Posts

Showing posts from February, 2024

ಹಾಡುವೆಯ

ನೀ ನಡೆವ ದಾರಿಯೊಳು ಹೂವ ಹಾಸಿ ಕಾಯುವೆನು ನೀನಾಡುವ ಮಾತುಗಳ ಮನಸಾರೆ ಕೇಳುವೆನು, ಅದೇನು ಉಲ್ಲಾಸ ನಿನ್ನ ದನಿಯ ಕೇಳುತಲೆ ಕೋಗಿಲೆಯೂ ನಾಚಲು  ಹಾಡುವೆಯ ನನಗಾಗಿ! ಝರಿಯೊಳು ಹರಿಯುವ  ತಣ್ಣೀರ ಸಿಂಚನವು ಮೈಯಲ್ಲ ಬೀಳುತ್ತಲೆ ಆಗುವ ಅನುಭವವು ಸರಿಯಾಗಿ ಹೇಳುತಿದೆ  ನಿನ್ನ ಜೊತೆಯ ಜೀವನವು  ನನಗೆ ಸಿಕ್ಕ ಭಾಗ್ಯವು      - ಮಾಧವ. ಕೆ. ಅಂಜಾರು.

ಜೀವಿಸಲೇ ಬೇಡ

ಬೊನಿನೊಳಗಿನ  ಹುಲಿಯಾಗ ಬೇಡ ಪಂಜರದೊಳಗಿನ ಗಿಳಿಯಾಗಬೇಡ ಬೋನಿನೊಳಗಿನ ಇಲಿಯಾಗ ಬೇಡ ಬಲೆಯೊಳಗೆ ಸಿಗುವ ಮೀನಾಗಬೇಡ, ರೆಕ್ಕೆ ಇಲ್ಲದ ಹಕ್ಕಿಯಾಗಬೇಡ ನಾವಿಕನಿಲ್ಲದ ದೋಣಿಯಾಗ ಬೇಡ ವಿವೇಕವಿಲ್ಲದ ಮನುಜನಾಗಬೇಡ  ನಿನ್ನನ್ನು ಮರೆತು  ಜೀವಿಸಲೇ ಬೇಡ!        -ಮಾಧವ ಅಂಜಾರು