Posts

Showing posts from May, 2019

ಸಂಸ್ಕೃತಿ ಇಲ್ಲದವನ ಕೈಲಿ

ಸಂಸ್ಕೃತಿ ಇಲ್ಲದವನ ಕೈಲಿ ಧರ್ಮಗ್ರಂಥ ಕೊಟ್ಟು ಬೋಧನೆ ಮಾಡಿಸಿದರೆ ಸಂಸ್ಕಾರವನ್ನೇ ಸಂಹಾರಮಾಡುವ ಹೊರತು ಧರ್ಮಗ್ರಂಥವನರಿಯದೇ ಸುಧರ್ಮಿಯನಾಗಿ ಬಾಳಿದವನೊಂದಿಗೆ ಸಂಸ್ಕಾರ ಕಲಿತರೆ ಜೀವನದುದ್ದಕೂ ಒಳಿತು - ಮಾಧವ ಅಂಜಾರು

ಎಲ್ಲರೂ ಸತ್ಯವಂತರಾಗಿದ್ದರೆ

ಎಲ್ಲರೂ ಸತ್ಯವಂತರಾಗಿದ್ದರೆ ಆರಕ್ಷಕರ ಅಗತ್ಯವಿಲ್ಲ ನ್ಯಾಯವಾದಿಗಳಿಗೆ ಕೆಲಸವೇ ಇಲ್ಲ... ಅದಕ್ಕಾಗಿ ನೂರರಲ್ಲಿ ಒಂದಷ್ಟು ಶತಮಾನ ಕಳ್ಳರು ಕಾಕರು ದ್ರೋಹಿಗಳು ಪಾಪಿಗಳು ಈ ಕಳ್ಳಕಾಕರು ದ್ರೋಹಿಗಳು ಪಾಪಿಗಳು ಓದು ಬರಹ ಹೊಂದಿದವರೇ ಜಾಸ್ತಿ ಯಾಕೆಂದರೆ ಅವರ ಆಸೆ ಸಾಯೋ ಮುನ್ನ ಕೂಡಿಡಬೇಕು ಕೊಳೆಯುವಷ್ಟು ಆಸ್ತಿ ಪಾಸ್ತಿ -ಮಾಧವ ಅಂಜಾರು

ದೇಶ ಬಿಟ್ಟು ವಿದೇಶ

ದೇಶ ಬಿಟ್ಟು ವಿದೇಶ ಕಾಲಿಟ್ಟ ದಿನವೇ ವಿಷ ಕನಸು ಹೊತ್ತು ಪ್ರವೇಶ ನನಸಾಗಲಿಲ್ಲ ಈಶ.. ಮೋಸದ ಬಲೆಗೆ ತುತ್ತಾದೆ ದುಷ್ಟರ ಆಟಕೆ ಬಲಿಯಾದೆ ಕಷ್ಟದ ದಿನಕೆ ಗುರಿಯಾದೆ ದೇಶವ ನೆನೆದು ಕೈಮುಗಿದೆ, ಅನ್ನವ ಅರಸಿ ಬಂದವನಿಗೆ ಕೈ ಕೊಳ ತೊಡಿಸುವರೆಂದಾಗ ನನ್ನ ಮನೆಮಂದಿಯರೆನಿಸಿ ಕಣ್ಣೀರ ಹರಿಸಿ ಸ್ಥಿರವಾದೆ.. ಶಪಿಸುವೆ ನಾನು ಬಲವಾಗಿ ನನ್ನ ಖುಷಿಯನ್ನು ನಶಿಸಿದ ದುಷ್ಟರಿಗೆ ದೇವರೇ ಶಿಕ್ಷಿಸು ಸರಿಯಾಗಿ ನಮ್ಮನು ರಕ್ಷಿಸು ಸುಳಿಯಿಂದ ತಾಯ್ನಾಡಿಗೆ ಮರಳಿಸು ನಾ ನಿನ್ನ ಕಂದ ನನ್ನ ಕೂಗನು ಕೇಳುವೆಯ ಮರಳಿ ತಾಯ್ನಾಡಿಗೆ ಸೇರಿಸು ನಮ್ಮೆಲ್ಲರನು ಉಳಿಸು -ಮಾಧವ ಅಂಜಾರು

ಹೆಸರುಗಳಿಸೋ ಭರದಲ್ಲಿ

ಹೆಸರುಗಳಿಸೋ ಭರದಲ್ಲಿ ಜವಾಬ್ದಾರಿ ಮರೆಯಬೇಡಿ ಉಪಕಾರ ಮಾಡೋ ನೆಪದಲ್ಲಿ ಉಪದ್ರವನ್ನ ಮಾಡಲೇಬೇಡಿ, ದಾನ ಧರ್ಮ ಮಾಡೋದಿದ್ದರೆ ನಯವಿನಯತೆ ರೂಡಿಸಿಕೊಳ್ಳಿ ಧನವಂತರಾದ ಮಾತ್ರಕೆ ನಿಮ್ಮ ಕೆಟ್ಟಗುಣವನ್ನು ತೋರಿಸಬೇಡಿ, ಉಸಿರಿದ್ದರೆ ಹೆಸರು ಗುಣವಿರದಿದ್ದರೂ ಹೆಸರೇ ಹಣವಿದ್ದರೆ ಮತ್ತೂ ಹೆಸರೇ ಇದೆಲ್ಲದರ ನಡುವೆ ನಿಲ್ಲದಿರಲಿ ಉಸಿರೇ... -ಮಾಧವ ಅಂಜಾರು