Posts

Showing posts from January, 2024

ಹೇಗಿರಲಿ ರಾಮ

ಹೇಗಿರಲಿ ರಾಮ ನಿನ್ನ ನಾಮ ಜಪಿಸದೆ ಹೇಗಿರಲಿ ರಾಮ ನಿನ್ನ ಗುಡಿಯ ಕಾಣದೆ ಹೇಗಿರಲಿ ರಾಮ ನಿನ್ನ ಸೇವೆ ಮಾಡದೆ  ಹೇಗಿರಲಿ ರಾಮ ನಿನ್ನ ಪಾದಕೆರಗದೆ, ಹೇಗಿರಲಿ ರಾಮ ನಿನ್ನ ಮೂರುತಿ ಕಾಣದೆ ಹೇಗಿರಲಿ ರಾಮ ನಿನ್ನ ಭಜನೆ ಮಾಡದೆ ಹೇಗಿರಲಿ ರಾಮ ನಿನ್ನ ಪೂಜೆ ಮಾಡದೆ ಹೇಗಿರಲಿ ರಾಮ ರಾಮ ರಾಮ ಹೇಳದೆ        ✍️ಮಾಧವ. ಕೆ. ಅಂಜಾರು 

ರಾಮ ರಾಮ ರಘುರಾಮ

ರಾಮ ರಾಮ ರಘುರಾಮ ಜಾನಕಿ ವಲ್ಲಭ  ಶ್ರೀರಾಮ ರಾಮ ರಾಮ ಜಯರಾಮ ದಶರಥ ನಂದನ ಶ್ರೀರಾಮ ಕೌಸಲ್ಯನಂದನ ಶ್ರೀರಾಮ ರಾಜೀವಲೋಚನ ಶ್ರೀರಾಮ ರಾಮ ರಾಮ ರಘುರಾಮ ಶ್ರೀ ಜನಾರ್ಧನ ಶ್ರೀರಾಮ ರಾಮ ರಾಮ ಜಯರಾಮ ಸತ್ಯವ್ರತಾಯ ಶ್ರೀರಾಮ  ತ್ರಿವಿಕ್ರಮಯ ಶ್ರೀರಾಮ ಪರಮಾತ್ಮನೇ ಶ್ರೀರಾಮ ರಾಮ ರಾಮ ರಘುರಾಮ ಪರತ್ಪರಾಯ ಶ್ರೀರಾಮ ಸಚಿದಾನಂದ ಶ್ರೀರಾಮ ಸರ್ವದೇವಾತ್ಮ ಜಯರಾಮ ಪರಬ್ರಮ್ಮನೇ ಶ್ರೀರಾಮ ಜಗದ್ ಗುರುವೇ ಶ್ರೀರಾಮ         ✍️ಮಾಧವ. ಕೆ. ಅಂಜಾರು 

ಲೇಖನ -117) ವಿದೇಶದಲ್ಲಿ ಪೊಲೀಸರು ಸಾರ್ವಜನಿಕರಿಗೆ ಹೇಗೆಲ್ಲ ಸಹಾಯ ಮಾಡುತ್ತಾರೆ ನೀವೇ ನೋಡಿ

Image
✍️ Madhav. K. Anjar   ( ಲೇಖನ -117) ವಿದೇಶದಲ್ಲಿ ಪೊಲೀಸರು ಸಾರ್ವಜನಿಕರಿಗೆ ಹೇಗೆಲ್ಲ ಸಹಾಯ ಮಾಡುತ್ತಾರೆ ನೀವೇ ನೋಡಿ....! ಪೊಲೀಸರೆಂದರೆ  ಭಯದಿಂದ ಓಡುವ ನಮ್ಮ ದೇಶದ ಜನರು ಪೋಲಿಸ್ ವ್ಯವಸ್ಥೆಯಿಂದ  ಸಹಾಯಕ್ಕಿಂತ ಜಾಸ್ತಿ ತೊಂದರೆಯನ್ನು  ಅನುಭವಿಸಿರುವ ಉದಾಹರಣೆಗಳನ್ನು ಹೆಚ್ಚಿನ ಜನರು  ಹೇಳುತ್ತಾರೆ   ಪೊಲೀಸ್ ಠಾಣೆಯಲ್ಲಿ  ಅಥವಾ ಸಂಚಾರಿ ಗಸ್ತು ಪೊಲೀಸರು ಸಾರ್ವಜನಿಕರನ್ನು ವಿನಾಕಾರಣ ಉಪದ್ರವಿಸಿ ಭ್ರಷ್ಟಾಚಾರದಲ್ಲಿ  ತೊಡಗಿಸಿಕೊಂಡಿರುವ  ಉದಾಹರಣೆಗಳು  ಹೆಚ್ಚಾಗಿ ಇದ್ದಿರಬಹುದು. ಹಾಗಾಗಿ  ಅತಿ ಹೆಚ್ಚು ಪ್ರಕರಣಗಳು ಪೊಲೀಸ್ ಠಾಣೆಗೆ  ಹೋಗದೆ   ಮುಚ್ಚಿಹೋಗಿರುತ್ತದೆ. ಅಪಘಾತ, ಬೆದರಿಕೆ, ಕೃತ್ಯಗಳು, ಬಲಾತ್ಕಾರ, ಶೋಷಣೆ, ಜಾತಿನಿಂದನೆಗಳು, ಧರ್ಮ ನಿಂದನೆ, ಸಾರ್ವಜನಿಕ ಆಸ್ತಿಪಾಸ್ತಿ ನಾಶ, ಭ್ರಷ್ಟಾಚಾರ, ವಂಚನೆ ಪ್ರಕರಣಗಳು   ಪೊಲೀಸ್ ಠಾಣೆಗೆ ಹೋದಾಗ ಸರಿಯಾದ ತನಿಖೆ, ಮತ್ತು ಕಾನೂನಿನ ರೀತಿಯಲ್ಲಿ  ಬೇಕಾಗುವ ಶಿಕ್ಷೆಯನ್ನು ಕೊಡುವ ಬದಲು ಆರೋಪಿಗಳನ್ನು ರಾಜಕೀಯ ಪ್ರಭಾವ ಮತ್ತು ಹಣದಾಸೆಗಾಗಿ  ಹೆಚ್ಚಿನ ಪ್ರಕರಣಗಳನ್ನು  ತಿರುಚಿರುವ  ಉದಾಹರಣೆಗಳು ಹೆಚ್ಚಾಗಿ ಇದ್ದಿರಬಹುದು. ಈಗಲೂ  ಸಮಾಜದಲ್ಲಿ ಅತಿಯಾದ ಜಾತಿ ವ್ಯಾಮೋಹದಿಂದ ಸಮಾಜದಲ್ಲಿ ಬೇದ ಭಾವನೆಗಳು  ಜೀವಂತವಾಗಿವೆ. ಇದರಿಂದ ಅಲ್ಲಲ್ಲಿ ನಡೆಯುವ  ಹಲವಾರು ಪ್ರಕರಣಗಳು  ಪೊಲೀಸ್ ಠಾಣೆ ಹತ್ತಿದರು  ಪ್ರಭಾವಿಗಳ ಪ್ರಭಾವಕ್ಕೆ ಒಳಗಾಗಿ ದೂರುದಾರರ ಮಾಹಿತಿಯನ್ನು ಪರಿಶೀಲಿಸದೇ ಹ