ನಗುನಗುತ್ತಾ ಕಣ್ಮರೆಯಾದ ನಮ್ಮ ಸಿಂಥಿಯ
ನಗುನಗುತ್ತಾ ಕಣ್ಮರೆಯಾದ ನಮ್ಮ ಸಿಂಥಿಯ.
ಅವಳೊಂದು ಆಸ್ತಿ, ಸದಾ ಎಲ್ಲರನ್ನೂ ಗೌರವಿಸುತ್ತ, ನಮಸ್ಕಾರಿಸುತ್ತ, ಸದಾ ನಗುತ್ತಲೇ ಕೆಲಸಕ್ಕೆ ಆಗಮಿಸುತಿದ್ದಳು ಯಾರಿದ್ದರೂ ಕರೆದು ಮಾತನಾಡುವ ಅಭ್ಯಾಸದೊಂದಿಗೆ ತಂನ್ನೊಂದಿಗೆ ಇನ್ನೊಬ್ಬರನ್ನು ನಗಿಸಿ ಬಿಡುತಿದ್ದಳು. Hello How are you, how is you're health, how is you're family, ಕೆಲ್ಸದಲ್ಲಿ ಏನಾದರು ತೊಂದರೆಗಳು ಇದ್ಯಾ. ಹೇಗಿದೆ ನಮ್ಮ ಕಂಪನಿ, ಖುಷಿಯಾಗಿ ಇದ್ದೀರಾ! ನಿಮಗೇನಾದರೂ ಸಹಾಯ ಬೇಕಿದ್ದಲ್ಲಿ ಕೇಳಿ ಎಂದು ಬಂದಾಗಲೆಲ್ಲ ಹೇಳುತಿದ್ದ ಸಿಂಥಿಯ ಒಮ್ಮೆಲೆ ಕಣ್ಮರೆಯಾದಳು. ನಾಲ್ಕು ದಿನದ ಬದುಕು, ಬದುಕಿರುವಷ್ಟು ದಿನ ನಗುತ್ತಾ ಬದುಕಬೇಕು, ನಾಳೆ ಎಂಬುದು ಇದೆಯೋ ಇಲ್ಲವೋ ನಮಗೆ ತಿಳಿಯದು. ನಮ್ಮೆಲ್ಲರ ಜೀವ ನೀರ ಮೇಲಿನ ಗುಳ್ಳೆಯಂತೆ, ಸದಾ ಪ್ರೀತಿ ಗೌರವದಿಂದ ಬದುಕು, ಸಾಧ್ಯ ವಾದರೆ ಉಪಕರಿಸು,ಅಪಕಾರ ಮಾಡಬೇಡ ಎಂಬುದನ್ನು ಅರಿತಿದ್ದ ಅವಳು ತನ್ನ ಜೀವನದಲ್ಲಿ ಸಾಧ್ಯವಾದಷ್ಟು ಮಾಡಿ ನಮಗೆಲ್ಲರಿಗೂ ಮಾದರಿಯಾಗಿಬಿಟ್ಟಳು.
ನಾವು ಹೆಚ್ಚಿನ ಸಮಯ ಆಫೀಸಿನಲ್ಲಿ ಇಲ್ಲದಿದ್ದರೂ, ಅವರು ಸಿಕ್ಕಿದಾಗ ಸಿಗುವ ಗೌರವ ನಮ್ಮನ್ನು ಸಂತೋಷಗೋಳಿಸುತಿತ್ತು. ಸಿಂಥಿಯ ಬಂದಳೆಂದರೆ ಎಲ್ಲರಿಗೂ ಖುಷಿ, ಸಿಂಥಿಯಾ ನಮ್ಮ ಆಫೀನಲ್ಲಿ ಪ್ರತಿಯೊಬ್ಬರನ್ನು ಮಾತನಾಡಿಸುತಿದ್ದಳು, ಮಾಧವ ಕಳೆದ ವರುಷ ದೀಪಾವಳಿ ಹಬ್ಬಕ್ಕೆ ಮಾಡಿದ ಗೂಡು ದೀಪ ಚೆನ್ನಾಗಿತ್ತು, ಈ ಸಲ ದೀಪಾವಳಿ ತುಂಬಾ ಚೆನ್ನಾಗಿ ಮಾಡಿ ಎಂದು ಹೇಳಿದ ನೆನಪು. ಸದಾ ಪ್ರೀತಿಯ ಮಾತು, ಸರ್ವರನ್ನು ಒಂದೇ ದೃಷ್ಟಿಯಲ್ಲಿ ನೋಡುತಿದ್ದ ಬಂಗಾರದ ಮನಸುಳ್ಳ ಸಿಂಥಿಯ ಒಮ್ಮೆಲೆ ಅದೃಶ್ಯವಾದಳು.
ರಮಾದಾನ್ ಬರಲಿ, ಕ್ರಿಸ್ಮಸ್ ಬರಲಿ, ದೀಪಾವಳಿ ಬರಲಿ, ಹುಟ್ಟು ಹಬ್ಬ ಬರಲಿ, sendoff ಇರಲಿ, ಹೊಸ ಜನರೇ ಬರಲಿ ಅಲ್ಲಿ ಸಿಂಥಿಯ ಇದ್ದಳೆಂದರೆ, ಸಂಪೂರ್ಣ ವಾತಾವರಣ ನಗುವಿಂದ ಕೂಡಿತ್ತು. ಇದನ್ನೆಲ್ಲಾ ಗಮನಿಸಿದ್ದ ನಾನು ಒಂದೆರಡು ಸಲ ಅವರನ್ನು ಪ್ರಾಮಾಣಿಕವಾಗಿ ಹೊಗಳಿದ್ದು ಇದೆ ಮತ್ತು ನಮ್ಮ ಕಂಪನಿ ಇನ್ನಷ್ಟು ಮುಂದುವರಿಯಲು ನಾವೆಲ್ಲರೂ ಪ್ರಯತ್ನಿಸೋಣ, ಎಂದು ಹೇಳಿರುವಾಗ Madhav very good i am with you. We will work together ಎಂದು ಹೇಳಿದ್ದಳು.
ಅಂದು ಬೆಳಗ್ಗೆ, ಅದೇನೋ ನನ್ನ ಕೆಲಸವೆಲ್ಲವೂ ಸರಿಯಾಗಿ ನಡೆಯುತ್ತಿರಲಿಲ್ಲ, ಮನಸಲ್ಲಿ ಅದೇನೋ ಬೇಸರ, ಸುಮಾರು 10 ಗಂಟೆಯ ಸಮಯ, ಸಿಂಥಿಯ ನಮ್ಮನೆಲ್ಲ ಬಿಟ್ಟು ಹೋದಳು ಅನ್ನುವ ವಾರ್ತೆ ನಮ್ಮ ಸಹಪಾಠಿ ಹೇಳಿದ ಕೂಡಲೇ ದಂಗಾಗಿ ಹೋದ ನಾನು, ಕಣ್ಣೀರಲ್ಲಿ ಮುಳುಗಿಬಿಟ್ಟೆ. ಸ್ತಬ್ದ ನಾಗಿ ಮತ್ತೊಮ್ಮೆ ಮಗದೊಮ್ಮೆ ಪೋನಾಯಿಸಿ ಮರುಗಿ ಕರಗಿದೆ. ನನಗಿಂತಲೂ ಹೆಚ್ಚಾಗಿ ಅವಳೊಂದಿಗೆ ಕೆಲಸ ಮಾಡುತಿದ್ದ ಸಹಪಾಠಿಗಳಿಗೆ ಏನಾಗಬೇಕು ಊಹಿಸಲು ಸಾಧ್ಯವಿಲ್ಲ. ಆಗಲೇ ಕ್ರಿಸ್ಮಸ್ ಹಬ್ಬದ ಸಂಭ್ರಮ ಮುಗಿಸಿ ಹೊಸ ವರುಷದ ಸಂಭ್ರಮಕ್ಕೆ ತಯಾರಿಯಲಿದ್ದ ನಾವೆಲ್ಲರೂ ಶೋಕ ದಿಂದ ಮುಳುಗಿ ಬಿಟ್ಟೆವು. ದೇವರಾಟ ಬಲ್ಲವರು ಯಾರು! ಜೀವನ ಶೂನ್ಯ! ಏನಿದ್ದರೆನಂತೆ? ನಮಗೆ ಸಮಯ ಬಂದಾಗ ಜೀವ ಬಿಡಲೇಬೇಕು. ಸಾವಿನೆದುರು ಯಾವುದೂ ನಿಲ್ಲದು.
ಕೊನೆಯ ಕ್ಷಣದಲ್ಲಿ ತನ್ನ ತಾಯಿಯನ್ನು ಕಳೆದುಕೊಂಡ ಒಬ್ಬನೇ ಮಗನ ಮಾತನ್ನು ಕೇಳಿ ಇನ್ನಷ್ಟು ದುಃಖಿತನಾದ ಎನಗೆ ದೇವರು ಇಷ್ಟು ಕ್ರೂರಿಯೇ? ಯಾಕಾಗಿ ಹೀಗೆ ಮಾಡುತ್ತಾನೆ? ಎಂದು ಹೇಳಿಕೊಳ್ಳುತ್ತಾ, ಹೆಂಡತಿಯನ್ನು ಕಳೆದುಕೊಂಡ ದುಃಖದಲ್ಲಿ ಅಸಹಾಯಕವಾಗಿ ಅಳುತ್ತಾ ನಿಂತಿದ್ದ ಗಂಡನನ್ನು ನೋಡಿ ಮೂಕನಾಗಿ ಬಿಟ್ಟೆ. ಅಗಲಿದ ಆತ್ಮಕ್ಕೆ ಶಾಂತಿ ಸಿಗಲಿ, ಸಿಂಥಿಯ ದೇವರ ಪಾದ ಸೇರಿದಳು, ಅವಳು ದೇವರಿಗೆ ಬೇಕಾದಳು ಎಂದು ಚರ್ಚ್ ಗುರುಗಳು ಹೇಳಿ ಅಂತ್ಯ ಕಾರ್ಯವನ್ನು ಮಾಡಿಬಿಡುತ್ತಲೇ, ಪೆಟ್ಟಿಗೆಯಲ್ಲಿ ಹಾಯಾಗಿ ಮಲಗಿದೀನಿ ನೀವೆಲ್ಲರೂ ಜಾಗರೂಕರಾಗಿ ಮನೆಗೆ ತಲುಪಿ, ಎಂದು ಹೇಳುತ್ತಾ ಆಂಬುಲೆನ್ಸ್ ಇರುತ್ತಾ ಈ ಲೋಕವನ್ನು ಬಿಟ್ಟು ಸ್ವರ್ಗ ಲೋಕಕ್ಕೆ ಪಾದಾರ್ಪಣೆ ಮಾಡಿದಳು.
ಸಿಂಥಿಯ ನೀನೆಲ್ಲಿದ್ದರೂ ನಗು ನಗುತಿರು, ಸಿಂಥಿಯ ನೀನೆಲ್ಲಿದ್ದರೂ ಹಾಯಾಗಿರು, ಸಿಂಥಿಯ ಮರುಜನ್ಮವಿದ್ದರೆ ಮತ್ತೆ ಹುಟ್ಟಿ ಬಾ. ನಿನ್ನ ಆದರ್ಶಗಳನ್ನು ನನ್ನ ಹೃದಯದೊಳಗೆ ಜೋಪಾನವಾಗಿ ಇಟ್ಟಿರುವೆ. ನಿನ್ನ ಆತ್ಮಕ್ಕೆ ಶ್ರೀ ದೇವರು ಶಾಂತಿನೀಡಲಿ. 🙏
-✍️Madhav. K. Anjar
Very 😔 sad...nimma baravanige Nanna Manasu karagitu
ReplyDelete