ನಿನ್ನ ಬರುವಿಕೆ
ಸಾಲು ಗಿಡಗಳ ಮರವಾಗಿಸಿ ಕಾಯುತಿಹೆ ನಿನ್ನ ಬರುವಿಕೆ ತಂಪು ಗಾಳಿ ನೆರಳಲಿ ಆಗಲಿ ಕಾಲುದಾರಿಯ ಸ್ವಚ್ಚವಾಗಿಸಿ ಕಲ್ಲು ಮುಳ್ಳನು ದೂರ ಸರಿಸಿ ಸುಖ ಪಯಣ ಬಯಸುತಿಹೆ ನಿನ್ನ ಬಾಳಲಿ ... ಸಾಲು ಗಿಡಗಳ ಮರವಾಗಿಸಿ ಕಾಯುತಿಹೆ ನಿನ್ನ ಬರುವಿಕೆ ತಂಪು ಗಾಳಿ ನೆರಳಲಿ ಆಗಲಿ ಕೈ ತುಂಬಾ ಹೂ ಗುಚ್ಛ ಅಂಗಳದಿ ರಂಗೋಲಿ ಎದೆ ತುಂಬಾ ಪ್ರೀತಿ ಭರಿಸಿ ನಿನ್ನ ಸ್ವಾಗತಿಸುವೆ ... ಸಾಲು ಗಿಡಗಳ ಮರವಾಗಿಸಿ ಕಾಯುತಿಹೆ ನಿನ್ನ ಬರುವಿಕೆ ತಂಪು ಗಾಳಿ ನೆರಳಲಿ ಆಗಲಿ ಮನೆತುಂಬಾ ಸಂತೋಷದ ಕಾಲ್ಗೆಜ್ಜೆ ದನಿಯ ಪಸರಿಸಿ ಎನ್ನ ಒಡಲಲಿ ಸೇರು ಬಾ ಓ ನನ್ನ ಗೆಳತಿ ... ಸಾಲು ಗಿಡಗಳ ಮರವಾಗಿಸಿ ಕಾಯುತಿಹೆ ನಿನ್ನ ಬರುವಿಕೆ ತಂಪು ಗಾಳಿ ನೆರಳಲಿ ಆಗಲಿ ಹಾಯಾಗಿರಲಿ ನಮ್ಮ ಬದುಕು ನನಸಾಗಲಿ ಕನಸುಗಳು ಸೇರಿ ನಡೆಯೋಣ ಬಾಳರಥದ ದಾರಿಯಲಿ ಸಾಲು ಗಿಡಗಳ ಮರವಾಗಿಸಿ ಕಾಯುತಿಹೆ ನಿನ್ನ ಬರುವಿಕೆ ತಂಪು ಗಾಳಿ ನೆರಳಲಿ ಆಗಲಿ - ಅಂಜಾರು ಮಾಧವ ನಾಯ್ಕ್