ಸದ್ದು ಬೇಡ (ಕವನ 4)
ಸದ್ದು ಮಾಡಬೇಡ ******†****** ಹಾರಾಡು ಹಕ್ಕಿಯಂತೆ ಹೋರಾಡು ಹುಲಿಯಂತೆ ಜೀವಿಸುತಿರು ರಾಜನಂತೆ ಏನೇ ಬರಲಿ ಏನೇ ಇರಲಿ ಘರ್ಜಿಸುತಿರು ಸಿಂಹದಂತೆ ನಿನಗ್ಯಾರು ಸಮರಿಲ್ಲ ಈ ಲೋಕಕೆ ಮಿತಿಯಿಲ್ಲ ಹಾಯಾಗಿ ಬದುಕುತಿರು ಬಿರುಗಾಳಿಗೂ ಅಲುಗಾಡದಿರು ಗದರಿಕೆಗೆ ಬೆದರದಿರು ನಾಳೆಎಂಬುದ ಅರಿತವರಿಲ್ಲ ಗೆದ್ದು ಬಿದ್ದವರೂ ಉಳಿಯಲಿಲ್ಲ ಸದ್ದು ಮಾಡುವ ಕೊಡವಾಗದೆ ತುಂಬಿದ ಹೃದಯದ ಮನುಜ ನೀನಾಗಿರು! - ಮಾಧವ ಅಂಜಾರು