ಪ್ರಪಂಚವನರಿಯೋಕೆ
ಪ್ರಪಂಚವನರಿಯೋಕೆ ಎನ ಜೀವನ ಸಾಲದು ಪ್ರಪಂಚವನು ತಿದ್ದೋಕೆ ಎನ ಪ್ರಯತ್ನವು ಸಾಲದು ಸತ್ಯಧರ್ಮದ ಬದುಕು ನಿಲ್ಲಿಸಲಂತೂ ಆಗದು ಸಾಕಿ ಸಲಹೆನ್ನ ದೇವಾ ನಿನ್ನ ಬಿಟ್ಟು ಈ ಭುವಿಯ ಹುಲುಕಡ್ಡಿಯುಅಲುಗಾಡ ದು ಇಂದಿಗಿರೋ ನೀನು ಮುಂದಿಗೂ ಇರುವೆ ನೀನು ಎಂದಿಗೂ ಬರುವ ಕಷ್ಟಕೆ ಸುರಕ್ಷೆಯ ಪದರವೇ ನೀನು ಆಗು ಹೋಗುಗಳು ವಿವಿಧ ನಿನ್ನ ನಂಬಿದ ಜನಕೆ ಸಲಹು ತುಳಿದು ಬಾಳೋ ಜೀವ ಅರಿಯದು ಮತ್ತವರ ನೋವ ಅಳೆದು ತೊಳೆದುಬಿಡು ಅನ್ಯಾಯದ ಗೂಡನು ಉಳಿಸಿ ತೋರಿಸಿಬಿಡು ನ್ಯಾಯದ ಬಾಗಿಲನು ಜಯವಾಗಲಿ ಜಯವಾಗಲಿ ಭಕ್ತ ನಿನಗೆ ಕೈಜೋಡಿಸುವೆನು ✍️ಮಾಧವ ಅಂಜಾರು 🙏🌹