ನನ್ನ ಮನವೇ
ನನ್ನ ಮನವೇ ಮನವೇ ಓ ನನ್ನ ಮನವೇ .. ಕುಣಿದಾಡು ಓ ಮನವೇ ... ನೊಂದ ಹೃದಯಕೆ ನೀ ಬಲವಾಗು ಜಗದಿ ನಡೆವಾಟಕೆ ದನಿಯಾಗು ಸುಖ ಸಂತೋಷದ ಬಾಳಲಿ ನೀನು ಜೇನಿನ ಹನಿಯ ಸವಿಯಾಗು ಮನವೇ ಓ ನನ್ನ ಮನವೇ .. ಕುಣಿದಾಡು ಓ ಮನವೇ ... ಅಂಧರ ಕಣ್ಣಿಗೆ ಬೆಳಕು ನೀನಾಗು .. ಪ್ರೀತಿ ತೋರೋ ಜನಕೆ ಒಳಿತಾಗು ಬಾಳು ....ಬಲು ನಿಖರ ... ನಿರಾಧಾರ .... ನಿರಾಧಾರ ಮನವೇ ಓ ನನ್ನ ಮನವೇ .. ಕುಣಿದಾಡು ಓ ಮನವೇ ... ಸ್ನೇಹವ ಬೆಸೆದು ಒಂದಾಗು ನೀ .. ಬಾಳಲಿ ಎಂದಿಗೂ ಸ್ಥಿರವಾಗು ಬಿಸಿಯುಸಿರ ಜೀವಕೆ ತಂಗಾಳಿಯಾಗು ಕರುಣೆಯ ಹೃದಯಕೆ ಸ್ನೇಹಿತನಾಗು ಮನವೇ ಓ ನನ್ನ ಮನವೇ .. ಕುಣಿದಾಡು ಓ ಮನವೇ ... ಬಾಳು ....ಬಲು ನಿಖರ ... ನಿರಾಧಾರ .... ನಿರಾಧಾರ ಮನವೇ ಓ ನನ್ನ ಮನವೇ .. ಕುಣಿದಾಡು ಓ ಮನವೇ ... - ಅಂಜಾರು ಮಾಧವ ನಾಯ್ಕ್