(ಲೇಖನ -129) ನ್ಯಾಯ ಮತ್ತು ಅನ್ಯಾಯದ ಹೋರಾಟ

ಬದುಕೊಂದು ಹೋರಾಟವೇ ಆದರೆ ಇದರ ನಡುವೆ ನಮ್ಮ ಜೀವನದಲ್ಲಿ ಹಲವು ಸಂಧರ್ಭಗಳು ನ್ಯಾಯಕ್ಕಾಗಿ ಹೋರಾಟ, ಜೀವನಕ್ಕಾಗಿ ಹೋರಾಟ, ಯಶಸ್ಸಿಗಾಗಿ ಹೋರಾಟ ಮತ್ತು ಕೆಲವರು ಹೋರಾಡುವವರನ್ನು ಧಮನಿಸಲು ಮಾಡುವ ಕಪಟ ಹೋರಾಟಗಳು ನಡೆಯುತ್ತಿರುತ್ತವೆ. ಬ್ರಿಟಿಷರು ನಮ್ಮ ದೇಶವನ್ನು ಆಳುತಿದ್ದ ಸಂಧರ್ಭದಲ್ಲಿ ಸ್ವಾತಂತ್ರ್ಯ ಕ್ಕಾಗಿ ಹೋರಾಟ ಮಾಡಿ ತಮ್ಮ ಜೀವನವನ್ನು/ ಜೀವವನ್ನು ಮುಡಿಪಾಗಿಸಿ ಇಂದಿಗೂ ನಾವೆಲ್ಲರೂ ಅವರನ್ನು ಸ್ಮರಿಸುತ್ತ ಸ್ವಾತಂತ್ರ್ಯ ಆಚರಿಸುತ್ತೇವೆ, ಸಿಹಿ ತಿಂಡಿ ಹಂಚುತ್ತೇವೆ, ಒಂದಷ್ಟು ಭಾಷಣಗಳನ್ನು ಮಾಡುತ್ತೇವೆ, ಆದರೂ ಹೋರಾಟ ಮಾಡಿ ಮಡಿದ ಜನರನ್ನು ಬಿಡದೆ ಕೀಳು ರಾಜಕೀಯ ಕೂಡ ಮಾಡುತ್ತಿರುತ್ತೇವೆ. ಮತ್ತು ಪ್ರಸ್ತುತ ಸ್ಥಿತಿಗೆ ಅನುಸಾರವಾಗಿ ಬಾಯಿಗೆ ಬಂದ ಹಾಗೆ ಮಾತನಾಡುವ ಅನೇಕ ನಾಯಕರುಗಳನ್ನು ನಾವು ನೋಡುತ್ತಲೇ ಇದ್ದೇವೆ. ಹೋರಾಟದ ಹಾದಿಯಲ್ಲಿ ಒಂದಷ್ಟು ಜನರು ತನ್ನ ಜೇಬು ತುಂಬಿಸಿಕೊಳ್ಳಲು ಪ್ರಯತ್ನಿಸುತ್ತ ಕಣ್ಣೆದುರು ಸತ್ಯ ಕಾಣುತಿದ್ದರೂ ಸುಳ್ಳನ್ನು ಸೃಷ್ಟಿಮಾಡಿ ಹೋರಾಟದ ಚಿತ್ರಣವನ್ನು ಬದಲಿಸಲು ಪ್ರಯತ್ನಪಡುತ್ತಾರೆ. ಇಲ್ಲಿ ಅವರ ಸ್ವಾರ್ಥ, ಕೆಟ್ಟ ವರ್ತನೆ, ಅಹಂಕಾರ, ದಬ್ಬಾಳಿಕೆ, ಗೂಂಡಾಗಿರಿ, ಶೋಷಣೆ, ಗದರಿಸುವಿಕೆಯ ಅಂಶಗಳು ಮೇಲೆದ್ದು ಕಾಣುತ್ತವೆ. ಸಾಮಾನ್ಯವಾಗಿ, ಸುಳ್ಳನ್ನು ಶೋಷಣೆಯನ್ನು ಗದರಿಕೆ, ಮತ್ತು ಅನೇಕ ಮಾನಸಿಕ ಹಿ...