Posts

Showing posts from January, 2014

ಫೇಸ್ಬುಕು

ಅದೊಂದಿತ್ತು ಕಾಲ ಅಮ್ಮ ಹೇಳುತ್ತಿದ್ದರು ಅಟೋಟವು ಮುಗಿದರೆ ಹಿಡಿದುಕೊ ಬೂಕು  ಕೇಳಿಯೂ ಕಿವಿಕೊಡದೆ ಆಡುತ್ತಿದ್ದರು  ಅಮ್ಮಿ  ಚುಮ್ಮಿ  ಟಿಂಕು ಮತ್ತು ಎಂಕು ! ಆದರಿಂದು  ಎಲ್ಲರೂ ಮುಗಿಬೀಳುವರು  ಮಾಯಾಜಾಲವಿದು ಹೊಸಯುಗದ ಫೇಸ್ಬುಕು  ಯಾರ‍್ಯಾರದೋ ಪೋಸ್ಟು, ಕಮೆಂಟು , ಲೈಕು , ಶೇರುಗಳು  ಅರ್ಥವಾಗದೆನಗೆ ಯುವಜನಗೇಕಿದೆ ಇದರ ವಿಪರೀತ ಸೋಂಕು ?                                                         - ಅಂಜಾರು ಮಾಧವ ನಾಯ್ಕ್ 

ಪಡೆದು ಬಂದ ಭಾಗ್ಯ ನಿನ್ನ ಜೋತೆಯಲಿರುವಾಗ .......

ಹಲವು ಜಾತಿ ಮತ ಪಕ್ಷಗಳು , ಒಂಥರಾ ವಿಚಿತ್ರ ಸತ್ಯಾಂಶ ತಿಳಿದೂ ಕುರುಡರಾಗಿ ಬಾಳುವರು , ಇದು ಸತ್ಯ...! ತನ್ನನ್ನು ಹೊಗಳಿಕೊಲ್ಳುವರು ಮೇಧಾವಿ , ಮೇಲ್ಜಾತಿಯೆಂದು ಪರರನು ತೆಗಳುವರು  ಹುಂಬನು , ಕೀಳ್ಜಾತಿಯೆಂದು ಸತ್ಯ ನಿತ್ಯ ಬದುಕಲಿ ಎದುರಾಗದು ಅಂತರ ಕೆಚ್ಚೆದೆಯಿಂದ ಬಾಳುವೆ ನೀ.., ಪ್ರೀತಿ ಹೃದಯದ ಸಂಸಾರ ತಿಳಿದುಕೋ ತಾ ಮೊದಲು ಮನುಜ ಜನ್ಮವು ನಶ್ವರ ಒಳಿತಾಗಿ ಬದುಕಲು ಕಲಿ , ಹುಟ್ಟಿ ಬಂದ ಪುಣ್ಯಕ್ಕೆ ..! ಎಲ್ಲಾ ಜಂಜಾಟಗಳ ತಾ  ಸೃಷ್ಟಿಸಿಕೊಂಡಿರುವೆ ಅತಿರೇಕಕೆ ಬಲಿಯಾಗದಿರು ದ್ರೋಹಿಸದಿರು ಆತ್ಮಕೆ ಪಡೆದು ಬಂದ ಭಾಗ್ಯ ನಿನ್ನ ಜೋತೆಯಲಿರುವಾಗ ವ್ಯರ್ಥ ಪ್ರಯತ್ನಕೆ ಕೈ ಹಾಕದಿರು ಒಳ್ಳೆ ಬುದ್ದಿ ಬಂದಾಗ                                  - ಅಂಜಾರು ಮಾಧವ ನಾಯ್ಕ್

ಹೊಸ ಹುಮ್ಮಸ್ಸು..........

ಪಡುತಿಹೆನು ಜಿಗುಪ್ಸೆ ಹರಸಾಹಸದ ಬದುಕಲಿ ವ್ಯರ್ಥವೆನಿಸುವುದು ಜೀವನ ಕಲ್ಲು ಮುಳ್ಳಿನ ಹಾದಿಯಲಿ ಅದೇನೋ ಹಂಬಲ ಎನಗೆ ನಾಳೆಗಾಗಿ ಬದುಕುವ ಛಲ ನೀಡುತ್ತಿದೆ ಹೊಸ ಚಿಗುರು ಸಹನೆಯೆಂಬ ಪ್ರತಿಫ಼ಲ ಹಸನಾಗಿರಲಿ ಪ್ರತಿಕ್ಷಣ , ತುಂಬಿ ಹರಿಯಲಿ ಉಲ್ಲಾಸವು ಮುಳುಗದಿರಲಿ ಎಂದಿಗೂ ವಿಶ್ವಾಸದ ಬಾಳ ನೌಕೆಯು ಕೆಲಬಾರಿ ಮನಮುದುಡುವುದು , ಸಾಕಾಯಿತೆನಗೆ ಬದುಕೆಂದು ಆಶಿಸುವೆ ಬರುತಿರಲಿ, ಹೊಸ ಹುಮ್ಮಸ್ಸು  ಪುಟಿಯಲೆಂದು                                                - ಅಂಜಾರು ಮಾಧವ ನಾಯ್ಕ್ .