(ಲೇಖನ -56) ಚಡಪಡಿಸುವ ಮನಸ್ಸುಗಳು, ಹೇಳಲಾಗದ ಸಮಸ್ಯೆಗಳು, ಸಮಾಜ ಏನು ಹೇಳುತ್ತದೆಯೋ ಎನ್ನುವ ಭಯದಿಂದ ಬದುಕುವ ಕೆಲವು ಜನರ ಪಾಡು...
(ಲೇಖನ -56) ಚಡಪಡಿಸುವ ಮನಸ್ಸುಗಳು, ಹೇಳಲಾಗದ ಸಮಸ್ಯೆಗಳು, ಸಮಾಜ ಏನು ಹೇಳುತ್ತದೆಯೋ ಎನ್ನುವ ಭಯದಿಂದ ಬದುಕುವ ಕೆಲವು ಜನರ ಪಾಡು.... ಪ್ರತಿಯೊಂದು ಜೀವಿಗಳು ಅದರದ್ದೇ ಆದ ಸಮಸ್ಯೆಗೆ ಸಿಕ್ಕಿಕೊಂಡು ಬದುಕುತ್ತವೆ, ಸಮಸ್ಯೆಗಳಿಲ್ಲದ ಜೀವಿಗಳಿಲ್ಲ, ಮನುಷ್ಯನಿಗೆ ಬುದ್ದಿ ಜಾಸ್ತಿಯಾದುದರಿಂದ ಅವನಿಗೆ ಸಮಸ್ಯೆಗಳ ಸರಮಾಲೆ ಹುಟ್ಟುತ್ತಲೇ ಇರುತ್ತದೆ. ಇಂದಿನ ದಿನಗಳಲ್ಲಿ ಯಾರಲ್ಲಿ ವಿಚಾರಿಸಿದರೂ, ಸಂತೋಷದ ಬದುಕಿಲ್ಲ ಅನ್ನುವ ಮಾತುಗಳನ್ನು ಕೇಳಿರಬಹುದು. ಒಂದಲ್ಲ ಒಂದು ರೀತಿಯ ತೊಂದರೆಯಲ್ಲಿ ಸಿಕ್ಕಿಕೊಂಡು ನಿರಾಸೆಯ ಜೀವನ ಮಾಡುವ ಜನರು ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಲೇ ಇದ್ದಾರೆ! ಆಕಸ್ಮಿಕವಾಗಿ ಬರುವ ಆರೋಗ್ಯ ಸಮಸ್ಯೆಗೆ ಒಳಗಾದ ವ್ಯಕ್ತಿ ಒಮ್ಮೆ ನನಗೆ ಆರೋಗ್ಯ ಸರಿಯಾಗಿ ಇದ್ದರೆ ಸಾಕು ಬೇರೇನೂ ಬೇಡವೆಂದು ಪ್ರಾರ್ಥಿಸಿದರೆ. ಎಲ್ಲವೂ ಸುಸ್ಥಿತಿಯಲ್ಲಿದ್ದು ನನ್ನ ಗಂಡ ಸರಿಯಿಲ್ಲ, ನನ್ನ ಹೆಂಡತಿ ಸರಿಯಿಲ್ಲ, ನನ್ನ ಮಕ್ಕಳು ಸರಿಯಿಲ್ಲ , ನನ್ನ ಕುಟುಂಬದ ಜನರೇ ಸರಿಯಾಗಿಲ್ಲ ಎಂಬ ಪಟ್ಟಿಯನ್ನು ಹೊರಗೆ ಹಾಕುತಿರುತ್ತಾರೆ. ಕೆಲವೊಂದು ಸರಿಯಾಗಿದ್ದರೂ ಯಾರಿಗೂ ಹೇಳಲಾಗದ ಪರಿಸ್ಥಿತಿ. ಹೌದು ನಿಜವಾದ ಸಮಸ್ಯೆಗಳಿಗೆ ಒಳಗಾದವರು ಯಾರಿಗೂ ಹೇಳದೆ ಮನದೊಳಗೆ ಕೊರಗುತ್ತಾ ಬದುಕುತಿರುತ್ತಾರೆ. ಜೀವದ ಪ್ರತಿಯೊಂದು ಅಂಗಾಂಗಗಳು ಸರಿಯಾಗಿ ಕೆಲಸ ಮಾಡುತ್...