Posts

Showing posts from November, 2025

ಬಂಟಾಯನ 2025

Image
ಬಂಟಾಯನ 2025  ಬಂಟೆರೆನ ಆಯನ = ಬಂಟಾಯನ, ಇದರ ಕನ್ನಡ ಅರ್ಥ ಬಂಟರ ಜಾತ್ರೆ, ತಾರೀಕು  21-11-2025 ರಂದು, ಕುವೈಟ್ ಅಬ್ಬಾಸಿಯದಲ್ಲಿ ಬಹಳ ಅದ್ಧುರಿಯಾಗಿ ನಡೆದ ಬಂಟಾಯನ ಹೊಸ ಮೆರುಗನ್ನು ಪಡೆದುಕೊಂಡಿತು. ಹೌದು, ಕುವೈಟ್ ನಲ್ಲಿ ಹಲವಾರು ಸಂಘಟನೆಗಳಂತೆ ಭಂಟರ ಕೂಟವೂ ಒಂದು, ತನ್ನ ಸಮಾಜದ ಏಳಿಗೆಗೆ ತನ್ನದೇ ಶೈಲಿಯಲ್ಲಿ ಪ್ರೋತ್ಸಾಹ, ಗೌರವ, ವೇದಿಕೆ ಶೃಷ್ಟಿ ಮಾಡಿ ಸಮಾಜದಲ್ಲಿ ಇನ್ನಷ್ಟು ಹೊಸ ಮುಖವನ್ನು ಪರಿಚಯ ಮಾಡುತ್ತ, ಬಂಟರ ಅಡಿಪಾಯವನ್ನು ಗಟ್ಟಿಗೊಳಿಸಿ ಇನ್ನುಳಿದವರಿಗೂ ಮಾದರಿಯಾಗಿ ಇರುತ್ತಿರುವುದು ಇತಿಹಾಸದಿಂದಲೇ ತಿಳಿದಿರುತ್ತೇವೆ. ಅದರಂತೆ ನಿನ್ನೆ ನಡೆದ ಬಂಟಾಯನ ಬಹಳಷ್ಟು ಅಚ್ಚುಕಟ್ಟಾಗಿ ನಡೆಯಿತು ಎಲ್ಲಾ ಪ್ರೇಕ್ಷಕರ ಮನಸೆಳೆಯಿತು, ಹೌದು ನಾವು ಬಂಟರು ಯಾವುದಕ್ಕೂ ಕಮ್ಮಿ ಇಲ್ಲ ಬಯಸಿದರೆ ಕನಸನ್ನು ನನಸು ಮಾಡುತ್ತೇವೆ ಎಂಬ ಸೂಚನೆಯನ್ನು ನೀಡಿದಂತಾಗಿದೆ.      ಸಾಮಾನ್ಯವಾಗಿ ಕುವೈತ್ ನ ಹೆಚ್ಚಿನ ಸಂಘಟನೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಪಳಗಿರುವ ಬಂಟರು, ತನ್ನ ಸಮಾಜದ ಹೆಗ್ಗಳಿಕೆಯನ್ನು ಹೆಚ್ಚಿಸಲು ಪ್ರತ್ಯೇಕ ವೇದಿಕೆಯನ್ನು ಮಾಡಿ, ಸಮಾಜ ಬಾಂಧವರನ್ನು ಕರೆದು ಗೌರವ ನೀಡಿ ಸನ್ಮಾನ ಮಾಡಿ ಮುಂದಿನ ಪೀಳಿಗೆಗೂ ಮಾದರಿಯಾಗುತ್ತಿದ್ದಾರೆ. ಇಲ್ಲಿ ಎರಡು ವರುಷದ ಮಗುವಿನಿಂದ ಹಿಡಿದು ಹಿರಿಯ ವಯಸ್ಕರವರೆಗೂ ವೇದಿಕೆಯಲ್ಲಿ ತನ್ನ ಚಾಕಚಕ್ಯತೆಯನ್ನು ತೋರಿಸಿ ನೆರೆದವರ ಮೆಚ್ಚುಗೆಗೆ ಪಾತ್ರರಾಗಿರುತ್ತಾರೆ...