಲು ಪ್ರಯತ್ನ ಮಾಡುತ್ತಿರುತ್ತಾರೆ. ಕಲ್ಮಶವನ್ನು ಹೊಂದಿರದ ಮನಸುಗಳು  ಸದಾ ಪ್ರಜ್ವಲಿಸುತ್ತಿರುತ್ತದೆ. ಕಲ್ಮಶ ಭರಿತ ಮನಸ್ಸುಗಳು ಸದಾ ತುಳು ಕಾಡುತ್ತಿರುತ್ತದೆ. ಬದುಕೆಂಬ ನೌಕೆಯಲ್ಲಿ ದಡ ಸೇರುವಂತಹ ಚಾಕ ಚಕ್ಯತೆ ಕೆಲವರು ಮಾತ್ರ ರೂಡಿಸಿಸಿಕೊಳ್ಳಬಹುದು,  ಕೆಲವರು ಬಿರುಗಾಳಿಗೆ ಸಿಕ್ಕಿ ಮುಳುಗಲುಬಹುದು, ಕೆಲವರಂತೂ  ಗಾಳಿ ಬಂದಂತೆ ಹೋಗಲುಬಹುದು, ನಾವಿಕನೆಂಬವನು ನೌಕೆಯನ್ನು  ಸರಿದಾರಿಯಲ್ಲಿ ತೆಗೆದುಕೊಂಡು ಹೋಗಬೇಕೆಂಬ ಪ್ರಯತ್ನದಲ್ಲಿದ್ದಾಗ ಆಕಸ್ಮಿಕವಾಗಿ  ಬಂದೆರಗುವ ತೆರೆಗಳಿಗೆ ಸಿಕ್ಕಿ ನಾಶವಾಗಲು ಬಹುದು  ಉಳಿದು  ದಡ ಸೇರಲು ಸಾಧ್ಯವಿದೆ.

             ಯಾವುದಕ್ಕೂ, ನಾವುಗಳು ಮಾಡುವ ಸತ್ಕಾರ್ಯಕ್ಕೆ ಭಗವಂತನೆಂಬ ಸೂತ್ರದಾರನ ಸಹಾಯ ಒಂದು ಇದ್ದರೆ ಯಾವ ಕೆಟ್ಟ ಸಂದರ್ಭಗಳು ಬಂದರೂ ಯಾವುದೇ ಅಡೆತಡೆಗಳಿಲ್ಲದೆ ಜೀವನದ ನೌಕೆ ಮುಂದುವರೆಯಬಹುದು.

 ನನ್ನ ಜೀವನದ ನೌಕೆಯೊಂದಿಗೆ ನಿಮ್ಮ ನೌಕೆಯು ಯಾವುದೇ ತೊಂದರೆಗಳಿಲ್ಲದೆ ದಡ ಸೇರಲೆಂಬ ಹಾರೈಕೆಯೊಂದಿಗೆ🙏🌹

                                  ✍️ಮಾಧವ. ಕೆ. ಅಂಜಾರು 


          


 


  


 

 



















Comments

Post a Comment

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.

(ಲೇಖನ -100), "ಕುವೈಟ್ ಕಲಾ ಮಾಣಿಕ್ಯ" ಒಬ್ಬ ಕಲಾಗಾರನ ನಿಜವಾದ ಜೀವನ ಕ್ರಮ, ಶ್ರಮ ಮತ್ತು ಸಾಧನೆಯ ಹಾದಿ, ಕಲೆ ಎಂಬುವುದು ಎಲ್ಲರಿಗೂ ಒಲಿಯುವುದಿಲ್ಲ ಆದರೆ ಒಂದಲ್ಲ ಒಂದು ರೀತಿಯ ಕಲೆಯ ಶಕ್ತಿ ಪ್ರತಿಯೊಬ್ಬರಲ್ಲೂ ಇರುತ್ತದೆ