(ಲೇಖನ -70)12 ವರುಷದ ಹುಡುಗಿ ಕಾಣೆಯಾಗಿದ್ದಾರೆ! ,ನನ್ನ ಗೆಳೆಯನ ಕರೆ ಬಂದಾಗ ಕಾಣೆಯಾದವರ ವಾಸ ಸ್ಥಳ ಅರಿತ ಕೂಡಲೇ
12 ವರುಷದ ಹುಡುಗಿ ಕಾಣೆಯಾಗಿದ್ದಾರೆ! ,ನನ್ನ ಗೆಳೆಯನ ಕರೆ ಬಂದಾಗ ಕಾಣೆಯಾದವರ ವಾಸ ಸ್ಥಳ ಅರಿತ ಕೂಡಲೇ,ಬಂದ ಮಾಹಿತಿಯನ್ನು ನನಗೆ ತಿಳಿದಿರುವ ವಾಟ್ಸಪ್ಪ್ ಗ್ರೂಪ್ ಮತ್ತು ಸ್ನೇಹಿತರಿಗೆ ಕಳುಹಿಸಿ, ಕೂಡಲೇ ಹುಡುಕಾಟ ಆರಂಭಿಸಿ ನನ್ನ ಪ್ರಯತ್ನ ಮತ್ತು ಸಹಾಯಕ್ಕೆ ಅಣಿಯಾದೆ, ಸಂಜೆಯ ಹೊತ್ತಿಗೆ ಮನೆಯಿಂದ ಕಾಣೆಯಾದ ಹುಡುಗಿ, ಒಂದು ತರ ಎಲ್ಲರನ್ನೂ ಆತಂಕಕ್ಕೀಡು ಮಾಡಿತ್ತು, ಕುವೈಟ್ ದೇಶದ ಅಬಾಸಿಯ ಎಂಬ ನಗರದಲ್ಲಿ, ಜನನಿಭಿಡ ಪ್ರದೇಶದಲ್ಲಿ ಮನೆಯವರ ಬುದ್ದಿಮಾತಿಗೆ ಸಿಟ್ಟುಗೊಂಡು ಮನೆಯ ಹೊರಗೆ ನಡೆದ ಹುಡುಗಿಯ ಪತ್ತೆ ಯಾಗದೆ ಇದ್ದಾಗ, ಕೂಡಲೇ ಎಚ್ಚತ್ತುಕೊಂಡು ಸುಮಾರು 50 ತಂಡಕಿಂತಲೂ ಜಾಸ್ತಿ ಮಲಯಾಳಿ ಜನರು ತನ್ನ ತನ್ನ ವಾಹನದಲ್ಲಿ ಹುಡುಕಾಟದಲ್ಲಿ ತೊಡಗಿಕೊಂಡರು. ಅವರಂತೆ ನಾನೂ ಒಬ್ಬ ನನ್ನ ವಾಹನದಲ್ಲಿ ಹೊರಟು, ನಾಪತ್ತೆಯಾದ ಸ್ಥಳದಿಂದ ಹುಡುಕಾಟ, ಪ್ರತೀ ಗುಂಪಿನ ಹುಡುಕಾಟದ ಮಾಹಿತಿ ವಾಟ್ಸಪ್ಪ್ ನಲ್ಲಿ ಕಳುಸುತೀದ್ದ ತಂಡ, ಹೆಚ್ಚಿನ ಕಟ್ಟಡ, ಮನೆ, ಅಂಗಡಿಗಳಲ್ಲಿ ಸಿಸಿ ಟಿವಿ ಅಳವಡಿಸಿರುವ ಕಾರಣ ಹುಡುಗಿಯ ಛಲನವಲನದ ಮಾಹಿತಿಯನ್ನು ಆಧರಿಸಿ ನಗರದ ಮೂಲೆ ಮೂಲೆಯನ್ನು ತಡಾಕಡಿ ಸುಸ್ತಾಗಿ ಹೋದ ಎಲ್ಲರೂ, ಇನ್ನಷ್ಟು ಭಯಗೊಳ್ಳಲು ಆರಂಭಿಸಿದರು, ಪೋಷಕರ ಭಯ ಇಮ್ಮಡಿಯಾಗಿ ಕಣ್ಣೀರುಹಾಕುತಿದ್ದರು. 7 ರಿಂದ ರಾತ್ರಿ 11.30 ರ ವರೆಗೂ ಸಿಗದ ಸಮಯದಲ್ಲಿ ನಿರಾಶೆಗೊಳ್ಳುತಿದ್ದ ನಾವೆಲ್ಲ...