ಲೇಖನ (58) ವ್ಯವಸ್ಥೆಗಳನ್ನೇ ಬುಡಮೇಲು ಮಾಡುತ್ತಿರುವ ಭ್ರಷ್ಟ ರಾಜಕಾರಣ ಮತ್ತು ದುಷ್ಟ ರಾಜಕಾರಣ. ಯಾರೇನು ಉಳಿದರೇನು ಅಳಿದರೇನು ನನ್ನ ದ್ಯೇಯ ಕೋಟಿಗಟ್ಟಲೆ ಹಣಮಾಡುವುದು.
ಲೇಖನ (58) ವ್ಯವಸ್ಥೆಗಳನ್ನೇ ಬುಡಮೇಲು ಮಾಡುತ್ತಿರುವ ಭ್ರಷ್ಟ ರಾಜಕಾರಣ ಮತ್ತು ದುಷ್ಟ ರಾಜಕಾರಣ. ಯಾರೇನು ಉಳಿದರೇನು ಅಳಿದರೇನು ನನ್ನ ದ್ಯೇಯ ಕೋಟಿಗಟ್ಟಲೆ ಹಣಮಾಡುವುದು, ನಾವು ಜನರ ಉದ್ಧಾರಕ್ಕೆ ಇಳಿದರೆ ನಾಳೆ ಬದುಕಲು ಕಷ್ಟ ಪಡಬೇಕಾದೀತು, ಸಿಕ್ಕಿದ ಅವಕಾಶಗಳನ್ನು ಉಪಯೋಗಿಸಿ ಎಷ್ಟು ಹಣಗಳಿಸಲು ಸಾಧ್ಯವೋ ಅಷ್ಟು ಹಣವನ್ನು ಮಾಡಿಬಿಡಬೇಕು, ಜನರನ್ನು ಸರಿಮಾಡಲು ಯಾರಿಂದಲೂ ಸಾಧ್ಯವಿಲ್ಲ, ಅದು ಮಾಡುವುದು ಕೂಡ ಸರಿಯಲ್ಲ, ಎಷ್ಟು ಸೇವೆ ಮಾಡಿದರೂ ನಮಗೇನು ಲಾಭ? ಸರ್ಕಾರದ ಹಣ ನಾವೇನು ಜನರಿಂದ ನೇರವಾಗಿ ಪಡೆಯುತ್ತಿಲ್ಲ, 10 ಕೋಟಿ ಅನುದಾನವನ್ನು ಬಿಡುಗಡೆಗೊಳಿಸಿ ಲೆಕ್ಕ ಪತ್ರಗಳನ್ನು ಸರಿಯಾಗಿ ಜೋಡಿಸಿ ಒಂದಷ್ಟು ದಾಖಲೆಗಳನ್ನು ಮಾಡಿ ಎಲ್ಲಾ ಕೆಲಸಗಳು ಸರಿಯಾಗಿ ನಡೆದುಹೋಗಿವೆ, ಸರ್ಕಾರದ ಬೊಕ್ಕಸಕ್ಕೆ ಪಂಗನಾಮ ಹಾಕುವ ಪ್ರಸಂಗಗಳು ನಡೆದಿರಬಹುದು ಅಲ್ಲವೇ! ಇಲ್ಲಿ ಸಾಮಾನ್ಯ ಜನರ ಪಾಲೇನು? ಎಲ್ಲರೂ ಅವರವರ ಕೆಲಸಗಳಲ್ಲಿ ಮಗ್ನ, ರಾಜಕೀಯ ವ್ಯಕ್ತಿಗಳ ಸುದ್ದಿಗೆ ಹೋಗಬಾರದು ಅವರು ನಮ್ಮನ್ನು ಏನಾದರು ಮಾಡಿದರೆ? ನಾಳೆ ನನ್ನ ಹೆಂಡತಿ ಮಕ್ಕಳಿಗೆ ಯಾರು ಗತಿ? ಅವರು ಏನಾದರು ಮಾಡಿ ಸಾಯಲಿ, ನಮ್ಮ ಕೆಲಸವಾಗಬೇಕಾದ್ರೆ ನಾವು ಕೊಟ್ಟು ಮಾಡಿ ಬಿಡುವ, ಅಥವಾ ನಮ್ಮ ಪರಿಚಯದ ಜನ ಶಾಸಕರು ಅವರಲ್ಲಿ ಹೇಳಿದರೆ ಮಾಡಿಕೊಡುತ್ತಾರೆ, ಅವರುಗಳು ಮಾಡಲಾಗಲಿಲ್ಲವೆಂದರೆ ನಾವು ನಾಳೆ ಓಟು ಹಾಕುವುದು ಬೇಡ, ಮತ್ತೆ ಕಲಿಸೋಣ ಅವರಿಗೆ ಇಂತಹ ಚಿಂತನೆಗಳ...