ಸದ್ದು ಬೇಡ (ಕವನ 4)


ಸದ್ದು ಮಾಡಬೇಡ
******†******
ಹಾರಾಡು ಹಕ್ಕಿಯಂತೆ
ಹೋರಾಡು ಹುಲಿಯಂತೆ
ಜೀವಿಸುತಿರು ರಾಜನಂತೆ
ಏನೇ ಬರಲಿ ಏನೇ ಇರಲಿ
ಘರ್ಜಿಸುತಿರು ಸಿಂಹದಂತೆ

ನಿನಗ್ಯಾರು ಸಮರಿಲ್ಲ
ಈ ಲೋಕಕೆ ಮಿತಿಯಿಲ್ಲ
ಹಾಯಾಗಿ ಬದುಕುತಿರು
ಬಿರುಗಾಳಿಗೂ ಅಲುಗಾಡದಿರು 
ಗದರಿಕೆಗೆ ಬೆದರದಿರು

ನಾಳೆಎಂಬುದ ಅರಿತವರಿಲ್ಲ
ಗೆದ್ದು ಬಿದ್ದವರೂ ಉಳಿಯಲಿಲ್ಲ
ಸದ್ದು ಮಾಡುವ ಕೊಡವಾಗದೆ
ತುಂಬಿದ ಹೃದಯದ
ಮನುಜ ನೀನಾಗಿರು!
     - ಮಾಧವ ಅಂಜಾರು 





Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ