(ಲೇಖನ -88)ಸಾಕ್ಷಾಧಾರಗಳಿಲ್ಲದೆ ಅದೆಷ್ಟೋ ಪ್ರಕರಣಗಳು ನ್ಯಾಯಾಲಯದಲ್ಲಿ ಖುಲಾಸೆಗೋಳ್ಳುತ್ತದೆ ಅಲ್ಲವೇ?

 ಸಾಕ್ಷಾಧಾರಗಳಿಲ್ಲದೆ ಅದೆಷ್ಟೋ ಪ್ರಕರಣಗಳು ನ್ಯಾಯಾಲಯದಲ್ಲಿ  ಖುಲಾಸೆಗೋಳ್ಳುತ್ತದೆ ಅಲ್ಲವೇ?. ಆರೋಪಿಗಳು  ಕಾನೂನಿನ ಭಯವಿಲ್ಲದೆ  ಇನ್ನಷ್ಟು  ದುಷ್ಪೃತ್ಯಗಳನ್ನು  ಮಾಡುವ ಸಂದರ್ಭ ಬಹುತೇಕ ಹೆಚ್ಚು. ಆರೋಪಿಗಳಿಗೆ  ಬೆನ್ನೆಲುಬಾಗಾಗಿ ನಿಲ್ಲುವ  ಅದೆಷ್ಟೋ ಅವಿವೇಕಿಗಳು  ಸಹಾಯ ಮಾಡುತ್ತಾ  ಆರೋಪಿಗಳಿಗೆ ಇನ್ನಷ್ಟು  ಪ್ರೋತ್ಸಾಹ ಮಾಡಿ  ಸಮಾಜವನ್ನು ಕೆಡಿಸುವಲ್ಲಿ  ನಿಸ್ವಾರ್ಥ ಸೇವೆಯನ್ನು  ಮಾಡುತ್ತಾರೆ. ಯಾವುದೋ ಒಂದು ಕಾರಣಕ್ಕೆ ಆರೋಪಿಗಳನ್ನು ರಕ್ಷಿಸುವ ಕೆಲಸಗಳನ್ನು ಮಾಡುವ  ಕೆಲವು ಅಧಿಕಾರಿಗಳು, ಜನಸೇವಕರು, ಧರ್ಮಸೇವಕರು, ಮತಾಂಧರು, ತನಗೆ ಲಾಭವಿದ್ದಲ್ಲಿ ಏನು ಮಾಡಲೂ ಬಯಸುವ ಇಂಥವರ  ಸಂಖ್ಯೆ  ಹೆಚ್ಚಾಗುತ್ತಲೇ ಅಮಾಯಕರು  ತನ್ನ ಜೀವನವನ್ನು  ಮಾಡಬಾರದ ತಪ್ಪಿಗಾಗಿ  ಕೋರ್ಟು ಕಚೇರಿಯಲ್ಲಿ  ಅಲೆಯುವ  ಪ್ರಕರಣಗಳು  ಅಲ್ಲಲ್ಲಿ  ನಡೆಯುತ್ತಲೇ ಇದೆ.



ಯಾವುದೇ ಪ್ರಕರಣವಾಗಲಿ  ನ್ಯಾಯಾಲಯಕ್ಕೆ ಸಾಕ್ಷಿ, ಪುರಾವೆಗಳ ಅವಶ್ಯಕತೆ ಇದೆ ಎಂದು  ನಮ್ಮ ಕಾನೂನು  ಹೇಳುತ್ತದೆ. ಆದರೆ ಸಾಕ್ಷಿಗಳು  ಇದ್ದರೂ ಕೂಡ  ಸರಿಯಾದ , ಸಮರ್ಪಕವಾದ  ಸಾಕ್ಷಗಳು  ಇಲ್ಲವೆಂದು  ಹಳ್ಳ ಹಿಡಿದು ಹೋಗುವ  ಉದಾರಣೆಗಳು  ಸಾಕಷ್ಟು ನಮ್ಮ ಕಣ್ಣ ಮುಂದೆ ಇರಬಹುದು. ಇಂತಹ ಪ್ರಕರಣಗಳಲ್ಲಿ ಹೆಚ್ಚಾಗಿ ಕಾನೂನಿನ ಲೋಪದೋಷಗಳನ್ನು  ಅರಿತಿರುವ  ನ್ಯಾಯವಾದಿಗಳು  ಉದ್ದೇಶಪೂರ್ವಕವಾಗಿ  ಅಥವಾ ತಿಳಿದು ತಿಳಿಯದಂತೆ ನಟಿಸಿ ಎದುರಾಳಿಯ  ಪರವಾಗಿ  ನಿಂತು  ಸಹಾಯ ಮಾಡುವ ಸಂದರ್ಭಗಳಲ್ಲಿ  ಅತಿ ಹೆಚ್ಚು ಪ್ರಕರಣಗಳು  ನ್ಯಾಯ ಸಿಗುವಲ್ಲಿ  ವಿಫಲಗೊಳ್ಳುವ  ಸಂದರ್ಭ ಇರಲೂಬಹುದು.


            ತನ್ನ ಕಕ್ಷಿದಾರನಿಗೆ  ಮೋಸ ಮಾಡದೇ ಇರುವ  ನ್ಯಾಯವಾದಿಗಳು  ಹೆಚ್ಚಿನ ಪ್ರಕರಣವನ್ನು ಸತ್ಯದ ತುಲನೆಯನ್ನು ಮಾಡಿ  ನಿಜವಾದ ನ್ಯಾಯಕ್ಕೆ ಹೋರಾಟ ಮಾಡಿಯೇ ಮಾಡುತ್ತಾನೆ. ನ್ಯಾಯವನ್ನು  ದೊರಕಿಸಿಕೊಡುವಲ್ಲಿ  ಸಫಲನಾಗುತ್ತಾನೆ. ತನ್ನ ಹೊಟ್ಟೆಪಾಡಿಗಾಗಿ ಇನ್ನೊಬ್ಬ ಸತ್ತರೂ ಪರವಾಗಿಲ್ಲ, ಆತನ ಮನೆ ಹಾಳಾದರೂ ಪರವಾಗಿಲ್ಲ, ನಾನು ಬದುಕಿದರೆ ಮಾತ್ರ ಸಾಕು ಎನ್ನುವ  ಕೆಲವು ನ್ಯಾಯವಾದಿಗಳ  ಅತಿ ಆಸೆ  ನ್ಯಾಯ ದೊರಕಿಸುವ ಬದಲು ಪ್ರಕರಣವನ್ನು ಮುಂದೂಡುತ್ತಾ  ಹಣ ಸಂಪಾದನೆಯನ್ನು ಮಾತ್ರ  ಮಾಡಿ ಬದುಕೋ ಸಾಧ್ಯತೆಗಳು ಹೆಚ್ಚಾಗಿರಬಹುದು.

             ಪ್ರತಿಯೊಂದು ಧರ್ಮದಲ್ಲೂ  ದೇವರ ನಂಬಿಕೆ ಅನ್ನೋದು ಇದೆ, ಪ್ರತಿಯೊಂದು ಧರ್ಮದಲ್ಲೂ  ದೇವರನ್ನು ನಂಬದವರು ಇದ್ದಾರೆ, ಕೆಲವರು ನಾಸ್ತಿಕರಾದರೆ, ಕೆಲವರು ಬಹಳ ನಂಬಿಕೆಯಿಂದ  ತನ್ನ ಜೀವನವನ್ನು  ಪ್ರಾರ್ಥನೆಗಳ ಮೂಲಕ  ಜೀವನವನ್ನು ಕಳೆ ಯುವವರು ಇದ್ದಾರೆ. ಇದರಲ್ಲಿ ಸಮಾಜಕ್ಕೆ  ತೊಂದರೆಗಳು  ಆಗುವ ಸಾಧ್ಯತೆ ಕಡಿಮೆ. ಆದರೆ ಧರ್ಮದ ಹೆಸರಲ್ಲಿ  ಎತ್ತರದ ಜಾಗವನ್ನು  ಆಕ್ರಮಿಸಿಕೊಂಡು  ಭಕ್ತರ ನಂಬಿಕೆಯನ್ನು ಉಪಯೋಗಿಸಿ , ಆಸ್ತಿ, ಸಂಪತ್ತು ಗಳಿಸಲು   ಕೊಲೆ ದರೋಡೆ, ಅತ್ಯಾಚಾರ, ದೌರ್ಜನ್ಯ ಮುಂತಾದ ಕೃತ್ಯಕ್ಕೆ ಕೈ ಹಾಕಿ ಜನರನ್ನು, ವ್ಯವಸ್ಥೆಯನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳುವ ಕನಸು ಇರಬಹುದು. ಬಹಳ ಸುಲಭದಿಂದ ಸಿಗುವ  ಹಣವು ಯಾರಿಗೆಷ್ಟು ಹೋದರೇನು? ತೆರಿಗೆ, ಲೆಕ್ಕಾಚಾರ ಇಲ್ಲದೆ ಸರ್ಕಾರದ ಕಣ್ಣಿಗೂ ಮಣ್ಣುಹಾಕಿ ಪರದೆಯ ಹಿಂದೆ ಮಾಫಿಯ ಜಗತ್ತಿಗೆ ಉತ್ತಮವಾದ ಕೊಡುಗೆ ಕೊಡುತ್ತ ಸಾಮಾನ್ಯ ಜನರಿಗೆ ಜನಸೇವೆ ಮಾಡುತ್ತಿರುವ ಮೊಗವನ್ನು ತೋರಿಸುವ ಅನೇಕ ಜನರಿರಬಹುದು. ಅಧಿಕಾರ ದರ್ಪ, ಸೌಜನ್ಯವಿಲ್ಲದವರು, ಹಣದ ಪ್ರಾಭಲ್ಯತೆ, ಕೆಟ್ಟ ರಾಜಕೀಯ ವ್ಯಕ್ತಿಗಳ ಪ್ರಭಾವ, ಮೌನ, ಇದೆಲ್ಲವೂ ಯಾವುದೇ ಕೆಟ್ಟ ಘಟನೆಗೆ ನ್ಯಾಯ ಕೊಡಿಸಲು  ಸಾಧ್ಯವಿಲ್ಲ ಅಲ್ಲವೇ.? ಪೆಟ್ಟು ತಿಂದವನು ನ್ಯಾಯಕ್ಕಾಗಿ ನ್ಯಾಯಾಲಯ ಮೆಟ್ಟಿಲು ಹತ್ತಿದಾಗ ಅವನ ಮೇಲೆ ರಾಕ್ಷಸರು ಎಲ್ಲರೂ ಸೇರಿ ತನ್ನ ಶಕ್ತಿಯನ್ನು ಉಪಯೋಗಿಸಿ ಸಾಕ್ಷಿಯನ್ನು ನಾಶ ಮಾಡಿ, ಬೆದರಿಕೆ, ಇನ್ನಷ್ಟು ಜಾಸ್ತಿ ತೊಂದರೆಗಳನ್ನು ಸೃಷ್ಟಿಸಿ ಜೀವನ ಮತ್ತು ಕುಟುಂಬವನ್ನೇ ನಾಶ ಮಾಡುವ ಕೆಲಸಕ್ಕೆ ಕೈ ಹಾಕುವ ಸಾಧ್ಯತೆಕೂಡ ಇರಬಹುದು.

           ನನ್ನ ಅನುಭವದ ಪ್ರಕಾರ, ಒಬ್ಬ ನಿರಪರಾಧಿ, ಅಥವಾ ನ್ಯಾಯ ಬಯಸುವ ವ್ಯಕ್ತಿ ಪೋಲಿಸು ವ್ಯವಸ್ಥೆ ಅಥವಾ ನ್ಯಾಯ ವ್ಯವಸ್ಥೆಯ ಕದ ತಟ್ಟಲು ಹೋದಾಗ ಅದರಲ್ಲಿ ನ್ಯಾಯಕ್ಕಿಂತ ಜಾಸ್ತಿ ಅನ್ಯಾಯವಾಗುವ ಸಾಧ್ಯತೆಯೇ ಜಾಸ್ತಿ, ಯಾಕೆಂದರೆ 28 ವರುಷದ ಹೋರಾಟದಲ್ಲಿ ನ್ಯಾಯ ಸಿಗದೇ ಇದ್ದ ಜಾಗದಲ್ಲಿ ನಮ್ಮಂತೆ ಅದೆಷ್ಟು ಜನರಿಗೆ ನ್ಯಾಯ ಸಿಕ್ಕಿರಬಹುದು ಅಲ್ಲವೇ? ಆ ಕುರಿತು ಇನ್ನೊಮ್ಮೆ ಬರೆಯುತ್ತೇನೆ! ನಮ್ಮ ವ್ಯವಸ್ಥೆಗಳು ಯಾವ ರೀತಿಯಲ್ಲಿ ಕೆಲಸ ಮಾಡುತ್ತಿವೆ? ನಮ್ಮ ಸರಕಾರಿ ಅಧಿಕಾರಿಗಳು ಎಷ್ಟರ ಮಟ್ಟಿಗೆ ಪ್ರಾಮಾಣಿಕವಾಗಿದ್ದಾರೆ? ಎಷ್ಟು ಹಣದಾಸೆ ಹೊಂದಿದ್ದಾರೆ? ಅವರ ಅಗತ್ಯಗಳೇನು? ಒಂದು ಸರಕಾರಿ ನೌಕರ ಅಥವಾ ನ್ಯಾಯವಾದಿ,ತನ್ನ ಆದಾಯಕ್ಕಿಂತ ಹತ್ತು ನೂರು ಪಟ್ಟು ಆಸ್ತಿ ಮಾಡಿ ಹಾಯಾಗಿ ಬದುಕುವ ಹಿಂದೆ ಎಷ್ಟು ಜನರ ಶಾಪ ಮತ್ತು ರಕ್ತ ಕುಡಿದು ಬದುಕುತ್ತಾ ಇರಬಹದು ಅಲ್ಲವೇ? ಪ್ರಾಮಾಣಿಕನಾಗಿ ಇದ್ದವರಿಗೆ, ಸೌಜನ್ಯವಾಗಿದ್ದವರಿಗೆ  ದುರ್ಗತಿ ಬಂದುಬಿಡುವ ಸಾಧ್ಯತೆ ಜಾಸ್ತಿ ಅನ್ನುವ ಸ್ಥಿತಿಗೆ ತಲುಪಿಯಾಗಿದೆ,.

         ಪಾಪಿಗಳ ಸಾಮ್ರಾಜ್ಯದಲ್ಲಿ ಸಾಮಾನ್ಯರ ಬದುಕು ಎಷ್ಟು ನರಕವಾಗಿರುತ್ತದೆ ಅಲ್ಲವೇ?  ಈ ಲಂಚವತಾರ ಬುಡಸಮೇತ ಕಿತ್ತು ಹಾಕುತ್ತೇವೆ ಎನ್ನುವ ಮುಖಂಡರೆ ಲಂಚದ ಹೆಮ್ಮರವಾಗಿರುತ್ತಾರೆ , ಜನರ ಕೂಗು ಯಾರಿಗೆ ಕೇಳುತ್ತದೆ? ಜನರು ಎಲ್ಲಿಗೆ ಹೋದರೂ ನ್ಯಾಯ ಸಿಗುವುದಿಲ್ಲ ಎಂದಾಗ ಇನ್ನೇನು ಮಾಡಲು ಸಾಧ್ಯ? ನ್ಯಾಯ ವ್ಯವಸ್ಥೆ ಹದಗೆಟ್ಟಿದೆ, ಸತ್ಯ ಹರಿದಾಡುವ ಬದಲು ಸುಳ್ಳು ಎಗ್ಗಿಲ್ಲದೇ ಹರಡಿ ಸಮಾಜ ಹಾಳಾಗುತ್ತಿದೆ. ಈ ಸಮಾಜವನ್ನು ಸರಿ ಮಾಡಲು ಸಾಧ್ಯವಿಲ್ಲ ನಮ್ಮ ಹೆಂಡತಿ ಮಕ್ಕಳು ಸರಿಯಾಗಿದ್ದರೆ ಸಾಕೆನ್ನುತ ಹಣದ ರಾಶಿ ಹಾಕಿದ ಉದಾಹರಣೆ ಎಷ್ಟಿದೆ ಅಲ್ಲವೇ? ತಹಶೀಲ್ದಾರ ಕೋಟಿಗಟ್ಟಲೆ ಹಣ ಮಾಡಿದ ಸುದ್ದಿ ಒಂದು ದಿನ ಓದಿ ಎಲ್ಲರೂ ಮರೆತು ಬಿಡುತ್ತಾರೆ. ಅವನು ಗಳಿಸಿದ ಹಣದ ಪ್ರಭಾವದಿಂದ ಕಾನೂನಿನ ಲೋಪ ದೋಷಗಳನ್ನು ಹಿಡಿದು ಮತ್ತೆ ಹೊರಗೆ ಬಂದು ಅದೇ ಕಾರ್ಯ ಮಾಡುತ್ತಾನೆ ಇದು ಸತ್ಯ. ಇದಕ್ಕೆ ಯಾರು ಹೊಣೆ ಎಂಬುವುದನ್ನು ಜನರು ಹೇಳಿದರೂ ಪ್ರಯೋಜನವಿಲ್ಲ. ನಮ್ಮ ಅಕ್ಕ ಪಕ್ಕದಲ್ಲಿ ನಡೆದ ಅನೇಕ ಕೊಲೆ, ಅತ್ಯಾಚಾರ, ದೌರ್ಜನ್ಯ, ಕೇವಲ ಸುದ್ದಿಯಾಗಿ ಹೋಗಿ ಬಿಡುತ್ತದೆ. ನ್ಯಾಯ ಸಿಗಬೇಕು ಅನ್ನುವ ಹಠದೊಂದಿಗೆ ನ್ಯಾಯ ಹುಡುಕಲು ಹೋಗಿರುವ ಅಮಾಯಕರು ತನ್ನ ಜೀವನದ ಅಂತ್ಯ ಕಾಣುವಷ್ಟು ನಮ್ಮ ಕಾನೂನು ವ್ಯವಸ್ಥೆಯ ಅವಸ್ಥೆ ಇದೆ. ಕಾನೂನು ಸಾಮಾನ್ಯರಿಗೆ ಒಂದು ರೀತಿ ಹಣವಂತರಿಗೆ ಒಂದು ರೀತಿ ಮತ್ತು ಜನಬಲ ಇದ್ದವರಿಗೆ ಒಂದು ರೀತಿಯಲ್ಲಿ ಇದ್ದಂತೆ ಎದ್ದು ಕಾಣುತ್ತಿದೆ.  ಹಣಕ್ಕೆ ಅಧಿಕಾರಕ್ಕೆ ಭ್ರಷ್ಟಚಾರ ಮಾಡುವ  ಪ್ರತಿಯೊಬ್ಬರೂ ಈ ಕೊಲೆ, ಅತ್ಯಾಚಾರಕ್ಕೆ ಪರೋಕ್ಷವಾಗಿ ಕೊಡುಗೆ ನೀಡಿದಂತೆ. ಪೊಲೀಸನಾದ್ರು, ನ್ಯಾಯವಾದಿ ಯಾದರು, ನ್ಯಾದೀಶನಾದರೂ ಪ್ರಾಮಾಣಿಕವಾಗಿ ಯಾವುದೇ ಅಧಿಕಾರಿಗಳಾದರೂ ನ್ಯಾಯಯುತ ವಾಗಿ ಸಂಪಾದಿಸಿ. ಅನ್ಯಾಯದ ಸಂಪಾದನೆ ಮಾಡಿ ಮೆರೆದವರು ಜೀವನದ ಅರ್ಧ ಆಯುಷ್ಯ ದಲ್ಲಿ ಪಾರಾಲಿಸಿಸ್, ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ನಾನು ಬಹಳ ತಪ್ಪು ಮಾಡಿದ್ದೇನೆ ಎಂದು ಹೇಳಿರುವ ನ್ಯಾಯವಾದಿ ನಮ್ಮ ಪ್ರಕರಣದಲ್ಲಿ ಆಗಿರುವ ಉದಾಹರಣೆ ಇದೆ. ಅನ್ಯಾಯ ಮಾಡಿದ ಜನರಿಗೆ ನ್ಯಾಯಾಲಯ ಕೊಡಲು ವಿಫಲವಾದರೂ ನಮಗೆ ಕಾಣದೆ ಇರುವ ಶಕ್ತಿ (ದೇವರುಗಳು, ತುಳುನಾಡಿನ ದೈವ ) ಕೊಡುತ್ತಾನೆ, ಅದು ಸಾಬೀತಾಗಿದೆ ಕೂಡ.

            ಸಾವಿರಾರು ಪ್ರಕರಣದ ಸುದ್ದಿ ಹಲವಾರು ವರುಷ ಕಳೆಯುತ್ತಿದೆ, ಅದರೊಂದಿಗೆ ಕೆಲವು ಅಮಾಯಕರು  ಕೂಡ ಮಾಡದ ತಪ್ಪಿಗೆ ಬದುಕಿದ್ದೂ ಸತ್ತಂತೆ ಆಗುವ ಉದಾಹರಣೆ . ಇಂತಹ ಅನೇಕ ಪ್ರಕರಣ ದೇಶದಲ್ಲಿ ನಡೆದುಹೋಗುತ್ತಿದೆ ಅದರಲ್ಲಿ ಕೆಲವೇ ಕೆಲವು ಜನರಿಗೆ ಶಿಕ್ಷೆಯಾಗುತ್ತಿದೆ. ತಪ್ಪು ಮಾಡಿದವರು ಯಾರೇ ಆಗಲಿ  ಅವರಿಗೆ ಶಿಕ್ಷೆ ಆದಾಗ ಇಂತಹ ಉದಾಹರಣೆ ಕಡಿಮೆ ಆಗಬಹುದು. ಪ್ರತೀ ಕೊಲೆ  ತನಿಖೆಯ ವಿಡಿಯೋ ( ಚಿತ್ರೀಕರಣ ಮಾಡಿ ) ಜನರಿಗೆ ಸತ್ಯವನ್ನು ತಿಳಿಸಲೇ ಬೇಕು


. ಪಾರದರ್ಶಕ ತನಿಖೆ ನಡೆಸಿ ಆರೋಪಿಗಳಿಗೆ ಜೀವನಪರ್ಯಂತ ಜೈಲಲ್ಲಿ ಕೊಳೆತುಹೋಗಬೇಕು. ಪಾಪಿಗಳು ಎಲ್ಲಿದ್ದರೂ ಸಿಗುವಂತಾಗಲಿ  ದೇವರು ನಮ್ಮ ಪ್ರಾರ್ಥನೆ ಸ್ವೀಕರಿಸಲಿ.

ಕೊಲೆ ಆರೋಪಿಗಳು ಹುಚ್ಚು ಹಿಡಿದು ಬೀದಿ ಸುತ್ತಲಿ, ಭ್ರಷ್ಟಾಚಾರ ಮಾಡುವವರು ಕೂಡ ಭ್ರಷ್ಟಾಚಾರದಲ್ಲಿ ಸಂಪಾದಿಸಿದ ಹಣ ತಿನ್ನದೆ ಸರ್ವ ನಾಶವಾಗಲಿ.

               ✍️ಮಾಧವ. ಕೆ. ಅಂಜಾರು.

Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

( ಲೇಖನ -122) ಭೂ - ಕೈಲಾಸ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.