(ಲೇಖನ =21)ಒಳಗಿನ ಗುಟ್ಟು ಶಿವನೇ ಬಲ್ಲ.......
ಒಳಗಿನ ಗುಟ್ಟು ಶಿವನೇ ಬಲ್ಲ.... ಈ ಮೇಲಿನ ನುಡಿಮಾತು, ನೀವೆಲ್ಲರೂ ಈ ಹಿಂದೆ ಕೇಳಿರಬಹುದು, ಸಾಮಾನ್ಯವಾಗಿ ದೀರ್ಘಕಾಲದ ಮಾತುಗಳನ್ನಾಡಿ ಕೊನೆಗೆ ಒಳಗಿನ ಗುಟ್ಟು ಶಿವನೇ ಬಲ್ಲ ಎಂದು ಪೂರ್ಣವಿರಾಮ ಹಾಕುವ ಸಂದರ್ಭ, ಅಥವಾ ಸದಾ ಅನ್ಯರ ಬಗ್ಗೆ ಯೋಚಿಸುತ್ತಾ ವ್ಯಂಗ್ಯ ವಾಡಲು ಉಪಯೋಗಿಸುವ ಈ ವಾಕ್ಯ ಬಹು ಅರ್ಥವನ್ನು ಹೊಂದಿದೆ. ಈ ಪದವು ನಿಮ್ಮ ನಿಮ್ಮ ಯೋಚನೆಗಳಿಗೆ ಅನುಸಾರವಾಗಿ ಒಂದು ವ್ಯಕ್ತಿಯ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಸೂಚಿಸುವ ಮಾತಾಗಿ ಕೂಡ ಹೊರಹೊಮ್ಮಬಹುದು. ನಮ್ಮ ಜೀವನದಲ್ಲಿ ಎಲ್ಲವೂ ಇದ್ದು ಏನೂ ಇಲ್ಲದಂತೆ ಮರುಗುತ್ತಲೇ ಇರುವ ನಾವು , ಜೀವನಪರ್ಯಂತ ಆಸೆಗಳ ನಡುವೆ ಸಿಕ್ಕಿಕೊಂಡು ಇರುವುದನ್ನು ಅನುಭವಿಸದೆ ಇಲ್ಲದ್ದನ್ನು ಆಶಿಸುತ್ತಾ ಕೊನೆಯುಸಿರೆಳೆಯುವ ಅಲ್ಪ ಜೀವಿಗಳು. ನಮ್ಮ ಚಿಂತನೆಗಳು ನಮ್ಮನ್ನು ಸರಿದಾರಿಯಲ್ಲಿ ಅಥವಾ ಅಡ್ಡ ದಾರಿಯಲ್ಲಿ ಕೊಂಡು ಹೋಗಬಹುದು. ಅವರಿಗಿರುವ ಐಶ್ವರ್ಯ ನಮಗಿಲ್ಲ ವೆಂದು ಕೊರಗುವುದು, ಅವರಿಗಿರುವ ಮನೆ ನಮ್ಮಲ್ಲಿ ಇಲ್ಲವೆಂದು ಕೊರಗುವುದು, ಅವರ ಮನೆಯ ಸಂತೋಷ ನಮ್ಮ ಮನೆಯಲ್ಲಿ ಇಲ್ಲವೆಂದು ಕೊರಗುವುದು, ಅವರು ಮಾಡುತ್ತಿರುವ ಕೆಲಸ ನನ್ನಲ್ಲಿ ಆಗುತ್ತಿಲ್ಲವೆಂದು ಕೊರಗುವುದು, ದೇಹದ ಪ್ರತಿಯೊಂದು ಭಾಗಗಳು ಸರಿಯಾಗಿ ಕೆಲಸ ಮಾಡುತ್ತಿದ್ದಾಗಲೇ ಇಲ್ಲ ...