Posts

Showing posts from July, 2023

(ಲೇಖನ -88)ಸಾಕ್ಷಾಧಾರಗಳಿಲ್ಲದೆ ಅದೆಷ್ಟೋ ಪ್ರಕರಣಗಳು ನ್ಯಾಯಾಲಯದಲ್ಲಿ ಖುಲಾಸೆಗೋಳ್ಳುತ್ತದೆ ಅಲ್ಲವೇ?

Image
 ಸಾಕ್ಷಾಧಾರಗಳಿಲ್ಲದೆ ಅದೆಷ್ಟೋ ಪ್ರಕರಣಗಳು ನ್ಯಾಯಾಲಯದಲ್ಲಿ  ಖುಲಾಸೆಗೋಳ್ಳುತ್ತದೆ ಅಲ್ಲವೇ?. ಆರೋಪಿಗಳು  ಕಾನೂನಿನ ಭಯವಿಲ್ಲದೆ  ಇನ್ನಷ್ಟು  ದುಷ್ಪೃತ್ಯಗಳನ್ನು  ಮಾಡುವ ಸಂದರ್ಭ ಬಹುತೇಕ ಹೆಚ್ಚು. ಆರೋಪಿಗಳಿಗೆ  ಬೆನ್ನೆಲುಬಾಗಾಗಿ ನಿಲ್ಲುವ  ಅದೆಷ್ಟೋ ಅವಿವೇಕಿಗಳು  ಸಹಾಯ ಮಾಡುತ್ತಾ  ಆರೋಪಿಗಳಿಗೆ ಇನ್ನಷ್ಟು  ಪ್ರೋತ್ಸಾಹ ಮಾಡಿ  ಸಮಾಜವನ್ನು ಕೆಡಿಸುವಲ್ಲಿ  ನಿಸ್ವಾರ್ಥ ಸೇವೆಯನ್ನು  ಮಾಡುತ್ತಾರೆ. ಯಾವುದೋ ಒಂದು ಕಾರಣಕ್ಕೆ ಆರೋಪಿಗಳನ್ನು ರಕ್ಷಿಸುವ ಕೆಲಸಗಳನ್ನು ಮಾಡುವ  ಕೆಲವು ಅಧಿಕಾರಿಗಳು, ಜನಸೇವಕರು, ಧರ್ಮಸೇವಕರು, ಮತಾಂಧರು, ತನಗೆ ಲಾಭವಿದ್ದಲ್ಲಿ ಏನು ಮಾಡಲೂ ಬಯಸುವ ಇಂಥವರ  ಸಂಖ್ಯೆ  ಹೆಚ್ಚಾಗುತ್ತಲೇ ಅಮಾಯಕರು  ತನ್ನ ಜೀವನವನ್ನು  ಮಾಡಬಾರದ ತಪ್ಪಿಗಾಗಿ  ಕೋರ್ಟು ಕಚೇರಿಯಲ್ಲಿ  ಅಲೆಯುವ  ಪ್ರಕರಣಗಳು  ಅಲ್ಲಲ್ಲಿ  ನಡೆಯುತ್ತಲೇ ಇದೆ. ಯಾವುದೇ ಪ್ರಕರಣವಾಗಲಿ  ನ್ಯಾಯಾಲಯಕ್ಕೆ ಸಾಕ್ಷಿ, ಪುರಾವೆಗಳ ಅವಶ್ಯಕತೆ ಇದೆ ಎಂದು  ನಮ್ಮ ಕಾನೂನು  ಹೇಳುತ್ತದೆ. ಆದರೆ ಸಾಕ್ಷಿಗಳು  ಇದ್ದರೂ ಕೂಡ  ಸರಿಯಾದ , ಸಮರ್ಪಕವಾದ  ಸಾಕ್ಷಗಳು  ಇಲ್ಲವೆಂದು  ಹಳ್ಳ ಹಿಡಿದು ಹೋಗುವ  ಉದಾರಣೆಗಳು  ಸಾಕಷ್ಟು ನಮ್ಮ ಕಣ್ಣ ಮುಂದೆ ಇರಬಹುದು. ಇಂತಹ ಪ್ರಕರಣಗಳಲ್ಲಿ ಹೆಚ್ಚಾಗಿ ಕಾನೂನಿನ ಲೋಪದೋಷಗಳನ್ನು  ಅರಿತಿರುವ  ನ್ಯಾಯವಾದಿಗಳು  ಉದ್ದೇಶಪೂರ್ವಕವಾಗಿ  ಅಥವಾ ತಿಳಿದು ತಿಳಿಯದಂತೆ ನಟಿಸಿ ಎದುರಾಳಿಯ  ಪರವಾಗಿ  ನಿಂತು  ಸಹಾಯ ಮಾಡುವ ಸಂದರ್ಭಗಳಲ್ಲಿ