Posts

Showing posts from February, 2021

ಬೇಗನೆ ಅವತರಿಸು (ಕವನ -28)

ಏನ ಕಾಣಲಿ  ನಾನಿನ್ನೇನ ಕೇಳಲಿ ದೇವ ನೀನಿಲ್ಲವೆಂದು ಹೇಳುವವರು ಈ ಜಗದಲಿರುವಾಗ, ಎನ್ನ ದೂಷಿಸೋರು ಏನು ಮಹಾ ನಿನ್ನ ನೋವೆನಗೆಕೊಡು ನಾನಿನ್ನವನು ಜಗದೊಡೆಯ ನಿನ್ನೆಸರಲಿ ಮಾಡುವರು ಹಾಸ್ಯ ನಿನ್ನ ರೂಪವ ವಿರೂಪಗೊಳಿಸಿ ನೀನಿಲ್ಲವೆಂದೇ ಸಾರುತಿಹರು ಜನರು ಈ ಜಗದಲಿ ಕಲ್ಲಾಗಿರುವ ನಿನ್ನ ಕೊಲ್ಲುತಿಹರು ನಿನ್ನ ಜೊತೆಗಿರಿಸು ಎನ್ನನು ನೀನಿರಲು  ನಾನಿರುವೆ ನೀನಿಲ್ಲವೆಂದರೆ ನಾನಿರೆನು  ನಿನ್ನ ಪರೀಕ್ಷಿಸಿದವಗೆ ಎನ್ನ ಕಣ್ಣಮುಂದೆ ತೋರಿಸು ಸರ್ವ ಶಕ್ತಿ ನೀನೆಂದು ನೀ ಬೇಗನೆ ಬಂದು ಅವತರಿಸು          ✍️ಮಾಧವ ಅಂಜಾರು 🌷

ನಿನ್ನೊಲವ ನೀನಾಗಿರು (ಕವನ -27)

ನಿನ್ನ ಹೆತ್ತವಳು ಶಪಿಸುವಷ್ಟು ಕೆಟ್ಟವನಾಗಬೇಡ ಪಿತನನ್ನು ಹೀಯಾಳಿಸುವಷ್ಟು ಬೆಳೆದುನಿಲ ಬೇಡ ನೀನು ತಾಳಿ ಕಟ್ಟಿದವಳ  ಮನೆಗೆ ಕನ್ನ ಹಾಕಬೇಡ ನಿನ್ನ ನೋವನರಿವವಳ ದೂರ ನಿಲಿಸಬೇಡ ನಿನ್ನ ಜವಾಬ್ದಾರಿಯ ಮರೆತು ಮಾಯವಾಗಬೇಡ ಬೇಜವಾಬ್ದಾರಿ ತೋರುವ ಮನುಷ್ಯನಾಗಲೇ ಬೇಡ ನಿನ್ನವರಿಲ್ಲವೆಂದು ಅಳಬೇಡ ನಿನ್ನವರಿರುವರೆಂದು ಹೊಗಳಬೇಡ ನಿನ್ನೊಲವ ನೀನಾಗಿರು ನಾನೆಂಬುದ ಬಿಟ್ಟು ಹಾಯಾಗಿರು      ✍️ಮಾಧವ ನಾಯ್ಕ್ ಅಂಜಾರು 🌷

ಕೂ ಕೂ (ಕವನ 29)

ಕೂ ಕೂ ****** ಕೂ ಗೊಟ್ಟು ಕರೆಯುವೆ ಕರೆ ಕೇಳಿದರೆ ನೀ ಹೇಳು.. ಕೂ ಓ ಗೊಟ್ಟು ಬರುವೆ ನೀ ಕೂಗಿದರೆ ಕೂ ಸೇರಿಬಿಡು ನೀ ಕೋಗಿಲೆಯ ದನಿಯೊಳಗಿನ ಕೂ ಅದೆಷ್ಟು  ಸೌಲಭ್ಯ ಅದೆಷ್ಟು ವಿಶಾಲ ಇಂದು ನಾಳೆ ಎಂದಿಗೂ ಕೇಳಲಿ  ಕೂ ಕೂ.. ಸಾಮಾಜಿಕ ಜಾಲಕ್ಕೆ ಜೊತೆಯಾಯ್ತು ಭಾರತೀಯ ಕೂ (app)       ✍️ಮಾಧವ ನಾಯ್ಕ್ ಅಂಜಾರು 🙏

ಬಿಸಿ -ಮಸಿ (ಕವನ -31)

ಮುಖಕ್ಕೆ ಬಳಿದ ಮಸಿ ಮನಸ್ಸಿಗೆ ಹಚ್ಚಿದ ಮಸಿ ಏನಿದ್ದರೂ ತಲೆ ಬಿಸಿ ಒಟ್ಟಾರೆ ಕಸಿ ವಿಸಿ, ಹಚ್ಚಿಸಿಕೊಂಡವರು ಬಿಸಿ ಹಚ್ಚಿದವರೂ ಬಿಸಿ ಬಿಸಿ ಇಬ್ಬರ ಬಾಯಿ ತೆರೆದರು ಮಾತೆಲ್ಲ ಬಹಳ ಬಿಸಿ ಮನಸ್ಸು ಕಪ್ಪಗಿರುವವಗೆ ನಾಟುವುದೇ ಮಸಿ ಸಿಟ್ಟು ಜಾಸ್ತಿ ಇರುವವಗೆ  ಸಾಕೆ ಬರೇ ಮಸಿ? ಅವರ ಮುಖಕ್ಕೆ ಮಸಿ ಇವರ  ಕೈಗೆ ಮಸಿ ಮಸಿಯಾಯ್ತು ಇನ್ನಷ್ಟು ಬಿಸಿ ನೋಡುವವರಿಗೆ ಖುಷಿ?           ✍️ಮಾಧವ ನಾಯ್ಕ್ ಅಂಜಾರು 🌷        ✍️ಮಾಧವ