Posts

Showing posts from January, 2023

ನಗುನಗುತ್ತಾ ಕಣ್ಮರೆಯಾದ ನಮ್ಮ ಸಿಂಥಿಯ

Image
 ನಗುನಗುತ್ತಾ ಕಣ್ಮರೆಯಾದ ನಮ್ಮ ಸಿಂಥಿಯ. ಅವಳೊಂದು ಆಸ್ತಿ, ಸದಾ ಎಲ್ಲರನ್ನೂ ಗೌರವಿಸುತ್ತ, ನಮಸ್ಕಾರಿಸುತ್ತ, ಸದಾ ನಗುತ್ತಲೇ ಕೆಲಸಕ್ಕೆ ಆಗಮಿಸುತಿದ್ದಳು ಯಾರಿದ್ದರೂ ಕರೆದು ಮಾತನಾಡುವ ಅಭ್ಯಾಸದೊಂದಿಗೆ ತಂನ್ನೊಂದಿಗೆ ಇನ್ನೊಬ್ಬರನ್ನು ನಗಿಸಿ ಬಿಡುತಿದ್ದಳು. Hello How are you, how is you're health, how is you're family, ಕೆಲ್ಸದಲ್ಲಿ ಏನಾದರು ತೊಂದರೆಗಳು ಇದ್ಯಾ. ಹೇಗಿದೆ ನಮ್ಮ ಕಂಪನಿ, ಖುಷಿಯಾಗಿ ಇದ್ದೀರಾ! ನಿಮಗೇನಾದರೂ ಸಹಾಯ ಬೇಕಿದ್ದಲ್ಲಿ ಕೇಳಿ ಎಂದು ಬಂದಾಗಲೆಲ್ಲ ಹೇಳುತಿದ್ದ ಸಿಂಥಿಯ ಒಮ್ಮೆಲೆ ಕಣ್ಮರೆಯಾದಳು. ನಾಲ್ಕು ದಿನದ ಬದುಕು, ಬದುಕಿರುವಷ್ಟು ದಿನ ನಗುತ್ತಾ ಬದುಕಬೇಕು, ನಾಳೆ ಎಂಬುದು ಇದೆಯೋ ಇಲ್ಲವೋ ನಮಗೆ ತಿಳಿಯದು. ನಮ್ಮೆಲ್ಲರ ಜೀವ ನೀರ ಮೇಲಿನ ಗುಳ್ಳೆಯಂತೆ, ಸದಾ ಪ್ರೀತಿ ಗೌರವದಿಂದ ಬದುಕು, ಸಾಧ್ಯ ವಾದರೆ ಉಪಕರಿಸು,ಅಪಕಾರ ಮಾಡಬೇಡ ಎಂಬುದನ್ನು ಅರಿತಿದ್ದ ಅವಳು ತನ್ನ ಜೀವನದಲ್ಲಿ ಸಾಧ್ಯವಾದಷ್ಟು ಮಾಡಿ ನಮಗೆಲ್ಲರಿಗೂ ಮಾದರಿಯಾಗಿಬಿಟ್ಟಳು.      ನಾವು ಹೆಚ್ಚಿನ ಸಮಯ ಆಫೀಸಿನಲ್ಲಿ ಇಲ್ಲದಿದ್ದರೂ, ಅವರು ಸಿಕ್ಕಿದಾಗ ಸಿಗುವ ಗೌರವ ನಮ್ಮನ್ನು ಸಂತೋಷಗೋಳಿಸುತಿತ್ತು. ಸಿಂಥಿಯ ಬಂದಳೆಂದರೆ ಎಲ್ಲರಿಗೂ ಖುಷಿ, ಸಿಂಥಿಯಾ ನಮ್ಮ ಆಫೀನಲ್ಲಿ ಪ್ರತಿಯೊಬ್ಬರನ್ನು ಮಾತನಾಡಿಸುತಿದ್ದಳು, ಮಾಧವ ಕಳೆದ ವರುಷ ದೀಪಾವಳಿ ಹಬ್ಬಕ್ಕೆ ಮಾಡಿದ ಗೂಡು ದೀಪ ಚೆನ್ನಾಗಿತ್ತು, ಈ ಸಲ ದೀಪಾವಳಿ ತುಂಬಾ ಚೆನ್...