(ಲೇಖನ -82) ಅಧಿಕಾರಿಗಳು ಭ್ರಷ್ಟರಾದರೆ ವ್ಯವಸ್ಥೆಗಳು ಭ್ರಷ್ಟವಾಗಿರುತ್ತವೆ
(ಲೇಖನ -82) ಅಧಿಕಾರಿಗಳು ಭ್ರಷ್ಟರಾದರೆ ವ್ಯವಸ್ಥೆಗಳು ಭ್ರಷ್ಟವಾಗಿರುತ್ತವೆ, ಗ್ರಾಮ ಪಂಚಾಯತ್ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳ ಅದೀನದಲ್ಲಿ ಕೆಲಸ ಮಾಡುತ್ತಿರುವ ಕೆಲವು ಸರ್ಕಾರಿ ಕೆಲಸಗಾರರು ಬ್ರಷ್ಟಾಚಾರವನ್ನು ದೊಡ್ಡಮಟ್ಟದಲ್ಲಿ ನಡೆಯುವುದಕ್ಕೆ ತಮ್ಮ ತಮ್ಮ ಕೊಡುಗೆಯನ್ನು ನೀಡುತ್ತಾ ಬಂದು ಬರುತ್ತಿರುವುದು ಬಹಳ ದುಃಖಕರವಾದ ಸಂಗತಿ. ಭ್ರಷ್ಟಾಚಾರ ಎಂಬುದನ್ನು ಯಾರಿಂದಲೂ ತೆಗೆದುಹಾಕಲು ಸಾಧ್ಯವಿಲ್ಲವೆಂಬ ಭಾವನೆಯೊಂದಿಗೆ ತನ್ನ ಸುತ್ತಲೂ ನಡೆಯುತ್ತಿರುವ ಅವ್ಯವಹಾರಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ಪಾಲಿಗೆ ಬಂದದ್ದು ಪಂಚಾಮೃತವೆನ್ನುತ್ತಾ ತನ್ನನ್ನು ತಾನು ಭ್ರಷ್ಟಾಚಾರಕ್ಕೆ ತಳ್ಳಿಕೊಂಡು ಐಷಾರಾಮದ ಜೀವನ ಮಾಡಲು ಪ್ರಯತ್ನ ಪಡುತ್ತಿರುವ ಅದೆಷ್ಟು ಸರ್ಕಾರಿ ನೌಕರರು. ಒಂದು ಆಫೀಸಿನಲ್ಲಿ ಸರಾಸರಿ 25 ಜನ ಕೆಲಸಗಾರರಿದ್ದರೆ ಅದರಲ್ಲಿ 20 ಜನ ತನ್ನನ್ನು ತಾನು ಭ್ರಷ್ಟಾಚಾರದಲ್ಲಿ ತೊಡಗಿಸಿಕೊಳ್ಳುವ ಅಧಿಕಾರಿ. ಕೇವಲ ಕೆಲವೇ ಕೆಲವು ಮಂದಿ ತಾನು ಮಾಡುತ್ತಿರುವ ನೌಕರಿಗೆ ಬೆಲೆ ಕೊಟ್ಟು ನ್ಯಾಯಯುತವಾಗಿ ಬದುಕನ್ನು ಸಾಗಿಸುತ್ತಾರೆ. ಹಣ ಕಂಡರೆ ಹೆಣವು ಬಾಯಿ ಬಿಡುತ್ತದೆ ಎಂಬ ಗಾದೆಯಂತೆ ಹೆಣವಾಗಿ ಅಧಿಕಾರಿಗಳು ಬಾಯ್ ಬಿಡುತ್ತಾ ಭಾರತದ ಸಂಪೂರ್ಣ ವ್ಯವಸ್ಥೆಗೆ ಮುಳುವಾಗ...