(ಲೇಖನ -75)ಕಲಾ ಮಾಣಿಕ್ಯ ಶ್ರೀ ಸುರೇಶ್ ಸಾಲ್ಯಾನ್ ತುಳುಕೂಟವೆಂಬ ಕಲಾ ಸಾಗರದಲ್ಲಿ
ಕಲಾ ಮಾಣಿಕ್ಯ ಶ್ರೀ ಸುರೇಶ್ ಸಾಲ್ಯಾನ್ ತುಳುಕೂಟವೆಂಬ ಕಲಾ ಸಾಗರದಲ್ಲಿ , ತುಳು ನೌಕೆಯ ನಾವಿಕ. ತುಳುವರಿಂದ, ತುಳುವರಿಗಾಗಿ, ತುಳು ಭಾಷೆ ಸಂಸ್ಕೃತಿಯನ್ನು ಪೂಜಿಸುತ್ತಾ, ಬೆಳೆಸುತ್ತಾ, ಪ್ರಪಂಚದ ಮೂಲೆ ಮೂಲೆಗೂ ತುಳುವರ ಸಂಸ್ಕೃತಿ ಮತ್ತು ಭಾರತ ದೇಶದ ಸಂಸ್ಕೃತಿಯನ್ನು ದೃಶ್ಯ ರೂಪದಲ್ಲಿ ಸಾದರಪಡಿಸಿ ಮಕ್ಕಳಿಂದ ಹಿರಿಯರವರೆಗಿನ ಜನರ ಮೆಚ್ಚುಗೆಗೆ ಪಾತ್ರರಾಗಿ ಮತ್ತೊಮ್ಮೆ ತಮ್ಮ ಕೀರ್ತಿ ಪತಾಕೆಯನ್ನು ಮರಳುಗಾಡಿನ ಊರಿನಲ್ಲಿ ಓಯಸಿಸ್ ನಂತೆ ಭಾರತದ ಪ್ರತಿ ರಾಜ್ಯದ, ಪ್ರತಿ ಜಿಲ್ಲೆಯ ಸಂಸ್ಕೃತಿಯನ್ನು ಅದ್ದೂರಿಯಾಗಿ ಪ್ರದರ್ಶನ ಮಾಡಿ ಸಾವಿರಾರು ಜನರ ಮೆಚ್ಚುಗೆ ಪಾತ್ರರಾಗಿದ್ದಾರೆ. ಕಲೆ ಎಂಬುದು ದೇವರ ಆಶೀರ್ವಾದ, ಅದನ್ನು ಒಳ್ಳೆಯ ರೀತಿಯಲ್ಲಿ ಉಪಯೋಗಿಸಿದಾಗ ಯಶಸ್ವಿ ಎಂಬುದು ಕಟ್ಟಿಟ್ಟ ಬುತ್ತಿ . ತುಳುಕುಟ ಎಂಬ ಸಂಘಟನೆಯಲ್ಲಿ ನಾ ಕಂಡಂತೆ ಮಾನ್ಯ ಸುರೇಶ್ ಸಾಲಿಯಾನ್ ರವರು ಸುಮಾರು 25 ವರ್ಷಗಳಿಂದ ತನ್ನ ಕಲಾ ಸೇವೆಯನ್ನು ನಿಸ್ವಾರ್ಥವಾಗಿ ಮಾಡುತ್ತಾ ಬಂದಿರುತ್ತಾರೆ. ಅವರ ಚಿಂತನೆ, ಅವರಲ್ಲಿರುವ ಭಾವನೆ, ಅವರಲ್ಲಿರುವ ವಿನಯತೆ, ಅವರಲ್ಲಿರುವ ಸೌಜನ್ಯತೆ ಇಷ್ಟಪಡದವರು ಇಷ್ಟಪಡುವಂತೆ ಇರುತ್ತದೆ ಹಾಗೂ ಯಾವುದೇ ಪ್ರಶಸ್ತಿ ಬಯಸದೆ ಆತ್ಮಾರ್ಥವಾಗಿ ಮಾಡುತ್ತಿರುವ ಕೆಲಸಗಳು ನಡೆಯುತ್ತಲೇ ಇದೆ. ಸುರೇಶ್ ರವರೇ ನಮಗೆ ಈ ವರ್ಷ ನಿಮ್ಮಿಂದ ಹೊಸ ಕಾರ್ಯಕ್ರಮಗಳು ಬೇಕು ...