(ಲೇಖನ -69)ಸ್ನೇಹದಲ್ಲಿ ನ ವಿಶ್ವಾಸ, ಸಂಬಂಧದಲ್ಲಿನ ವಿಶ್ವಾಸ, ಪ್ರೀತಿಯಲ್ಲಿನ ವಿಶ್ವಾಸ ಉಳಿಸಿಕೊಳ್ಳುವ ಯೋಗ್ಯತೆ ಕೆಲವರಿಗೆ ಮಾತ್ರ ಇರುತ್ತದೆ, ವಿಶ್ವಾಸಘಾತ ವಾಗಲು ಅವಕಾಶವನ್ನು ಮಾಡಿಕೊಡಬಾರದು
✍️ Madhav. K. Anjar ( ಲೇಖನ 69 ) ರಾತ್ರಿ 9:30 ಸಮಯ, ಇವತ್ತು ಎನಗೆ ಹೆಚ್ಚು ಮಾತನಾಡಲು ಸಮಯವಿಲ್ಲ, ಥಟ್ಟನೆ ಇವತ್ತಿನ ಲೇಖನ ಬರೆಯಲು ಒಂದು ವಿಷಯ ಕೊಡಿ ಎಂದು ನನ್ನ ಅತ್ಯಂತ ಪ್ರೀಯ ಗೆಳೆಯನೊಬ್ಬನಿಗೆ ಕರೆ ಮಾಡಿದಾಗ, ವಂಚನೆ, ವಿಶ್ವಾಸಘಾತದ ಬಗ್ಗೆ ಬರೆದುಬಿಡಿ ಎಂದುಬಿಟ್ಟರು! ಓಹ್, ವಿಶ್ವಾಸಘಾತವೆ ..... ಇಂದಿನ ಪ್ರಪಂಚದಲ್ಲಿ, ವಿಶ್ವಾಸ ಘಾತುಕರ ಸಂಖ್ಯೆ ಬಹಳಷ್ಟಿದೆ, ಮುತ್ತಿನಂಥಹ ಮನುಷ್ಯರನ್ನು ಹುಡುಕಲು ಹರಸಾಹಸ ಪಡಬೇಕಾಗುತ್ತದೆ, ನಾವೆಷ್ಟು ಎಚ್ಚರಿಕೆಯಿಂದಿದ್ದರೂ, ವಿದ್ಯಾವಂತರಾಗಿದ್ದರೂ, ಬುದ್ಧಿವಂತರಾಗಿದ್ದರೂ ಒಂದಲ್ಲ ಒಂದು ರೀತಿಯಲ್ಲಿ ವಂಚನೆಗೆ ಒಳಗಾಗುತ್ತೇವೆ ಅಲ್ಲವೇ? ವಂಚಕರ ತಂಡ , ವಿಶ್ವಾಸ ಘಾತುಕರ ತಂಡ ಯಾವುದೇ ಮುಲಾಜಿಲ್ಲದೆ ತನ್ನ ಕಾಯಕದಲ್ಲಿ ತಲ್ಲೀನರಾಗಿರುತ್ತಾರೆ . ಅವರಿಗೆ, ಗೌರವ, ನಾಚಿಕೆ, ಮಾನ ಮರ್ಯಾದೆ, ಸಮಾಜದ ಬಗ್ಗೆ ಯಾವುದೇ ಹೆದರಿಕೆ ಗಳಿಲ್ಲದೆ ಧೈರ್ಯವಾಗಿ ನಡೆಸುವ ಕಾಯಕ. ನಿಮ್ಮ ಜೀವನದಲ್ಲಿ ಅದೆಷ್ಟೋ ಸಂದರ್ಭಗಳನ್ನು ಅನುಭವಿಸಿರಬಹುದು, ವ್ಯಕ್ತಿಯ ವಿಶ್ವಾಸ ಮಾಡುವುದಕ್ಕೂ, ವಿಶ್ವಾಸ ಗಳಿಸುವುದಕ್ಕೂ ತುಂಬಾ ಸಮಯವನ್ನು ತೆಗೆದುಕೊಳ್ಳುತ್ತೇವೆ, ಆದರೆ ಗಳಿಸಿದ ವಿಶ್ವಾಸವನ್ನು ಉಳಿಸಿಕೊಳ್ಳುವವರು ಬಹಳಷ್ಟು ಕಡಿಮೆ, ಸರಾಸರಿ ಸ್ನೇಹ, ಪ್ರೀತಿ, ವಿಶ್ವಾಸ, ಬಾಂಧವ್ಯವನ್ನು ಗಟ್ಟಿಗೊಳಿ...