ಲೇಖನ -84, ಹಸಿರು - ಉಸಿರು ನಿಲ್ಲಿಸಿದ ನೇತ್ರಾವತಿ ನದಿ
( ಲೇಖನ -84, ಹಸಿರು - ಉಸಿರು ನಿಲ್ಲಿಸಿದ ನೇತ್ರಾವತಿ ನದಿ ) ಕಾಡನ್ನು ಕಡಿದು ನದಿಯ ದಿಕ್ಕು ತಪ್ಪಿಸಿ ನೀರಿನ ಅಭಾವವನ್ನೇ ಹೆಚ್ಚಿಸಿದ ಯೋಜನೆ..,! ಪಶ್ಚಿಮ ಘಟ್ಟವನ್ನು ಮುಟ್ಟಬೇಡಿ, ಮುಂದಿನ ದಿನಗಳಲ್ಲಿ ಬಹಳಷ್ಟು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ, ನೀರು, ಹಸಿರು, ಉಸಿರು ಎಲ್ಲವದಕ್ಕೂ ಪರಿತಪಿಸುವ ಕಾಲ ಬರುತ್ತದೆ ಎಂಬ ಮಾತನ್ನು ಸಾವಿರಾರು ಬಾರಿ ಉತ್ತಮ ತಜ್ಞರು ಹೇಳಿಕೆಗಳನ್ನು ಕೊಟ್ಟಿದ್ದರೂ ಯಾವುದನ್ನೂ ಲೆಕ್ಕಿಸದೇ ಹಣವೆಂಬ ಆಸೆಗೆ ಒಳಗಾಗಿ ಪ್ರಕೃತಿಯನ್ನು ನಾಶ ಮಾಡಿ ಸಾವಿರಾರು ಕೋಟಿಯ ಯೋಜನೆಯನ್ನು ತಂದು ವನ,ಪ್ರಾಣಿ, ಪಕ್ಷಿ ಸಂಕುಲವನ್ನೇ ನಾಶ ಮಾಡಿ ತನ್ನ ತಿಜೋರಿಯನ್ನು ತುಂಬಿಸಿ ಬಾಯಿಗೂ ಗುದಕ್ಕೂ ಹಣದ ಕಂತೆ ತುರುಕಿಸಿ ಕುಳಿತುಕೊಂಡು ಎಸಿ ಕಾರಿನಲ್ಲಿ ತಿರುಗುತ್ತಿರುವ ಅಧಿಕಾರಿಗಳ ಘನ ಕಾರ್ಯಕ್ಕೆ ಏನೂ ತಪ್ಪು ಮಾಡದ ಸಾಮಾನ್ಯ ಪ್ರಜೆಗಳು, ಪ್ರಾಣಿಗಳು, ಪಕ್ಷಿ ಸಂಕುಲ, ಪ್ರಕೃತಿ ಎಲ್ಲವು ನಾಶದ ಹಾದಿ ಹಿಡಿಯುತ್ತಿದೆ. ಅಭಿವೃದ್ಧಿಯ ಹರಿಕಾರ, ಧರ್ಮ ರಕ್ಷಕ, ನಮ್ಮದೇ ಪಕ್ಷ ಗೆಲ್ಲಲಿ ಹೇಳುವ ಕಾರ್ಯಕರ್ತರು,ಅಧಿಕಾರಿಗಳು, ಅನ್ಪಡ್ ನೇತಾರರು ದಿನಬೆಳಗಾದರೆ ಬಿಳಿ ಅಂಗಿಯ ಮೊರೆ ಹೋಗಿ ಅಲ್ಲಲ್ಲಿ ಬಿಟ್ಟಿಪತ್ರ ಹಂಚುವಾಗ ಭೂಮಿಯ ಚಿತ್ರಣವನ್ನೇ ಬದಲಾಯಿಸುವ ಜನಪ್ರತಿನಿಧಿಗಳ ಜೊತೆಗೆ ಸೇರಿ ನಡೆಸುವ ಬಲಾತ್ಕಾರದ ಯೋಜನೆಗೆ ತುಪ್ಪ ಸುರಿ...