Posts

Showing posts from September, 2020

ದೊಡ್ಮನೆ (ಕವನ -86)

ದೊಡ್ಮನೆ  ******* ಪಕ್ಕದ ಮನೆಯವರು ದೊಡ್ಡ ಮನೆ ಕಟ್ಟಿದರೆಂದು ಸಡ್ಡು ಹೊಡೆದು ಸಾಲಮಾಡಿ ಅದಕ್ಕಿಂತ ದೊಡ್ಡ ಮನೆ ಕಟ್ಟಲು ಅಣಿಯಾಗಬೇಡಿ, ಪಕ್ಕದ ಮನೆಯವರು ದೊಡ್ಡ ಕಾರು ತೆಗೆದುಕೊಂಡರೆಂದು ಸಂಪೂರ್ಣ ಸಾಲಮಾಡಿ ಹೊಸ ಕಾರನ್ನು ಖರೀದಿ ಮಾಡಲು ಅಣಿಯಾಗಲೇಬೇಡಿ ಸುತ್ತಮುತ್ತಲಿನ ಜನ ನಿಮ್ಮ ಪರಿಸ್ಥಿತಿ ನೋಡಿ ನಗುತ್ತಾರೆಂದು ಶೋಕಿ ಜೀವನಕ್ಕೆ ಕೈ ಹಾಕಬೇಡಿ ಆರೋಗ್ಯಕ್ಕಿಂತ ದೊಡ್ಡ ಸಂಪತ್ತು ಇನ್ಯಾವುದೂ ಇಲ್ಲವೆಂದು ತಿಳಿಯದೆ ಇರಬೇಡಿ         ✍️ಮಾಧವ ನಾಯ್ಕ್ ಅಂಜಾರು 🌹

ಲಗಾಮು (ಕವನ -87)

 ಲಗಾಮು  ****** ದಾರವಿಲ್ಲದ ಗಾಳಿಪಟ  ಎಷ್ಟು ಮೇಲೆ ಹಾರಾಡಿದರೂ  ಗಾಳಿಯ ರಭಸಕೆ ದಿಕ್ಕು ದೆಸೆಯಿಲ್ಲದೆ  ನೆಲ ಕಚ್ಚುವುದು ಖಂಡಿತ  ಲಗಾಮಿಲ್ಲದ ಕುದುರೆ  ಎಷ್ಟು ಓಡಾಡಿದರೂ  ಲಕ್ಷ್ಯವಿಲ್ಲದ ಜಾಗಕೆ ಓಡುತ  ಧೂಳೆಬ್ಬಿಸುವುದು ಸಹಜ  ಅಂಕುಶವಿಲ್ಲದ ಆನೆ  ಎಷ್ಟು ಬಲಶಾಲಿಯಾದರೂ  ಮದವೇರಿದ ಹುಚ್ಚಾಟದಲಿ  ಸಿಕ್ಕಿದ್ದನ್ನು ನಾಶಪಡಿಸುವುದು  ನಿಜ  ಹಿಡಿತವಿಲ್ಲದ ಜೀವಕೆ  ವಿದ್ಯೆಯಿದ್ದರೂ, ಶಕ್ತಿಯಿದ್ದರೂ  ಐಶ್ವರ್ಯವಿದ್ದರೂ,  ಕ್ಷಣಮಾತ್ರಕೆ ಮುಗಿಯೋದು ನಿಜ          ✍️ಮಾಧವ ನಾಯ್ಕ್ ಅಂಜಾರು 🌹

ಭರವಸೆ (ಕವನ -88)

 ಭರವಸೆ ******* ಬದುಕಿದರೆ ಇನ್ನು ಕೇವಲ  ನಾಲ್ಕುದಿನವೆಂದೇ ಬದುಕಬೇಕು ಐದನೆಯ ದಿನ ಸಿಕ್ಕಿದರೆ ಮತ್ತೆ 4 ದಿನವೆಂದೇ ಬದುಕಬೇಕು  ಜೀವನದಲ್ಲಿ ಆಸೆಗಳು ಇರಬೇಕು  ನಾಲ್ಕು ದಿನ ಬದುಕು ನಡೆಸುವೆ ನೆಂಬ  ಭರವಸೆಯಲ್ಲಿ ಜೀವನ ಸಾಗಿಸಬೇಕು  ದುರಾಸೆಗೆ ಸಿಕ್ಕಿಬೀಳದಂತೆ ಇರಬೇಕು  ಬದುಕಿದರೆ ಮೂರು ದಿನವೆಂದೇ ಬದುಕಬೇಕು  ನಾಲ್ಕನೆಯ ದಿನ ಸಾಯುತ್ತೇನೆಂದು ತಿಳಿದಾಕ್ಷಣ  ಮತ್ತೆ ಹುಟ್ಟಿ ಬರುವೆನೆಂಬ ಧೈರ್ಯದಲಿ  ಇರುವ ಮೂರು ದಿನ ನಗುತ್ತಾ ಇರಬೇಕು        ✍️ ಮಾಧವ ನಾಯ್ಕ್ ಅಂಜಾರು🙏🌹

ದುಃಖ (ಕವನ -89)

 ದುಃಖ  ***** ಒಂದಲ್ಲ ಒಂದು ದಿನ ಪ್ರತಿಜೀವಿಗೂ ಸಾವು ಬಂದೇ ಬರುತ್ತದೆ ಬದುಕು ಕೊನೆಗೊಳ್ಳುವ ತನಕ ಸಂತೋಷ, ನೋವು ಇದ್ದೇ ಇರುತ್ತದೆ  ಮನುಷ್ಯನ ಸಾವು-ನೋವು  ಸಂಬಂಧ, ಸಮಾಜ, ಗೆಳೆಯ-ಗೆಳತಿಯರಿಗೆ  ದುಃಖವನ್ನು ತಂದುಬಿಡುತ್ತದೆ  ಸತ್ಕಾರ್ಯ ಮಾತ್ರ ಉಳಿದುಬಿಡುತ್ತದೆ  ಎಷ್ಟೇ ಗಳಿಸಿದರು, ಉಳಿಸಿದರೂ   ಇಂದಲ್ಲ ನಾಳೆ ಸಾವು ಬಂದೇ ಬರುತ್ತದೆ  ಸುತ್ತಲಿನ ಸಮಾಜಕ್ಕಾಗಿ ಮಾಡುವ  ಒಳಿತು ಮಾತ್ರ ಇದ್ದುಬಿಡುತ್ತದೆ        ✍️ ಮಾಧವ ನಾಯ್ಕ್ ಅಂಜಾರು 🌹