Posts

Showing posts from April, 2021

ಆಪತ್ತಿಗೂ ಇರಲಾರ (ಕವನ 6)

ತನ್ನ ಬೆನ್ನು ತಟ್ಟಿಕೊಳ್ಳುವವ ಇನ್ನೊಬ್ಬರ ಬೆನ್ನು ತಟ್ಟಲಾರ ಅನ್ಯರಿಗೆ ನೋವುಣಿಸುವವ ಹಸಿವೆಂದರೆ ನೀಗಿಸಲಾರ, ಹುಸಿ ಮಾತನಾಡುವವ ಸಹಾಯವಂತೂ ಮಾಡಲಾರ ದಿನಾ ನಶೆಯಲ್ಲಿರುವವನು ನಾಳೆಯ ದಿನಕೆ ಯೋಚಿಸಲಾರ, ತನ್ನ ಸಂಪತ್ತು ತೋರಿಸುವವ ಆಪತ್ತಿಗೂ ಇರಲಾರ ಬಾಹ್ಯ ಸೌಂದರ್ಯ ಹೊಗಳುವವ ಅಂತರಾಳ ಕರುಣೆ ತಿಳಿಯಲಾರ ಅಧಿಕಾರದಾಸೆ ಹೊಂದಿರುವವ ಸಜ್ಜನಿಕೆಯ ಪಾಠ ಕಲಿಯಲಾರ ವಿದ್ಯಾವಂತನೆಂದು ಹೇಳಿಕೊಳ್ಳುವವ ವಿದ್ಯೆಯ ಅರ್ಥ ಅರಿಯಲಾರ,                   ✍️ಮಾಧವ ಅಂಜಾರು 🙏🌹

ಕ್ಷಣ ಸಾಕು ನಿನಗೆ (ಕವನ -7)

ಪೆದ್ದನಿಗೆ, ನಿ ಪೆದ್ದ ಹೇಳಬೇಡ ಹುಚ್ಚನಿಗೆ ನೀ ಹುಚ್ಚನೆಂದು ಹೇಳಲು  ಹೋಗಬೇಡ ಕಳ್ಳನಿಗೆ ನೀ ಕಳ್ಳನೆಂದು ಸುಳ್ಳನಿಗೆ ನೀ ಸುಳ್ಳುಗಾರನೆಂದು ಹೇಳಿ ಕೆಡಬೇಡ! ಇರುವುದೆಲ್ಲವ ಹೇಳಿ ಅವರ ಸಾಲಿಗೆ ನೀ ಸೇರಬೇಡ, ಮೂಕನ  ಹೀಯಾಳಿಸಬೇಡ ರೋಗಿಗೆ ಶಪಿಸಲೂ ಬೇಡ ಯೋಗಿಯ ಜೊತೆ ಬಿಡಬೇಡ ರಾಗಿ ತಿಂದು ಬದುಕುವವನ ನಿಂದಿಸಿ ನೀ ಕೆಡಬೇಡ ಎಲ್ಲಾ ಉಳ್ಳವನೆಂದು ಬೀಗಬೇಡ ಒಂದು ಕ್ಷಣ ಸಾಕು ನಿನಗೆ ಉಸಿರು ಉಳಿಸಲಾಗದು ಕೊನೆಗೆ!           -✍️ಮಾಧವ ಅಂಜಾರು 🌷

ಚೆಂದುಳ್ಳಿ ನೀನು (ಕವನ -8)

ಚೆಂದದ ಚೆಂದುಳ್ಳಿ ನೀನು ಅಂದದ ಮಿಂಚುಳ್ಳಿ ನೀನು ಬಿಂಕದ ಹೆಜ್ಜೆಯ  ಹಾಕುತ  ಎನ್ನ ಹೃದಯ ಸೇರಿದೆ ನೀನು ಹೂಬಳ್ಳಿ  ನಿನಗಾಗಿ ನಾನು ಎನ್ನ ಸುತ್ತಿ  ಮಲಗು ನೀನು  ಸುಗಂಧ ಪರಿಮಳವೇ ನೀನು ಮಕರಂದ ಹೀರೋ ದುಂಬಿ ನಾನು ಹಾಯಾಗಿ ಜೊತೆಗಿರು ನೀನು ನಿನ್ನ ಕಾಯುತ್ತಾ ಕೂರುವೆ ನಾನು ಪ್ರೀತಿಯ ಜೀವ ನೀನು ನಿನಗಾಗಿ ಉಸಿರಾಡುತಲಿರುವೆನು             ✍️ಮಾಧವ ಅಂಜಾರು 🌷

(ಲೇಖನ -25)ಬಾನೆತ್ತರದಲ್ಲಿ ಕಂಡ ಸ್ಮಶಾನ

Image
 ಬಾನೆತ್ತರದಲ್ಲಿ ಕಂಡ ಸ್ಮಶಾನ ಪ್ರತಿಯೊಂದು ಜೀವಿಯೂ ಹುಟ್ಟಿದಾಗ ಸಾವೆಂಬ ಬುತ್ತಿಯನ್ನು ಕಟ್ಟಿಕೊಂಡು ಬಂದಿರುತ್ತದೆ. ಆ ಸಾವಿನ ಬುತ್ತಿಯನ್ನು ಯಮರಾಜ ಯಾವಾಗ ತೆರೆದು ಬಿಡುವನು ಎಂಬುದು ಯಾರಿಗೂ ಹೇಳಿರೋದಿಲ್ಲ.   ಸಹಜವಾಗಿ ಎಂದಿನಂತೆ ಮನೆಯಲ್ಲಿನ ಕೆಲಸ ಕಾರ್ಯಗಳನ್ನು ಮುಗಿಸಿ ಕಛೇರಿಗೆ ಹೊರಟ ನಾನು ಸಮಯಕ್ಕಿಂತ ಹತ್ತು ನಿಮಿಷಗಳ ಕಾಲ ಮೊದಲೇ ತಲುಪಿದ್ದೆ. ತಾಂತ್ರಿಕ ಸಂಬಂದಿಸಿದ ಕೆಲಸಗಳು ವಿವಿಧ ಸರಕಾರಿ ಕಛೇರಿ ಮತ್ತು ಖಾಸಗಿ ಸಂಸ್ಥೆ ಗಳಿಗೆ ಹೋಗಿ ಮಾಡಿ ಬರಬೇಕಾದ ಅನಿವಾರ್ಯತೆ. ಅಂದು ಬುಧವಾರ ಕುವೈಟ್ ಎಂಬ ಮಾಯಾನಗರ ಅದರ ಹೃದಯ ಭಾಗದಲ್ಲಿ ಬಾನೆತ್ತರದ ಕಟ್ಟಡಗಳು ಅದರ ಸುತ್ತ ಸುಂದರ ಸುವ್ಯವಸ್ಥಿತ ರಸ್ತೆಗಳು, ಸಾವಿರಾರು ಜನರ ಓಡಾಟ ಪ್ರಪಂಚದಲ್ಲಿ ತಯಾರಾಗುವ ಎಲ್ಲಾ ತರಹದ ಕಾರುಗಳು ಶಬ್ದ ಮಾಲಿನ್ಯ ವಿಲ್ಲದೆ ಓಡಾಟ ಮಾಡುತ್ತಿರುತ್ತದೆ . ಅದರೊಳಗೆ ಸಾಮಾನ್ಯ ಜನರಿಂದ ಸೇರಿ ಪ್ರಭಾವಿ ಜನರು ಜೀವನಕ್ಕಾಗಿ, ಸಂತೋಷಕ್ಕಾಗಿ, ಪರಿಶ್ರಮ, ಚಿಂತೆ ದುಮ್ಮಾನಗಳೊಂದಿಗೆ ದಿನವನ್ನು ಕಳೆಯುತ್ತಿರುತ್ತಾರೆ.         ಸಮಯ ಬೆಳಗ್ಗಿನ 8 ಗಂಟೆ 50 ನಿಮಿಷ  ಎಂಬತ್ತು ಮಹಡಿಯ ಬೃಹದಾಕಾರದ ಗಗನಚುಂಬಿ ಕಟ್ಟಡ, ಕೆಲಸನಿಮಿತ್ತ 78ನೇ  ಮಹಡಿ ಗೆ ನನ್ನ ಪಯಣ, ಆ ದಿನಕ್ಕಿಂತ ಮೊದಲು ಅದೆಷ್ಟೋ ಬಾರಿ ಅಲ್ಲಿಗೆ ಹೋಗಿದ್ದೆ ಆದರೆ ಈ ಬರವಣಿಗೆ ಮೂಡಿ ಬರಲು ನಾನು ಆ ದಿನ ಕಂಡ ದೃಶ್ಯ ಕಾರಣವಾಯಿತು. ಕಟ್ಟಡದ ಹೊರ ಆವರಣ ಪಾರದರ್ಶಕ ಗಾಜು ಮೇಲೆ ಹೋದಾಗ ಆಕಾಶದಲ್ಲಿ ಇರುವ ಅನು