(ಲೇಖನ -18)ವಿಷವಾಗುತ್ತಿದೆ ಅತಿಯಾಗಿ ಸೇವಿಸಿದ ಅಮೃತ.....!
ವಿಷವಾಗುತ್ತಿದೆ ಅತಿಯಾಗಿ ಸೇವಿಸಿದ ಅಮೃತ.....! ಪ್ರತಿಯೊಬ್ಬರ ಜೀವನವು, ಸುಖ ಶಾಂತಿ ನೆಮ್ಮದಿಯಿಂದಿರಬೇಕೆನ್ನುವ ಆಸೆಆಕಾಂಕ್ಷೆಗಳು ಸಹಜವಾಗಿರುತ್ತದೆ. ಅದಕ್ಕಾಗಿ ಹುಟ್ಟಿದಂದಿನಿಂದ ಬೆಳೆದು ದೊಡ್ಡವರಾಗುವವರೆಗೆ, ಸಂಪ್ರದಾಯ, ಸಂಸ್ಕಾರ, ಆಚಾರ, ವಿಚಾರಗಳನ್ನು ಕ್ರಮಬದ್ಧವಾಗಿ ಪಾಲಿಸಲು ಧರ್ಮಶಾಲೆಗಳು, ವಿದ್ಯಾಮಂದಿರ, ಕಾಲೇಜು, ಮತ್ತಿತರ ವ್ಯವಸ್ಥೆ ಮನುಜರು ಮಾಡಿಕೊಂಡಿರುತ್ತಾರೆ. ವ್ಯವಸ್ಥೆಯನ್ನು ಮಾಡಿಕೊಂಡು ಒಂದಷ್ಟು ಜನರು ಯಾವುದೇ ತೊಂದರೆಗಳುoಟಾಗದಂತೆ ನೋಡಿಕೊಳ್ಳುತ್ತಾ ಎಲ್ಲವನ್ನೂ ಸರಿದೂಗಿಸಿಕೊಂಡು ಜೀವನ ಮಾಡಿ ಬದುಕಿಗೊಂದು ಅರ್ಥವನ್ನು ಸೃಷ್ಟಿ ಮಾಡುತ್ತಾರೆ. ಮನೆಯಿಂದ ಕಲಿಯುವ ಪಾಠ, ಶಾಲೆ ಕಾಲೇಜುಗಳಿಂದ ಕಲಿಯುವ ಪಾಠ, ಆ ವ್ಯಕ್ತಿಯಲ್ಲಿ ಅಡಗಿರುವ ಸಂಪ್ರದಾಯ ಮತ್ತು ಗೌರವವನ್ನು ತೋರಿಸುತ್ತದೆ. ಆ ವ್ಯಕ್ತಿಯ ವ್ಯಕ್ತಿತ್ವದ ಬಗ್ಗೆ ತಿಳಿಯಲು ಸಾಧ್ಯವಾಗುತ್ತದೆ. ಏನಿದ್ದರೂ ಶಾಲೆ, ಕಾಲೇಜು, ಮನೆ ಇವೆಲ್ಲವೂ ನಮ್ಮ ಭವಿಷ್ಯದ ಅಡಿಗಲ್ಲಾಗಿರುತ್ತದೆ. ಇನ್ನೊಂದು ಅರ್ಥದಲ್ಲಿ ನಮ್ಮ ಮನೆಕಟ್ಟುವ ಪಂಚಾಂಗಕ್ಕೆ ಹಾಕುತ್ತಿರುವ ಗಟ್ಟಿಯಾದ ಅಡಿಪಾಯವಾಗಿರುತ್ತದೆ. ನಾವು ನಮ್ಮ ಸಮಾಜದಲ್ಲಿ ಎಷ್ಟು ಪ್ರಮಾಣದಲ್ಲಿ ಒಳಿತನ್ನು ಬಯಸುತ್ತೇವೆ, ಎಷ್ಟು ಕೆಡುಕನ್ನು ಬಯಸುತ್ತೇವೆ ಎಂಬುದು ತಿಳಿಯುತ್ತದೆ. ನಾವು ನಮ್ಮ ಜೀವನದಲ್ಲಿ ಯಾವುದು ಅತಿಯಾಗಿ ಹಚ್ಚಿಕೊಳ್ಳುತ್...