Posts

Showing posts from April, 2025

ಸ್ನೇಹದ ಬೆಸುಗೆ

ಕಾಣುವ ಕನಸುಗಳು  ನಿಲ್ಲದಿರಲಿ  ನನಸಾದರೂ  ನನಸಾಗದಿದ್ದರೂ  ಮಿಡಿಯುವ ಮನಸುಗಳು  ಕಡಿಮೆಯಾಗದಿರಲಿ  ಬಡವನಿದ್ದರೂ  ಸಿರಿವಂತನಿದ್ದರೂ  ಸ್ನೇಹದ ಬೆಸುಗೆ  ಕರಗದಿರಲಿ  ದೂರವಿದ್ದರೂ  ಹತ್ತಿರವಿದ್ದರೂ         ✍️ಮಾಧವ. ಕೆ. ಅಂಜಾರು 

ರಾಮ ರಾಮ

ರಾಮ ನಿನ್ನ ನಾಮ ಜಪಿಸಿ  ಮನವು ತುಂಬಿತು  ರಾಮ ರಾಮ ರಾಮನೆನುತಾ  ಬದುಕು ಧನ್ಯವಾಯಿತು  ಸಜ್ಜಜನರ ಬಾಯಲಿ  ನಿನ್ನ ನಾಮ ಹೊರಡಿತು  ರಾಮ ನಿಮಗೆ ಕರುಣಿಸಲಿ  ದಯೆಯೂ ಅನ್ನಿತೂ  ರಾಮನೆಂಬ ನಾಮದೊಳು  ಸಕಲ ವ್ಯಥೆಗಳು  ದೂರವಾಯಿತು  ರಾಮ ರಾಮ ರಾಮನೇನುತಾ  ಹರುಷ ತುಂಬಿತು  ಹಗಲಿರುಳು ರಾಮ ನಾಮ  ರಕ್ಷಾ ಕವಚನೀಡಿತು  ರಾಮ ರಾಮ ರಾಮನೆನುತಾ  ಬದುಕು ಬಂಗಾರವಾಯಿತು         ✍️ಮಾಧವ. ಕೆ. ಅಂಜಾರು.

ಜಯನಿನ್ನದೇ

ಆಡುವ ಮಾತಿನೊಳಗೆ  ಕೊಡುವ ತುತ್ತಿನೊಳಗೆ  ನಿನ್ನ ಮುತ್ತಿನೊಳಗೆ  ಇರದಿರಲಿ ಸಂಶಯ  ಕಾಣುವ ಕನಸಿನೊಳಗೆ  ಇರುವ ಗುರಿಯೊಳಗೆ  ಮಾಡುವ ದಾನದೊಳಗೆ  ಬಾರದಿರಲಿ ಸಂಶಯ  ಇಂದಿಗೂ ನಾಳೆಗೂ  ಭರವಸೆಯ ಹೆಜ್ಜೆಯೊಳು  ನಡೆಯುತ್ತಿರು ಎಂದಿಗೂ  ಜಯನಿನ್ನದೇ ನಿಶ್ಚಯ         ✍️ಮಾಧವ. ಕೆ ಅಂಜಾರು