(ಲೇಖನ -125) ನಾನು ಕಂಡಂತೆ ಕುವೈತ್ ಕನ್ನಡ ಕೂಟ
(ಲೇಖನ -125) ನಾನು ಕಂಡಂತೆ ಕುವೈತ್ ಕನ್ನಡ ಕೂಟ, ಕನ್ನಡವೇ ಸತ್ಯ ಕನ್ನಡವೇ ನಿತ್ಯ, ಕುವೈತ್ ಕನ್ನಡಕೂಟದ ಎಲ್ಲಾ ಸದಸ್ಯರು ಕನ್ನಡ ಭಾಷೆಗೆ ಕೊಡುತ್ತಿರುವ ಗೌರವ,ಪ್ರೀತಿಯಂತೂ ನಿತ್ಯ ಸತ್ಯ. ಹಲವಾರು ವರುಷಗಳಿಂದ ಕನ್ನಡಾಂಬೆಯ ಸೇವೆಯನ್ನು ಮಾಡುತ್ತಿರುವ ಕನ್ನಡಿಗರ ಕೂಟ, ಕುವೈಟ್ ಕನ್ನಡ ಕೂಟ ವಿವಿಧ ರೀತಿಯಲ್ಲಿ ಪ್ರಾಮಾಣಿಕವಾಗಿ ಕೆಲಸವನ್ನು ಮಾಡುತ್ತಲೇ ಬರುತ್ತಿದೆ. ಈ ಸುಂದರವಾದ ಕೂಟ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮವನ್ನು ಮಾಡುತ್ತ ಹೆಸರುವಾಸಿಯಾಗುತ್ತಿದೆ. ನಾನು ಕಂಡಂತೆ ಕುವೈಟ್ ಕನ್ನಡ ಕೂಟ ಹೇಗೆ ಕೆಲಸ ಮಾಡುತ್ತಿದೆ? ಅದರ ಶಿಸ್ತು ನಿಯಮಗಳೇನು? ಯಾವ ಮನೋಭಾವದ ಸದಸ್ಯರು ಮತ್ತು ಆಡಳಿತ ಮಂಡಳಿ ಇದೆ? ಸಮಾಜಕ್ಕೇನು ಕೊಡುತ್ತಿದೆ, ಕನ್ನಡದ ಪೋಷಣೆಯೊಂದಿಗೆ ಭಾರತೀಯ ಸಂಸ್ಕೃತಿಯನ್ನು ಹೇಗೆ ಉಳಿಸಿ ಬೆಳೆಸುತ್ತಿದ್ದಾರೆ? ಆಟೋಟ ಮತ್ತು ವಿವಿಧ ಕಾರ್ಯಕ್ರಮ ಹೇಗೆಲ್ಲ ನಡೆಸುತ್ತಾರೆ? ಸಾಹಿತ್ಯ ಮತ್ತು ಸಂಗೀತ, ಕನ್ನಡ ಬರವಣಿಗೆ ಬಗ್ಗೆ ಎಷ್ಟು ಕಾಳಜಿಯಿಂದ ಕೆಲಸಮಾಡುತ್ತಾರೆ? ಎಂಬುವುದನ್ನು ಹಲವಾರು ವರುಷದಿಂದ ಕಣ್ಣಾರೆ ನೋಡುತ್ತಾ ಅದರೊಂದಿಗೆ ಸೇರಿ ಸಂತೋಷದ ಕಾರ್ಯಕ್ರಮಗಳನ್ನು ಅನುಭವಿಸಿಕೊಂಡು ಬರುತ್ತಿದ್ದೇನೆ. ಹೌದು, ಒಂದು ಸಂಘಟನೆ ನಡೆಸುವುದು ಸುಲಭವಾದ ಕೆಲಸವಲ್ಲ ಮತ್ತು ಸಂಘಟನೆಯನ್ನು ಉಳಿಸಿ ಬೆಳೆಸುವುದು ಕೂಡ ಅಷ್ಟೇ ಜವಾಬ್ದಾರಿಯಿಂದ ಕೂಡಿರುತ್ತದೆ. ...